SportsKannada | ಸ್ಪೋರ್ಟ್ಸ್ ಕನ್ನಡ

ಕೊಲ್ಲಿ ರಾಷ್ಟ್ರದಲ್ಲಿ ವಿಜಯದುಂಧುಭಿ ಮೊಳಗಿಸಿದ ಆಟೋಡೀಲ್ ಮೂಡಬಿದಿರೆ- ಕರ್ನಾಟಕ ಪ್ರೀಮಿಯರ್ ಲೀಗ್ ನ ವಿನೂತನ ಚಾಂಪಿಯನ್ಸ್.

ಕೊಲ್ಲಿ ರಾಷ್ಟ್ರದಲ್ಲಿ ವಿಜಯದುಂಧುಭಿ ಮೊಳಗಿಸಿದ
ಆಟೋಡೀಲ್ ಮೂಡಬಿದಿರೆ- ಕರ್ನಾಟಕ ಪ್ರೀಮಿಯರ್ ಲೀಗ್ ನ ವಿನೂತನ ಚಾಂಪಿಯನ್ಸ್.

ಕೋಸ್ಟಲ್ ಫ್ರೆಂಡ್ಸ್ ದುಬೈ ಆಶ್ರಯದಲ್ಲಿ
ಅಲ್ ಹಮ್ರಿಯಾ ಕಲ್ಚರಲ್ & ಸ್ಪೋರ್ಟ್ಸ್ ಕ್ಲಬ್ ಅಜ್ಮನ್ ದುಬೈನ ಅಂಗಣದಲ್ಲಿ ನಿನ್ನೆ ನಡೆದ
ಹಗಲು ರಾತ್ರಿಯ
ಕೊಲ್ಲಿ ರಾಷ್ಟ್ರದ ಅತ್ಯಂತ ವೈಭವೋಪೇತ ಪಂದ್ಯಾವಳಿ ಎಂದೇ ಖ್ಯಾತಿ ಪಡೆದ “ಕರ್ನಾಟಕ ಪ್ರೀಮಿಯರ್ ಲೀಗ್” ಕೆ.ಪಿ.ಎಲ್- ಸೀಸನ್ 2″ ನ್ನು ಆಟೋಡೀಲ್ ಮೂಡಬಿದಿರೆ ಜಯಿಸಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿತು.

ಪ್ರತಿಷ್ಟಿತ ಪ್ರಶಸ್ತಿಗಾಗಿ 8 ಫ್ರಾಂಚೈಸಿಗಳು ಸೆಣಸಾಡಿದ್ದವು.
ಲೀಗ್ ಹಂತದ ರೋಚಕ ಕದನಗಳ ಬಳಿಕ ಅಂತಿಮವಾಗಿ,
ಮೊದಲ ಕ್ವಾಲಿಫೈಯರ್ ಸುತ್ತಿನಲ್ಲಿ
ಆಟೋಡೀಲ್ ತಂಡ ಕಳೆದ ಸಾಲಿನ ಚಾಂಪಿಯನ್ ಹೀಟ್ ಶೀಲ್ಡ್ ಗ್ಲಾಡಿಯೇಟರ್ಸ್ ಶಿಮಂತೂರು ತಂಡವನ್ನು ಸೋಲಿಸಿ ನೇರವಾಗಿ ಫೈನಲ್ ಪ್ರವೇಶಿಸಿತ್ತು.

ಎಲಿಮಿನೇಟರ್ ಸುತ್ತಿನಲ್ಲಿ ಚಕ್ರವರ್ತಿ ಕುಂದಾಪುರ ತಂಡವನ್ನು ಸೋಲಿಸಿದ ಗಂಗೊಳ್ಳಿ ಸ್ಟ್ರೈಕರ್ಸ್
ಎರಡನೇ ಕ್ವಾಲಿಫೈಯರ್ ಸುತ್ತು ಪ್ರವೇಶಿಸಿದರೂ, ಹೀಟ್ ಶೀಲ್ಡ್ ಗ್ಲಾಡಿಯೇಟರ್ಸ್ ತಂಡದೆದುರು ಪರಾಭವಗೊಂಡಿತು.

ಫೈನಲ್ ನಲ್ಲಿ ಆಟೋಡೀಲ್ ಮೂಡಬಿದಿರೆ,ಹೀಟ್ ಶೀಲ್ಡ್ ಗ್ಲಾಡಿಯೇಟರ್ಸ್ ವಿರುದ್ಧ 9 ವಿಕೆಟ್ ಗಳ ಅನಾಯಾಸ ಗೆಲುವು ಸಾಧಿಸಿತು.

ವಿಜೇತ ತಂಡ ಗರಿಷ್ಠ ನಗದು ಬಹುಮಾನ‌ ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರು.

ವೈಯಕ್ತಿಕ ಪ್ರಶಸ್ತಿಯಾಗಿ
ಫೈನಲ್ ನ ಪಂದ್ಯಶ್ರೇಷ್ಟ ಆಟೋಡೀಲ್ ನ ಮಿಥುನ್ ಶೆಟ್ಟಿ,
ಟೂರ್ನಿಯ ಬೆಸ್ಟ್ ಬೌಲರ್ ಹೀಟ್ ಶೀಲ್ಡ್ ನ ವಿನಯ್,ಬೆಸ್ಟ್ ಬ್ಯಾಟ್ಸ್‌ಮನ್ ಚಕ್ರವರ್ತಿಯ ಗುರು ಪ್ರಸಾದ್, ಬೆಸ್ಟ್ ವಿಕೆಟ್ ಕೀಪರ್ ಹೀಟ್ ಶೀಲ್ಡ್ ನ ಹಮ್ದಾನ್,ಪಂದ್ಯಾವಳಿಯುದ್ದಕ್ಕೂ ಶ್ರೇಷ್ಠ ನಿರ್ವಹಣೆ ತೋರಿದ ಆಟೋ ಡೀಲ್ ನ ಮಿಥುನ್ ಶೆಟ್ಟಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೆ,
ಫೇರ್ ಪ್ಲೇ ಪ್ರಶಸ್ತಿ ಡಿ.ಜೆ‌.ಚಾಲೆಂಜರ್ಸ್ ಪಾಲಾಯಿತು.

ವರ್ಣರಂಜಿತ ಸಮಾರೋಪ ಸಮಾರಂಭದಲ್ಲಿ ಆಟೋಡೀಲ್ ಮಾಲೀಕ ಸೈಯ್ಯದ್ ಫೈಝಲ್,ಕಾಪು ಫ್ರೆಂಡ್ಸ್ ನ ಮೊಹಮ್ಮದ್ ಶಫಿ,
ಡಿ.ಜೆ ಚಾಲೆಂಜರ್ಸ್ ಪಡೀಲ್ ನ ದೀಪಕ್,ಹೀಟ್ ಶೀಲ್ಡ್ ಗ್ಲಾಡಿಯೇಟರ್ಸ್ ನ ಪ್ರೇಮನಾಥ್ ಶೆಟ್ಟಿ, ಅಲ್ ಸಿತಾರಾದ ಪರ್ವೇಜ್,ಗ್ಲೋಬಲಿಂಕ್ ವೆಸ್ಟರ್ನ್ ನ ಸಮೀರ್ ,ಕೋಸ್ಟಲ್ ಫ್ರೆಂಡ್ಸ್ ನ ಸದಸ್ಯರು ಉಪಸ್ಥಿತರಿದ್ದರು.

ಪ್ರಸಿದ್ಧ ಕನ್ನಡ ವೀಕ್ಷಕ ವಿವರಣೆಕಾರ ಸತೀಶ್ ಮಣಿಪಾಲ್ ಕಾರ್ಯಕ್ರಮ ನಿರೂಪಣೆಗೈದರು.
ಪಂದ್ಯಾವಳಿಯ ನೇರ ಪ್ರಸಾರವನ್ನು ನಮ್ಮ ಕುಡ್ಲ ಹಾಗೂ ಯೂಟ್ಯೂಬ್ ಚಾನೆಲ್ ಬಿತ್ತರಿಸಿದರೆ,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಸಹಕರಿಸಿತ್ತು.
ಆರ್.ಕೆ.ಆಚಾರ್ಯ ಕೋಟ.

Exit mobile version