
ಯೋಗದಿಂದ ಗೋಸೇವೆ-ಕಾಮಧೇನು ಗೋಶಾಲೆಯ ಅನಾಥ ಗೋವುಗಳ ಪಾಲನೆಗೆ ಯೋಗರತ್ನ ತನುಶ್ರೀ ಪಿತ್ರೋಡಿ 300 ಯೋಗಾಸನ ಪ್ರದರ್ಶನ
ಕಾಮಧೇನು ಗೋಶಾಲೆ ಮಹಾಸಂಘ ಟ್ರಸ್ಟ್(ರಿ)ನಂಚಾರು ಇಲ್ಲಿರುವ ಗೋವುಗಳಿಗಾಗಿ 12 ನೇ ವಿಶ್ವಯೋಗ ದಿನಾಚರಣೆಯ ಪ್ರಯುಕ್ತ “ಯೋಗದಿಂದ ಗೋಸೇವೆ” ಯೋಗರತ್ನ ತನುಶ್ರೀ ಪಿತ್ರೋಡಿ ಇವರಿಂದ 300 ಯೋಗಾಸನ ಪ್ರದರ್ಶನ ನಡೆಯಲಿದೆ.
ಈ ಪ್ರಯುಕ್ತ ಇಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ “ವೆಂಕಟರಮಣ ಸ್ಪೋರ್ಟ್ಸ್& ಕಲ್ಚರಲ್ ಕ್ಲಬ್(ರಿ)ಪಿತ್ರೋಡಿ ಇವರು ಆಯೋಜಿಸಿದ ” ವಿದ್ಯಾ ಬೆಳಕು” ಆಯ್ದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಪೋಸ್ಟರ್ ಅನಾವರಣ ಕಾರ್ಯಕ್ರಮ ನಡೆಯಿತು.
ಜೂನ್ 21 ರವಿವಾರ ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಉದ್ಯಾವರ ಬಿಲ್ಲವ ಮಹಾಜನ ಸಂಘ(ರಿ)
ದಲ್ಲಿ ಕಾರ್ಯಕ್ರಮ ನಡೆಯಲಿದೆ.
ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ಸ್(ರಿ) ಪಿತ್ರೋಡಿ, ಉದ್ಯಾವರ ಬಿಲ್ಲವ ಮಹಾಜನ ಸಂಘ(ರಿ) ಉದ್ಯಾವರ,ಅಭಿನಯ ಕಲಾವಿದರು ಉಡುಪಿ,ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ(ರಿ)ಬೆಂಗಳೂರು ಉಡುಪಿ ಜಿಲ್ಲಾ ಸಮಿತಿ,ಸ್ಪೋರ್ಟ್ಸ್ ಕನ್ನಡ ಉಡುಪಿ,ಸಂಧ್ಯೋದಯ ಉಡುಪಿ,ಯು.ಆರ್ ಸ್ಪೋರ್ಟ್ಸ್ ಮಣಿಪಾಲ,ಭಾರತ್ ಮಾರ್ಕೆಟಿಂಗ್ ಉಡುಪಿ ಮತ್ತು ಮಹಾಕಾಳಿ ಎಲೆಕ್ಟ್ರಿಕಲ್ಸ್ ಮತ್ತು ಪ್ಲಂಬಿಂಗ್ ಉಡುಪಿ ಈ ಎಲ್ಲಾ ಸಂಸ್ಥೆಗಳು ಕೈ ಜೋಡಿಸಲಿವೆ.
ಪೋಸ್ಟರ್ ಅನಾವರಣ ಕಾರ್ಯಕ್ರಮದಲ್ಲಿ ವೆಂಕಟರಮಣ ಸಂಸ್ಥೆಯ ಗೌರವಾಧ್ಯಕ್ಷರಾದ ಜಿತೇಂದ್ರ ಶೆಟ್ಟಿ ಉದ್ಯಾವರ, ಅಧ್ಯಕ್ಷರಾದ ಸಂದೀಪ್ ಕುಮಾರ್,ಸತೀಶ್ ಕುಂದರ್, ವಿಜಯ್ ಕೋಟ್ಯಾನ್,
ಗಂಗಾಧರ್ ಕರ್ಕೇರಾ,ಕೋಟ ರಾಮಕೃಷ್ಣ ಆಚಾರ್,ಪ್ರವೀಣ್ ಪಿತ್ರೋಡಿ, ಯೋಗರತ್ನ ತನುಶ್ರೀ ಪಿತ್ರೋಡಿ ಇನ್ನಿತರರು ಉಪಸ್ಥಿತರಿದ್ದರು.ಉದಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
