Site icon SportsKannada ಸ್ಪೋರ್ಟ್ಸ್ ಕನ್ನಡ

ದಶಮಾನೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಗಿ “ವಿಶ್ವಕರ್ಮ ಟ್ರೋಫಿ 2025”.

ದಶಮಾನೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಗಿ “ವಿಶ್ವಕರ್ಮ ಟ್ರೋಫಿ 2025”.

ಉಡುಪಿ ಜಿಲ್ಲಾ ವಿಶ್ವಕರ್ಮ ಕಾರ್ಪೆಂಟರ್ ಯೂನಿಯನ್ (ರಿ) ಉಡುಪಿ ಇದರ ದಶಮಾನೋತ್ಸವದ ಸಂಭ್ರಮಕ್ಕಾಗಿ ” ವಿಶ್ವಕರ್ಮ ಟ್ರೋಫಿ – 2025″ ಸೀಮಿತ ಓವರುಗಳ ಕ್ರಿಕೆಟ್ ಪಂದ್ಯಾಟ ಇದೇ ಬರುವ ಮೇ 18 ರಂದು ಕುಂಜಿಬೆಟ್ಟು ಎಂ ಜಿ ಎಂ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ. ವಿಶ್ವಕರ್ಮ ಅಶಕ್ತ ಸಮಾಜ ಬಾಂಧವರ ಕ್ಷೇಮಾಭಿವೃದ್ಧಿ ನಿಧಿಗಾಗಿ ಈ ಕ್ರೀಡೆಯನ್ನು ಆಯೋಜಿಸಲಾಗಿದ್ದು, ಇದರ ಉದ್ಘಾಟನೆಯನ್ನು ಡಾ||ಬಳ್ಕೂರು ಗೋಪಾಲ ಆಚಾರ್ಯ ಅವರು ನೆರವೇರಿಸಲಿದ್ದಾರೆ.

ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಅಚ್ಚುತ್ತ ಆಚಾರ್ಯ ಮಧ್ವನಗರ, ಡಾ|| ಬಳ್ಕೂರು ಗೋಪಾಲ ಆಚಾರ್ಯ,ಸಂತೋಷ್ ಕರ್ನೆಲಿಯೋ,ವೆಂಕಟೇಶ್ ಆಚಾರ್ಯ, ಗಂಗಾಧರ್ ಎಂ,ನಿಟ್ಟೂರು ಗೋಪಾಲ ಆಚಾರ್ಯ ಉಪಸ್ಥಿತರಿರುವರು.

ಈ ಪಂದ್ಯಾವಳಿಯ ನೇರಪ್ರಸಾರ ಕರ್ನಾಟಕದ ಜನಪ್ರಿಯ ಕ್ರೀಡಾವಾಹಿನಿ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.

Exit mobile version