SportsKannada | ಸ್ಪೋರ್ಟ್ಸ್ ಕನ್ನಡ

ಉಡುಪಿ-“ಸಮಾಜಸೇವೆ ಚಿಂತನೆಯ ವಿಶ್ವಕರ್ಮ-ಹುಮ್ಯಾನಿಟಿ ಪಂದ್ಯಾಟದ ಆಯೋಜನೆ ಶ್ಲಾಘನೀಯ”-ವಾದಿರಾಜ್ ಆಚಾರ್ಯ ಏಳಿಂಜೆ

ವಿಶ್ವಕರ್ಮ ಸಮಾಜದ 5 ಬಡಕುಟುಂಬಗಳಿಗೆ ನೆರವಿನ ಹಸ್ತ ನೀಡುವ ಸದುದ್ದೇಶದಿಂದ,ಸ್ಕಾರ್ಪಿಯನ್ ಏಳಿಂಜೆ ತಂಡ ಆಯೋಜಿಸಿರುವ ವಿಶ್ವಕರ್ಮ ಹುಮ್ಯಾನಿಟಿ ಕಪ್ ಪಂದ್ಯಾಟ ನಿಜಕ್ಕೂ ಶ್ಲಾಘನೀಯ,ಸಮಾಜ ಬಾಂಧವರ ಸಂಪೂರ್ಣ ಸಹಕಾರ ಈ ತಂಡದ ಮೇಲಿರಲಿ ಎಂದು ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಹಿರಿಯ ಅಧಿಕಾರಿಗಳಾದ ಶ್ರೀ.ವಾದಿರಾಜ ಆಚಾರ್ಯ ಏಳಿಂಜೆ ಹೇಳಿದರು.
ಇವರು ಮಂಗಳವಾರ ಉಡುಪಿ ಸಮ್ಮರ್ ಪಾರ್ಕ್ ಹೋಟೆಲ್ ನಲ್ಲಿ ಜರುಗಿದ ವಿಶ್ವಕರ್ಮ ಪ್ರೀಮಿಯರ್‌ ಲೀಗ್ ಪಂದ್ಯಾಟದ ಟ್ರೋಫಿ ಅನಾವರಣ ಮತ್ತು ಆಟಗಾರರ ಆಕ್ಷನ್ ಪ್ರಕ್ರಿಯೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ವೆಂಕಟರಮಣ ಪಿತ್ರೋಡಿ ತಂಡದ ನಾಯಕರಾದ ಪ್ರವೀಣ್ ಪಿತ್ರೋಡಿ, ಉಡುಪಿ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷರಾದ ಕಿಶೋರ್ ಆಚಾರ್,ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಉಡುಪಿ ಜಿಲ್ಲೆ ಯುವಘಟಕಾಧ್ಯಕ್ಷರು ಮತ್ತು ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ನ‌ ಪ್ರವರ್ತಕರಾದ ಕೋಟ ರಾಮಕೃಷ್ಣ ಆಚಾರ್,ಟೂರ್ನಮೆಂಟ್ ನ ಪ್ರಮುಖ ಆಯೋಜಕರಾದ ಶಿವರಾಮ ಆಚಾರ್ ಏಳಿಂಜೆ,ರಾಜ್ಯ ಮಟ್ಟದ ಹಿರಿಯ ಆಟಗಾರರಾದ ಭಾಸ್ಕರ್ ಆಚಾರ್ ಉಡುಪಿ,ಶ್ರೀಮತಿ ದಿವ್ಯಾ ಶಿವರಾಮ್ ಆಚಾರ್,ಶ್ರೀಮತಿ ಆಶಾ ಭಾಸ್ಕರ್ ಆಚಾರ್
 ಮತ್ತು 12 ಫ್ರಾಂಚೈಸಿಗಳ ಮಾಲೀಕರು ಮತ್ತು ಐಕಾನ್ ಆಟಗಾರರು ಉಪಸ್ಥಿತರಿದ್ದರು.
ಸುಮನ್ ಆಚಾರ್ ಪ್ರಾರ್ಥನೆಗೈದರೆ,ಕಾರ್ಯಕ್ರಮ ನಿರೂಪಣೆ ಮತ್ತು ಆಕ್ಷನ್ ಪ್ರಕ್ರಿಯೆಯನ್ನು ರಾಜ್ಯ ಮಟ್ಟದ ವೀಕ್ಷಕ ವಿವರಣೆಕಾರರಾದ ರಾಘವೇಂದ್ರ ಮಟಪಾಡಿ ನಡೆಸಿಕೊಟ್ಟರು.
ವಿಶ್ವಕರ್ಮ ಪ್ರೀಮಿಯರ್‌ ಲೀಗ್-ಹುಮ್ಯಾನಿಟಿ ಕಪ್ ಏಪ್ರಿಲ್ 23 ಮತ್ತು 24 ರಂದು ಕಿನ್ನಿಗೋಳಿ ಐಕಳ ಶಕ್ತಿ ಕಲ್ಯಾಣಿ ಮೈದಾನದಲ್ಲಿ ನಡೆಯಲಿದ್ದು,M9 ಸ್ಪೋರ್ಟ್ಸ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಳ್ಳಲಿದೆ.
Exit mobile version