SportsKannada | ಸ್ಪೋರ್ಟ್ಸ್ ಕನ್ನಡ

ಶನಿವಾರದಿಂದ ವೈದಿಕರ ಕ್ರಿಕೆಟ್ ದರ್ಬಾರ್; ವಿ ಪಿ ಎಲ್ 2023 ರ ನಾಲ್ಕನೇಯ ಅಧ್ಯಾಯ

ವೈದಿಕ ಪ್ರೀಮಿಯರ್ ಲೀಗ್ 2023 ರ ನಾಲ್ಕನೇಯ ಆವೃತ್ತಿಯು ಬಂಟ್ವಾಳ ಸಮೀಪದ ಬರಿಮಾರು ಮಹಾಮಾಯ ದೇವಸ್ಥಾನದ ಮೈದಾನದಲ್ಲಿ ಶನಿವಾರದಿಂದ ಆರಂಭವಾಗಲಿದೆ. ವೈದಿಕರಿಂದ, ವೈದಿಕರಿಗಾಗಿ, ವೈದಿಕರಿಗೋಸ್ಕರ  ಈ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದ್ದು ಮಾರ್ಚ್ 18-19ಕ್ಕೆ ಕ್ರಿಕೆಟ್ ಪಂದ್ಯಾಟವನ್ನು ಯಶಸ್ವಿಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಮಾರ್ಚ್ 18ರಂದು ಕ್ರಿಕೆಟ್ ಲೀಗ್‍ಗೆ ಚಾಲನೆ ಸಿಗಲಿದೆ. ಟೂರ್ನಿಯಲ್ಲಿ 8 ತಂಡಗಳು ಭಾಗವಹಿಸುತ್ತಿವೆ.
” ಕ್ರಿಕೆಟ್ ಅಭಿಮಾನಿಗಳಿಂದ ನಮಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕ್ರಿಕೆಟ್ ಪಂದ್ಯಾವಳಿ ನಡೆಸಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ” ಎಂದು ಪಂದ್ಯಾಟದ ರೂವಾರಿಗಳು  ಪಂಡಿತ್ ಕಾಶಿನಾಥ ಆಚಾರ್ಯ  ಮಂಗಳೂರು ಇವರು ಹೇಳಿದರು . ಎಂದಿನಂತೆ ಬರಿಮಾರು ಮಹಾಮಾಯ ದೇವಸ್ಥಾನದ ಮೈದಾನದಲ್ಲಿ ಪಂದ್ಯಾವಳಿಗೆ ಚಾಲನೆ ನೀಡಲಾಗಿದ್ದು, ಇಲ್ಲಿಯೇ ಪಂದ್ಯಾವಳಿ ನಡೆಯಲಿದೆ.
ಎರಡು  ದಿನಗಳ ಪಂದ್ಯಾವಳಿಯನ್ನು ಆಯೋಜಿಸುವ ಗುರಿಯು  ವೈದಿಕ ಕುಟುಂಬದಲ್ಲಿ ಕ್ರೀಡಾ ಮನೋಭಾವವನ್ನು ಉತ್ತೇಜಿಸುವುದು  ಮತ್ತು ಇದು ಬರೇ ಕ್ರಿಕೆಟ್ ಮಾತ್ರವಲ್ಲಇದೊಂದು  ವೈದಿಕರ ಸಮ್ಮಿಲನ.
ಈ ಬಾರಿಯ ಟೂರ್ನಿಯನ್ನು ಅಗ್ರ ವೈದಿಕರು ಹಾಗೂ ಗಣ್ಯಾತಿ ಗಣ್ಯರು ಉದ್ಘಾಟಿಸಲಿದ್ದಾರೆ. ಉದ್ಘಾಟನೆಯ ನಂತರ ಪಂದ್ಯಗಳು  ನಡೆಯಲಿದ್ದು, ಪಂದ್ಯಾವಳಿಯು ಮಾರ್ಚ್ 19 ರಂದು ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.
ಈ ಬಾರಿ  VPL ಟ್ರೋಫಿಗಾಗಿ 8 ತಂಡಗಳು ಪೈಪೋಟಿ ನಡೆಸಲಿವೆ.
ಚರಣ್ ಭಟ್ರ  Bhatji Avengers
ವಿಠ್ಠಲ್ ಭಟ್ರ  Veera Vaidika cricketers
ಸುಧೇಶ್ ಭಟ್ರ  Bhatji’ಸ್ Super Kings
ಬಿ ರಾಕೇಶ್ ಪ್ರಭುರವರ  Mahamaya cricketers Barimaru
ಹರೀಶ್ ಭಟ್ರ  Rocking Vaidiks Mumbai
ಭರತ್ ಭಟ್ರ  Anant Vaidiks
ಗೋಪಾಲ್ ಭಟ್ರ  Vaidik Gladiators
ರಂಜಿತ್ ಭಟ್ರ  Bhat Brothers
ಟೂರ್ನಿಗೆ ಪ್ರಾಕ್ಟೀಸ್ ನಡೆಯುತ್ತಿದ್ದು, 8 ತಂಡಗಳ ಪ್ಲೇಯರ್ಸ್ ಗಳು ಪ್ರಾಕ್ಟೀಸ್ ಮಾಡುತ್ತಿದ್ದಾರೆ.  ವಿಜೇತರು ಮತ್ತು ಉತ್ತಮ ಆಟಗಾರರಿಗೆ ಆಕರ್ಷಕ ಬಹುಮಾನದೊಂದಿಗೆ ಟ್ರೋಫಿಗಳನ್ನು ನೀಡಲಾಗುತ್ತದೆ.
ಕಳೆದ ಮೂರೂ VPL ಸೀಸನ್ ಗಳು ಭರ್ಜರಿ ಯಶಸ್ಸಿನೊಂದಿಗೆ ನಡೆದು ನಾಲ್ಕನೆಯ ಸೀಸನ್ ಅನ್ನು ಬರುವ ವಾರಾಂತ್ಯದಲ್ಲಿ ಪ್ರಾರಂಭಿಸಲು ನಿರ್ಧರಿಸಿದ್ದಾರೆ.  ಪಂಡಿತ್ ಕಾಶಿನಾಥ ಆಚಾರ್ಯ ಇವರ ಸಂಯೋಜನೆಯಲ್ಲಿ ಬಹುನಿರೀಕ್ಷಿತ ವಿಪಿಎಲ್ ಪಂದ್ಯಾವಳಿ ಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇವೆ.
ಬಿ ರಾಕೇಶ್ ಪ್ರಭು, ಅನುವಂಶಿಕ ಮೊಕ್ತೇಸರರು ಹಾಗೂ ಧರ್ಮದರ್ಶಿಗಳು ಶ್ರೀ ಮಹಮ್ಮಾಯ ದೇವಸ್ಥಾನ ಬರಿಮಾರು ಈ VPL ಟೂರ್ನಮೆಂಟ್ ನ ಪ್ರಮುಖ ಪ್ರೋತ್ಸಾಹಕರು ಆಗಿರುತ್ತಾರೆ.
 ಕಳೆದ ಬಾರಿ VPLಮೂರನೇ ಆವೃತ್ತಿಯಲ್ಲಿ ಭಟ್ಜಿಸ್ ಸೂಪರ್ ಕಿಂಗ್ಸ್ ತಂಡ ಗೆಲುವು ಸಾಧಿಸಿತ್ತು. ಈ ಬಾರಿ ಯಾರು ಕಪ್ ಗೆಲ್ಲುತ್ತಾರೋ ಕಾದು ನೋಡಬೇಕು.
ಬರಿಮಾರು ಮಹಾಮಾಯ ದೇವಸ್ಥಾನದ  ಗ್ರೌಂಡ್ ಅಭಿಮಾನಿಗಳಿಂದ ತುಂಬಿರುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ.
ಆಟ ಶುರುವಾಗಲಿ!
ಅಂಕಣಕಾರರು
ಸುರೇಶ್ ಭಟ್ ಮೂಲ್ಕಿ
Exit mobile version