SportsKannada | ಸ್ಪೋರ್ಟ್ಸ್ ಕನ್ನಡ

ಪ್ರವೇಶ ಶುಲ್ಕ ರಹಿತ-ಗರಿಷ್ಟ ಬಹುಮಾನ-ಎತ್ತರದ ಟ್ರೋಫಿಗಳು-ದಾಖಲೆ ಸೃಷ್ಟಿಸಿದ್ದ ಅನ್ಪ್ರೆಡಿಕ್ಟೇಬಲ್ ಕೆ.ಆರ್.ಪುರಂ

ರಾಘವೇಂದ್ರ ಎನ್‌.ಜಿ ಸಾರಥ್ಯದಲ್ಲಿ
ಪ್ರವೇಶ ಶುಲ್ಕ ರಹಿತ-ಗರಿಷ್ಟ ಬಹುಮಾನ-ಎತ್ತರದ ಟ್ರೋಫಿಗಳು-ಕಳೆದ ಋತುವಿನಲ್ಲಿ ದಾಖಲೆ ಸೃಷ್ಟಿಸಿದ್ದ ಅನ್ಪ್ರೆಡಿಕ್ಟೇಬಲ್ ಕೆ.ಆರ್.ಪುರಂ.

ರಾಜ್ಯ ಟೆನ್ನಿಸ್ ಬಾಲ್ ಕ್ರಿಕೆಟ್ ಚರಿತ್ರೆಯಲ್ಲಿ ಪ್ರಪ್ರಥಮ ಬಾರಿಗೆ ಕಳೆದ ಋತುವಿನಲ್ಲಿ ಐತಿಹಾಸಿಕ ಪಂದ್ಯಾಟವೊಂದು ದಾಖಲಾಯಿತು.
ಪ್ರಪ್ರಥಮ ಬಾರಿಗೆ ಪ್ರವೇಶ ದರ ರಹಿತ ಪಂದ್ಯಾಟ ಗರಿಷ್ಟ ಮೊತ್ತದ ಪ್ರಶಸ್ತಿಯೊಂದಿಗೆ ಏರ್ಪಟ್ಟಿತ್ತು.

2010 ರ ಆಸುಪಾಸಿನಲ್ಲಿ ಬಲಿಷ್ಟ ತಂಡಗಳನ್ನು ಅನಾಯಾಸವಾಗಿ ಮಣಿಸುತ್ತಿದ್ದ 2010 ರ ಆಸುಪಾಸಿನ
ಶ್ರೇಷ್ಠ ತಂಡವಾಗಿದ್ದ “Unpredictable Bangalore
K.R Puram) ತಂಡದ ಅಗಲಿದ ಪ್ರತಿಭಾನ್ವಿತ ಆಲ್ ರೌಂಡರ್ ವಿಭೂಷಣ್ (ಆಪ್ಲಾ) ಇವರ ಸ್ಮರಣಾರ್ಥ
” Vibhushan Memorial Cup-2019″
ಅಬುಧಾಬಿಯಲ್ಲಿದ್ದರೂ,
ಪಂದ್ಯಾವಳಿ ಸಂಘಟನೆಗೆ ಆಗಮಿಸಿದ್ದ ಶ್ರೀ ರಾಘವೇಂದ್ರ ಎನ್‌.ಜಿ (Unpredictable)ರವರ ದಕ್ಷ ಸಾರಥ್ಯದಲ್ಲಿ,ಲೆದರ್ ಬಾಲ್ ಕ್ರಿಕೆಟಿಗ ಸಂತೋಷ್ ಕುಮಾರ್ ಸಿಂಗ್,ಆರ್.ಭರತ್ ಕುಮಾರ್ ಸಹಕಾರದೊಂದಿಗೆ,
ಕೆ.ಆರ್.ಪುರಂ ನ ಐ.ಟಿ.ಐ ಗ್ರೌಂಡ್ ನಲ್ಲಿ
ಒಂದು ದಿನದ ಹಗಲಿನ ರಾಜ್ಯ ಮಟ್ಟದ ಪಂದ್ಯಾಟ ನಡೆಸಿತ್ತು.

ಉಡುಪಿಯ ರಿಯಲ್ ಫೈಟರ್ಸ್ ಮಲ್ಪೆ,
ಜೈ ಕರ್ನಾಟಕ ಬೆಂಗಳೂರು,ಎಸ್.ಝಡ್.ಸಿ.ಸಿ,
ಫ್ರೆಂಡ್ಸ್ ಬೆಂಗಳೂರು ಸಹಿತ 8 ತಂಡಗಳು ಕುತೂಹಲಕಾರಿ ಹಣಾಹಣಿಗಿಳಿದಿತ್ತು‌.
ಲೀಗ್ ಸಮರದ ಬಳಿಕ ಯುವ ಕ್ರಿಕೆಟಿಗರ ಪಡೆ ರಾಕರ್ಸ್ ಬೆಂಗಳೂರು ತಂಡ ದಾವಣಗೆರೆ ತಂಡವನ್ನು ಸೋಲಿಸಿ,
ಹಾಗೂ ಬಲಿಷ್ಠ ನ್ಯಾಶ್ ತಂಡ ರಿಯಲ್ ಫೈಟರ್ಸ್ ಮಲ್ಪೆ ತಂಡವನ್ನು ಸೋಲಿಸಿ ಫೈನಲ್ ಗೆ ನೆಗೆದಿದ್ದರು.

ಫೈನಲ್ ನಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಕರ್ಸ್ ತಂಡ 4 ಓವರ್ ಗಳಲ್ಲಿ 20 ರನ್ ಗಳಿಸಿದರೆ, ಸುಲಭದ ಗುರಿ ಬೆನ್ನತ್ತಿದ ನ್ಯಾಶ್ ತಂಡ
3 ಓವರ್ ಗಳಲ್ಲಿ ವಿಜಯದ ಗುರಿಯನ್ನು ಸಾಧಿಸಿದರು.

ವಿಜಯೀ ನ್ಯಾಶ್ ತಂಡ 1,00,000 ರೂ ನಗದು ಸಹಿತ ಟೆನ್ನಿಸ್ ಬಾಲ್ ಇತಿಹಾಸದ ಅತಿ ಎತ್ತರದ
10 ಫೀಟ್ ಎತ್ತರದ ಟ್ರೋಫಿಯನ್ನು ,
ರನ್ನರ್ಸ್ ತಂಡ ರಾಕರ್ಸ್ 50,000 ಸಾವಿರ ರೂ ನಗದು
ಸಹಿತ 7 ಫೀಟ್ ಎತ್ತರದ ಟ್ರೋಫಿಯನ್ನು ಪಡೆದುಕೊಂಡರು. ಸರಣಿಯುದ್ದಕ್ಕೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ನ್ಯಾಶ್ ನ ಅಕ್ಷಯ್.ಸಿ.ಕೆ
ಸರಣಿ ಶ್ರೇಷ್ಟ ಪ್ರಶಸ್ತಿ ರೂಪದಲ್ಲಿ ಆಕರ್ಷಕ ವಾಚ್ ಪಡೆದುಕೊಂಡಿದ್ದರು

ಈ ಪಂದ್ಯಾಟದ ನೇರ ಪ್ರಸಾರವನ್ನು “M.Sports” ಬಿತ್ತರಿಸಿತ್ತು. ತೀರ್ಪುಗಾರರಾಗಿ ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ಸಂಗಡಿಗರು,
ವೀಕ್ಷಕ ವಿವರಣೆಕಾರರಾಗಿ ಪ್ರಶಾಂತ್ ಅಂಬಲಪಾಡಿ,ವಿನಯ್ ಉದ್ಯಾವರ್ ಸಹಕರಿಸಿದ್ದರು.
ಆರ್.ಕೆ.ಆಚಾರ್ಯ ಕೋಟ…

Exit mobile version