SportsKannada | ಸ್ಪೋರ್ಟ್ಸ್ ಕನ್ನಡ

ಉಡುಪಿ-T.C.A ಪ್ರಾಯೋಜಿತ ಕುಂದಾಪುರ-ಬ್ರಹ್ಮಾವರ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ

ಟೆನಿಸ್ಬಾಲ್ ಕ್ರಿಕೆಟ್ ಶ್ರೇಯೋಭಿವೃದ್ಧಿಗಾಗಿ ಉಡುಪಿ ಜಿಲ್ಲೆಯ ಸಮಾನ ಮನಸ್ಕ ಹಿರಿಯ ಆಟಗಾರರು,
ಕ್ರೀಡಾಪ್ರೋತ್ಸಾಹಕರ ಸಮಾಗಮದಲ್ಲಿ ಪ್ರವರ್ಧಮಾನಕ್ಕೆ ಬಂದ ಉಡುಪಿ ಜಿಲ್ಲೆ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಪ್ರಾಥಮಿಕ ಹಂತದ ಯೋಜನೆಯಂತೆ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ ಈಗಾಗಲೇ  ತಾಲೂಕು (ಕಾರ್ಕಳ,ಉಡುಪಿ,ಕಾಪು, ಬೈಂದೂರು,ಹೆಬ್ರಿ) ತಾಲೂಕುಗಳಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿರುತ್ತದೆ.
ಇದೀಗ 2 ನೇ ಅತಿ ಹೆಚ್ಚು ಆಟಗಾರರ ನೋಂದಣಿ
(223 ಆಟಗಾರರು)ಭಾಗವಹಿಸಿದ ಕುಂದಾಪುರ ತಾಲೂಕು ಮತ್ತು ಬ್ರಹ್ಮಾವರ(154el ಆಟಗಾರರು) ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ ಮಾರ್ಚ್ 31 ರಿಂದ ಏಪ್ರಿಲ್ 3 ರ ತನಕ  ಕುಂದಾಪುರದ ಗಾಂಧಿಮೈದಾನದಲ್ಲಿ ನಡೆಯಲಿದೆ.
90 ರ ದಶಕದಲ್ಲಿ ಇತಿಹಾಸ ಬರೆದ ಕುಂದಾಪುರ ಪರಿಸರದ ಪ್ರಸಿದ್ಧ ತಂಡಗಳಾದ ಚಕ್ರವರ್ತಿ,
ಟೊರ್ಪೆಡೋಸ್,ಸ್ವಾಮಿ ಗಂಗೊಳ್ಳಿ,ಮಿತ್ರವೃಂದ ಕೋಟೇಶ್ವರ, ಅಂಶು ಕೋಟೇಶ್ವರ, ಚಾಲೆಂಜ್ ಕುಂದಾಪುರ, ಜೆ.ಸಿ.ಸಿ‌‌ ಜಾಲಾಡಿ,ಚಾಲುಕ್ಯ ಹೆಮ್ಮಾಡಿ,ಮಹಾದೇವಿ ಮಲ್ಯಾಡಿ,ಮದೀನಾ ಕುಂದಾಪುರ, ಲಕ್ಕಿ ಸ್ಟಾರ್ ಕೋಡಿ,ಸಮುದಾಯ ತಲ್ಲೂರು,ಮಯೂರ ಕುಂದಾಪುರ, ಜಾನ್ಸನ್ ಕುಂದಾಪುರ,ಕೀಳೇಶ್ವರಿ ಕುಂದಾಪುರ ಒಟ್ಟು 15 ತಂಡಗಳು,
ಹಾಗೂ ಬ್ರಹ್ಮಾವರ ಪರಿಸರದ ಹಿರಿಯ ತಂಡಗಳಾದ ವಾಹಿನಿ ಪಡುಕರೆ,ಇಲೆವೆನ್ ಅಪ್ ಕೋಟ,ಪಾರಂಪಳ್ಳಿ ಕ್ರಿಕೆಟರ್ಸ್,ಎಮ್.ಸಿ.ಸಿ ಮಣೂರು,ಖುಷಿ ಅಮರ್ ಬ್ರಹ್ಮಾವರ ಮತ್ತು ವರ್ಲ್ಡ್ ಇಲೆವೆನ್ ಹಂದಾಡಿ ಈ 6 ತಂಡಗಳು ಮತ್ತೆ ಅಖಾಡಕ್ಕಿಳಿಯಲಿದ್ದು ಟೆನಿಸ್ಬಾಲ್ ಕ್ರಿಕೆಟ್ ನ ಗತಕಾಲದ ವೈಭವ ಮತ್ತೆ ಮರುಕಳಿಸಲಿದೆ ಎಂದು ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ತಿಳಿಸಿದ್ದಾರೆ.
ಅಳಿವಿನಂಚಿನಲ್ಲಿರುವ ಟೆನಿಸ್ಬಾಲ್ ಕ್ರಿಕೆಟ್ ಉಳಿಸುವ ಉಡುಪಿ ಜಿಲ್ಲೆ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಈ ಪ್ರಯತ್ನ ರಾಜ್ಯದಾದ್ಯಂತ ಕ್ರಾಂತಿಕಾರಿ ಸಂಚಲನ ಮೂಡಿಸಿದ್ದು,ಕರ್ನಾಟಕ ರಾಜ್ಯದಾದ್ಯಂತ ಪ್ರತಿ ಜಿಲ್ಲೆಗಳಲ್ಲೂ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಸ್ಥಾಪಿಸುವ ಯೋಜನೆ ಕಾರ್ಯರೂಪಕ್ಕೆ ತರುವ ಯೋಚನೆ ನಡೆಯುತ್ತಿದೆ…
Exit mobile version