SportsKannada | ಸ್ಪೋರ್ಟ್ಸ್ ಕನ್ನಡ

ಉಡುಪಿ-ಸೈಮಂಡ್ಸ್ ಕಡಿಯಾಳಿ ತಂಡದ ಮಡಿಲಿಗೆ ಅಂತರ್-ಗ್ರಾಮೀಣ ಮಟ್ಟದ ವೆಂಕಟರಮಣ ಟ್ರೋಫಿ-2022

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್ ರಿ.ಪಿತ್ರೋಡಿ ಇವರ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಅಂತರ್ ಗ್ರಾಮೀಣ ತಂಡಗಳ ಕ್ರಿಕೆಟ್ ಪಂದ್ಯಾಕೂಟ “ವೆಂಕಟರಮಣ ಟ್ರೋಫಿ-2022″ಯನ್ನು ಸೈಮಂಡ್ಸ್ ಕಡಿಯಾಳಿ ತಂಡ ಜಯಿಸಿದೆ.
ಉದ್ಯಾವರ ಗ್ರಾಮ ಪಂಚಾಯತ್ ಮೈದಾನ ಹಾಗೂ ಕಟಪಾಡಿ ಪಳ್ಳಿಗುಡ್ಡೆ ಈ ಎರಡು ಮೈದಾನದಲ್ಲಿ ಆಯೋಜಿಸಲಾದ ಪಂದ್ಯಾವಳಿಯಲ್ಲಿ ಒಟ್ಟು 28 ತಂಡಗಳು ಭಾಗವಹಿಸಿದ್ದು,ಬಹುತೇಕ ಲೀಗ್ ಹಂತದ
ಪಂದ್ಯಗಳು ರೋಚಕ ಅಂತ್ಯ ಕಂಡಿದ್ದವು.
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ  ಸೈಮಂಡ್ಸ್ ಕಡಿಯಾಳಿ ತಂಡ ನಿಗದಿತ 6 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿದ್ದರು.ಇದಕ್ಕುತ್ತರವಾಗಿ ಜೈ ವೀರಮಾರುತಿ ತೆಂಕನಿಡಿಯೂರು ತಂಡ 6 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 38 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
ಫೈನಲ್ ಪಂದ್ಯದ ಪಂದ್ಯಶ್ರೇಷ್ಟ  ಪ್ರಶಸ್ತಿಯನ್ನು ಸೈಮಂಡ್ಸ್ ನ ಪ್ರದೀಪ್ ಶೆಟ್ಟಿ, ಬೆಸ್ಟ್ ಬ್ಯಾಟ್ಸ್‌ಮನ್‌
ಫ್ರೆಂಡ್ಸ್ ಬೊಮ್ಮಾರಬೆಟ್ಟಿನ ರವಿ‌.ಡಿ.ಸಿ,ಬೆಸ್ಟ್ ಬೌಲರ್ ಜೈ ವೀರಮಾರುತಿಯ ಧವನ್ ಮತ್ತು ಸರಣಿಶ್ರೇಷ್ಟ ಪ್ರಶಸ್ತಿಯನ್ನು ಜೈ ವೀರಮಾರುತಿ ತಂಡದ ಅಕ್ಷಯ್ ಪಡೆದುಕೊಂಡರು.ವಿಶೇಷವಾಗಿ ನೀಡಲಾದ ಶಿಸ್ತುಬದ್ಧ ತಂಡ ಪ್ರಶಸ್ತಿ ಫ್ರೆಂಡ್ಸ್ ಬೊಮ್ಮಾರಬೊಟ್ಟು ತಂಡಕ್ಕೆ ಒಲಿಯಿತು.
ಪ್ರಥಮ ಪ್ರಶಸ್ತಿ ವಿಜೇತ ಸೈಮಂಡ್ಸ್ ಕಡಿಯಾಳಿ ತಂಡ ಆಕರ್ಷಕ ಬೆಳ್ಳಿಯ ಟ್ರೋಫಿಯೊಂದಿಗೆ 70 ಸಹಸ್ರ ನಗದು,ದ್ವಿತೀಯ ಸ್ಥಾನಿ ಜೈ ವೀರಮಾರುತಿ ತೆಂಕನಿಡಿಯೂರು ತಂಡ 40000  ನಗದಿನೊಂದಿಗೆ ಆಕರ್ಷಕ  ಬೆಳ್ಳಿಯ ಟ್ರೋಫಿಯನ್ನು ಪಡೆದುಕೊಂಡರು.
ವಿಶೇಷ ಆಕರ್ಷಣೆ ಎಂಬಂತೆ ರಾಜ್ಯ ಲೆದರ್ ಬಾಲ್ ಮಹಿಳಾ ತಂಡಗಳ ಸೌಹಾರ್ದ ಕ್ರಿಕೆಟ್ ಪಂದ್ಯದಲ್ಲಿ
ವೈಟ್ ಪ್ಯಾಂಥರ್ಸ್ ತಂಡ ಪಿಂಕ್ ಪ್ಯಾಂಥರ್ಸ್ ತಂಡದ ವಿರುದ್ಧ  ಜಯಗಳಿಸಿತು.
*ಉದ್ಘಾಟನಾ ಸಮಾರಂಭ*
ಶನಿವಾರ ಬೆಳಿಗ್ಗೆ ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಕುಂದಾಪುರ ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿದರು.ಈ ಸಂದರ್ಭ ಮಾತನಾಡಿದ ಗೌತಮ್ ಶೆಟ್ಟಿ “ವೆಂಕಟರಮಣ ತಂಡ ಕ್ರೀಡೆಯೊಂದಿಗೆ ಸಾಮಾಜಿಕ,ಧಾರ್ಮಿಕ,ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಿ ರಾಜ್ಯಕ್ಕೆ ಮಾದರಿ ತಂಡವಾಗಿದೆ” ಎಂದರು ಹಾಗೂ ಆಟಗಾರರಿಗೆ ಕಿವಿಮಾತು ಹೇಳಿದರು.ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ನವೀನ್ ಸಾಲ್ಯಾನ್, ಎಂ.ಕೆ.ಬಾಲರಾಜ್, ಲೋಹಿತ್ ಕುಮಾರ್ ಪಿತ್ರೋಡಿ,ರಾಧಾಕೃಷ್ಣ ಶ್ರೀಯಾನ್,ವಿಜಯ್ ಕುಮಾರ್,ಜಿತೇಂದ್ರ ಶೆಟ್ಟಿ ಉದ್ಯಾವರ,ರಾಮಕೃಷ್ಣ ಆಚಾರ್ಯ ಕೋಟ,ಗಂಗಾಧರ.ಜಿ.ಕರ್ಕೇರ,ಗೋಪಾಲ ಅಮೀನ್,ಚಂದ್ರ ಬಂಗೇರ,ಶ್ರೀಮತಿ ಭಾರತಿ ಚಂದ್ರ ಬಂಗೇರ,ವಿಜಯ್ ಕೋಟ್ಯಾನ್,ಶಶಿಕಾಂತ್,ಕು.ತನುಶ್ರೀ ಪಿತ್ರೋಡಿ ಮತ್ತು ಲಿಖಿತ್ ಪಿತ್ರೋಡಿ ಉಪಸ್ಥಿತರಿದ್ದರು.
*ಸಮಾರೋಪ ಸಮಾರಂಭ*
ಮಧ್ಯಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ.
ಆರ್.ಮೆಂಡನ್ ನೇತ್ರದಾನ ಅಭಿಯಾನ-2 ವನ್ನು ಉದ್ಘಾಟಿಸಿ,”ನಮ್ಮ‌ ಜೀವನದ ನಂತರ ನಾವೇನು ಮಾಡಬೇಕೆಂಬುದನ್ನು ನೇತ್ರದಾನ ಅಭಿಯಾನದ ಮೂಲಕ ಸಮಾಜಕ್ಕೆ ವೆಂಕಟರಮಣ ಸಂಸ್ಥೆ ಕರೆ ಕೊಟ್ಟಿದೆ” ಎಂದರು.ಸಮಾಜ ಸೇವಕರಾದ ಸುರೇಶ್ ಶೆಟ್ಟಿ ಗುರ್ಮೆ ಸಂಸ್ಥೆಯ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದರು.ಉಡುಪಿ ಜಿಲ್ಲೆ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಗೌರವಾಧ್ಯಕ್ಷರಾದ ಶರತ್ ಶೆಟ್ಟಿ ಪಡುಬಿದ್ರಿ ನೇತ್ರದಾನ ಅಭಿಯಾನಕ್ಕೆ ತಮ್ಮ ಹೆಸರನ್ನು ನೋಂದಣಿ ಮಾಡಿದರು.ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಉಡುಪಿ-ದ.ಕ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷರಾದ ಯಶಪಾಲ್ ಸುವರ್ಣ,ಶ್ರೀಮತಿ ನಯನಾ ಗಣೇಶ್,ಎಂ.ಕೆ.ಬಾಲರಾಜ್ ಪಿತ್ರೋಡಿ,
ಲೋಹಿತ್ ಕುಮಾರ್ ಪಿತ್ರೋಡಿ, ದೇವರಾಜ್ ಕರ್ಕೇರ,ದಿವಾಕರ ಕುಂದರ್ ಕಡೆಕಾರು,ಜಿತೇಂದ್ರ ಶೆಟ್ಟಿ ಉದ್ಯಾವರ,ಗಂಗಾಧರ.ಜಿ.ಕರ್ಕೇರ,ಕೆ.ಆರ್‌.ಎಸ್
ಅಕಾಡೆಮಿಯ ಉದಯ್ ಕುಮಾರ್ ಕಟಪಾಡಿ,ಪ್ರವೀಣ್ ಕುಮಾರ್ ಬೈಲೂರು,ಗೋಪಾಲ ಅಮೀನ್,ಚಂದ್ರ ಬಂಗೇರ,ಮಲ್ಲೇಶ್ ಬಂಗೇರ,ವಿಜಯ್ ಕೋಟ್ಯಾನ್,
ಶ್ರೀಮತಿ ಭಾರತಿ ಚಂದ್ರ ಬಂಗೇರ ಪಿತ್ರೋಡಿ,ತನುಶ್ರೀ ಪಿತ್ರೋಡಿ,ಲಿಖಿತ್ ಪಿತ್ರೋಡಿ, ಪ್ರವೀಣ್ ಪಿತ್ರೋಡಿ ಮತ್ತು ತಂಡದ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭ ಶ್ರೀಮತಿ ಲಕ್ಷ್ಮೀ ಮಂಜು ಕೊಳ,
ನಿಖಿತಾ.ಯು.ಕರ್ಕೇರ,ಪ್ರಶಾಂತ್‌ ಕೋಟ‌ ಪಡುಕರೆ,
ಖ್ಯಾತ ಪತ್ತೇದಾರಿ ಕಾದಂಬರಿ ಬರಹಗಾರ್ತಿ ಸೌಮ್ಯ ಪುತ್ರನ್,ಸತ್ಯದ ತುಳುವೆರ್ ಸಂಘಟನೆಯ ಅಧ್ಯಕ್ಷರಾದ ಚೇತನ್,ನಾಗಾರ್ಜುನ.ಡಿ.ಪೂಜಾರಿ ಇವರನ್ನು ಸನ್ಮಾನಿಸಲಾಯಿತು…
ವೀಕ್ಷಕ ವಿವರಣೆಯಲ್ಲಿ ಹಿರಿಯ ವೀಕ್ಷಕ ವಿವರಣೆಕಾರರಾದ ವಿನಯ್ ಉದ್ಯಾವರ,ಅರವಿಂದ ಮಣಿಪಾಲ್,ರಾಜಶೇಖರ್ ಶ್ಯಾಮರಾವ್, ಪ್ರತುಲ್ ಹಿರಿಯಡಕ ಸಹಕರಿಸಿದರೆ,ದಿನೇಶ್ ಆಚಾರ್ ಬೈಕಂಪಾಡಿ,ರಾಘು ಬ್ರಹ್ಮಾವರ ತಂಡ ತೀರ್ಪುಗಾರರಾಗಿ ಭಾಗವಹಿಸಿದರು.
ಸೌಜನ್ ಪಡುಬಿದ್ರಿ ನೇತ್ರತ್ವದಲ್ಲಿ M9 ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಂಡಿತು.
               ಚಿತ್ರ ಕೃಪೆ-ರತನ್.ಸುರಭಿ
Exit mobile version