SportsKannada | ಸ್ಪೋರ್ಟ್ಸ್ ಕನ್ನಡ

ಉಡುಪಿ ಡೀನರಿ ಪ್ರೀಮಿಯರ್ ಲೀಗ್-2023 ಪ್ರಶಸ್ತಿ ಗೆದ್ದ ಉಡುಪಿ XI

ಉಡುಪಿ, ಅಕ್ಟೋಬರ್ 08: ಇಂಡಿಯನ್ ಕೆಥೋಲಿಕ್ ಯೂತ್ ಮೂವ್ಮೆಂಟ್ ಉಡುಪಿ ಡೀನರಿ ಆಯೋಜಿಸಿದ  UDPL-2023 ಕ್ರಿಕೆಟ್ ಪಂದ್ಯಾಟದಲ್ಲಿ  ಉಡುಪಿ XI ತಂಡವು ಪಂದ್ಯಾವಳಿಯ ವಿಜೇತರಾಗಿ ಹೊರಹೊಮ್ಮಿದರೆ, ಥಂಡರ್ ಡ್ರಾಗನ್ಸ್  ರನ್ನರ್ ಆಪ್ ಆಗಿ ಹೊರಹೊಮ್ಮಿತು. ಟೂರ್ನಮೆಂಟನ್ನು ಉದ್ಯಾವರ ಪಂಚಾಯತ್ ಗ್ರೌಂಡ್ ನಲ್ಲಿ ಅಕ್ಟೋಬರ್ 08, 2023 ರಂದು ನಡೆಸಲಾಯಿತು.
ಪಂದ್ಯಾವಳಿಯನ್ನು ಸೇಂಟ್ ಫ್ರಾನ್ಸಿಸ್ ಝೇವಿಯರ್  ಉದ್ಯಾವರ ಚರ್ಚ್‌ನ ಧರ್ಮಗುರು  ಅಸಿಸ್ಟೆಂಟ್ ಪ್ಯಾರಿಸ್ ಪ್ರೀಸ್ಟ್ ರೆವರೆಂಡ್ ಫಾದರ್ ಲಿಯೋ ಪ್ರವೀಣ್ ಡಿಸೋಜಾ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಂಗಳೂರು ಇದರ ದೈಹಿಕ ಮತ್ತು ಆರೋಗ್ಯ ಶಿಕ್ಷಣ ಉಪನ್ಯಾಸಕರಾದ ಮಿಸ್ಟರ್  ಆಲ್ವಿನ್ ಅಂದ್ರಾದೆ ಉದ್ಘಾಟಿಸಿದರು. ಟೂರ್ನಿಯ ಭಾಗವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಎಜೆ ಸೂಪರ್ ಕಿಂಗ್ಸ್ ,ಥಂಡರ್ ಡ್ರಾಗನ್ಸ್  , RD ರಾಪ್ಟರ್ಸ್,ಮೈಟಿ ಲಯನ್ಸ್  ಮತ್ತು  ಉಡುಪಿ XI ಎನ್ನುವ  5 ತಂಡಗಳು ಭಾಗವಹಿಸಿದ್ದವು.
ಉಡುಪಿ ಡೀನರಿ ಕೌನ್ಸಿಲ್ ಸಂಘಟಿಸಿದ ಪ್ರೀಮಿಯರ್ ಲೀಗ್ ಕ್ರಿಕೆಟ್  ಪಂದ್ಯಾವಳಿಯು ಸದಸ್ಯರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ದೊಡ್ಡ ಯಶಸ್ಸನ್ನು ಕಂಡಿತು. ವಿಜೇತ ತಂಡ ಉಡುಪಿ XI 15,555 ರೂ. ನಗದು ಬಹುಮಾನ ಹಾಗೂ ಟ್ರೋಫಿಯನ್ನು ಪಡೆಯಿತು.  ರನ್ನರ್ ಅಪ್ ತಂಡ ಥಂಡರ್ ಡ್ರಾಗನ್ಸ್  ಗೆ  11,111 ರೂ. ನಗದು ಬಹುಮಾನ ಮತ್ತು ಟ್ರೋಫಿಯನ್ನು ನೀಡಲಾಯಿತು. ಅತ್ಯುತ್ತಮ ಬ್ಯಾಟ್ಸ್‌ಮನ್  ಆಗಿ ವಿಶಾಲ್ ಗೋಮ್ಸ್ (UDUPI XI), ಅತ್ಯುತ್ತಮ ಬೌಲರ್ ಆಗಿ  ಆರನ್ ಪೆರೇರಾ (UDUPI XI), ಸರಣಿ ಶ್ರೇಷ್ಠ  ಆಟಗಾರನಾಗಿ  ಪ್ರಿಲ್ಸನ್ ಮಾರ್ಟಿಸ್ (UDUPI XI) ಸರಣಿಯ ಶ್ರೇಷ್ಠ  ಮಹಿಳಾ ಆಟಗಾರ್ತಿಯಾಗಿ ರಿವಾ ಡಿಸೋಜಾ (UDUPI XI) ಹಾಗೂ ಅತ್ಯುತ್ತಮ ವಿಕೆಟ್ ಕೀಪರ್ ಆಗಿ ರೋವಿನ್ ಪೆರೇರಾ (ಥಂಡರ್ ಡ್ರಾಗನ್ಸ್) ಇವರುಗಳು ಪುರಸ್ಕೃತರಾದರು.
ಬಹುಮಾನ ವಿತರಣಾ ಸಮಾರಂಭಕ್ಕೆ ಉಡುಪಿ ಡೀನರಿ ವಲಯದ  ವ್ಯವಸ್ಥಾಪಕರಾದ ವಿ.ರೆವರೆಂಡ್ ಫಾದರ್  ಚಾರ್ಲ್ಸ್ ಮೆನೆಜಸ್ ಮುಖ್ಯ ಅತಿಥಿಯಾಗಿದ್ದರು. ತಮ್ಮ ಭಾಷಣದಲ್ಲಿ ಅವರು ಕಾರ್ಯಕ್ರಮವನ್ನು ಆಯೋಜಿಸಲು ಶ್ರಮಿಸಿದವರನ್ನು ಶ್ಲಾಘಿಸಿದರು ಮತ್ತು ಕ್ರೀಡಾ ಮನೋಭಾವದಿಂದ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಎಲ್ಲಾ ಭಾಗವಹಿಸಿದವರನ್ನು ಅಭಿನಂದಿಸಿದರು.
ಎಲ್ಲಾ 5 ತಂಡಗಳು ಸಾಂಘಿಕ ಮನೋಭಾವದಿಂದ ಭಾಗವಹಿಸಿ ಕ್ರೀಡಾಸ್ಫೂರ್ತಿಯನ್ನು ಎತ್ತಿ ಹಿಡಿದವು. ಎಲ್ಲಾ ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಪಂದ್ಯಾವಳಿಯಲ್ಲಿ   ಐಸಿವೈಎಂ ಉಡುಪಿ  ಧರ್ಮಪ್ರಾಂತ್ಯದ ನಿರ್ದೇಶಕರಾದ  ರೆವರೆಂಡ್ ಫಾದರ್  ಸ್ಟೀವನ್ ಫೆರ್ನಾಂಡಿಸ್, ರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟಿಗ  ಪ್ರವೀಣ್ ಕೊರಿಯಾ , ಕೆಆರ್ ವೈಸಿ ಪ್ರತಿನಿಧಿ  ಮತ್ತು ಉಪಾಧ್ಯಕ್ಷೆ  ಶ್ರೀಮತಿ. ರಿವಾ ಡಿಸೋಜಾ, ಐಸಿವೈಎಂ ಉಡುಪಿ ಧರ್ಮಪ್ರಾಂತ್ಯದ  ಅಧ್ಯಕ್ಷೆ ಶ್ರೀಮತಿ ಆಶ್ಲೇ ಡಿಸೋಜಾ, ಐಸಿವೈಎಂ ಉಡುಪಿಯ  ಸೆಕ್ರೆಟರಿ ಶ್ರೀಮತಿ ಶೈನಿ ಅಲ್ವಾ ಪಂದ್ಯಾವಳಿಯಲ್ಲಿ ಸಂಘಟಕರೊಂದಿಗೆ ಉಪಸ್ಥಿತರಿದ್ದರು.
ಐಸಿವೈಎಂ ಉಡುಪಿ ವಲಯದ ನಿರ್ದೇಶಕ ರೆವರೆಂಡ್ ಫಾದರ್  ರಾನ್ಸನ್ ಡಿಸೋಜಾ CSC ಹಾಗೂ   ಐಸಿವೈಎಂ ಉಡುಪಿ ವಲಯದ ಅಧ್ಯಕ್ಷ ಗ್ಲಾನಿಸ್ ಮಾಂಟೆರೊ ಸ್ವಾಗತಿಸಿದರು.
ರಾಜ್ಯಮಟ್ಟದ ವೀಕ್ಷಕ ವಿವರಣೆಗಾರರಾದ ವಿನಯ್ ಕುಮಾರ್ ಉದ್ಯಾವರ ವೀಕ್ಷಕ ವಿವರಣೆಯಲ್ಲಿ ಸಹಕರಿಸಿದರು. ಇಂಡಿಯನ್ ಕೆಥೋಲಿಕ್ ಯೂತ್ ಮೂವ್ಮೆಂಟ್ ಉಡುಪಿ ಡೀನರಿ ಅರ್ಪಿಸಿದ UDPL-2023 ಪಂದ್ಯಾಟದ ನೇರ ಪ್ರಸಾರವನ್ನು  Sportskannadatv ಯೂಟ್ಯೂಬ್ ಲೈವ್ ಚಾನೆಲ್ ತನ್ನ ಚಾನೆಲ್ ನಲ್ಲಿ ಬಿತ್ತರಿಸಿತ್ತು
Exit mobile version