SportsKannada | ಸ್ಪೋರ್ಟ್ಸ್ ಕನ್ನಡ

ಉಡುಪಿ-ಮಲ್ಪೆ ವಲಯ ಮಟ್ಟದ ಪಂದ್ಯಾಟ-ಮಲ್ಪೆ ಪ್ರೀಮಿಯರ್ ಲೀಗ್-2022

ಮಲ್ಪೆಯಲ್ಲಿ ವಲಯ ಮಟ್ಟದ ಲೀಗ್ ಮಾದರಿಯ 90 ಗಜಗಳ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ “ಮಲ್ಪೆ ಪ್ರೀಮಿಯರ್ ಲೀಗ್-M.P.L-2022” ಪಂದ್ಯಾವಳಿ ಆಯೋಜಿಸಲಾಗಿದೆ.
ಏಪ್ರಿಲ್ 29,30 ಮತ್ತು ಮೇ1, ಈ ಮೂರು ದಿನಗಳ ಕಾಲ ಮಲ್ಪೆ ವಡಭಾಂಡೇಶ್ವರ ಗಾಂಧಿ ಶತಾಬ್ದಿ ಮೈದಾನದಲ್ಲಿ ಪಂದ್ಯಾಟ ನಡೆಯಲಿದೆ.ಎಲ್ಲಾ ಆಟಗಾರರನ್ನು ಹರಾಜು ಪ್ರಕ್ರಿಯೆ ಮೂಲಕ ಆರಿಸಲಾಗುವುದು.ಪ್ರಥಮ ಬಹುಮಾನ 1,11,111ರೂ,ದ್ವಿತೀಯ ಬಹುಮಾನ 77,777 ರೂ ನಗದು ಬಹುಮಾನ ಮತ್ತು ಆಕರ್ಷಕ ಪಾರಿತೋಷಕಗಳನ್ನು ನೀಡಲಾಗುತ್ತಿದೆ.
ಇಂದು ಮಲ್ಪೆ ಪ್ರೀಮಿಯರ್ ಲೀಗ್ ನ ಆಕ್ಷನ್ ಪ್ರಕ್ರಿಯೆ ನಡೆಯಲಿದ್ದು,M9 ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ಬಿತ್ತರಗೊಳ್ಳಲಿದೆ.
Exit mobile version