SportsKannada | ಸ್ಪೋರ್ಟ್ಸ್ ಕನ್ನಡ

ಉಡುಪಿ-ಸಿ.ಪಿ.ಸಿ ಟ್ರೋಫಿ-2021 90 ಗಜಗಳ ಕ್ರಿಕೆಟ್ ಪಂದ್ಯಾಕೂಟ

ಕ್ರಿಶ್ಚಿಯನ್ ಪದವಿಪೂರ್ವ ಕಾಲೇಜು ಉಡುಪಿ ಹಾಗೂ ಹಳೆ ವಿದ್ಯಾರ್ಥಿ ಸಂಘ,ಸಿ.ಪಿ‌.ಯು.ಸಿ ಮಿಷನ್ ಕಾಂಪೌಂಡ್ ಆಶ್ರಯದಲ್ಲಿ ವಿದ್ಯಾಸಂಸ್ಥೆಯ ಅಭಿವೃದ್ಧಿಯ ಸದುದ್ದೇಶದಿಂದ,ಪ್ರಪ್ರಥಮ ಬಾರಿಗೆ 90 ಗಜಗಳ ಕ್ರಿಕೆಟ್ ಪಂದ್ಯಾಟ ಸಿ.ಪಿ.ಸಿ ಟ್ರೋಫಿ-2021 ಆಯೋಜಿಸಲಾಗಿದೆ.
ಫೆಬ್ರವರಿ 27 ಮತ್ತು 28 ರಂದು ಉಡುಪಿಯ ಕ್ರಿಶ್ಚಿಯನ್ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಈ ಪಂದ್ಯಾಟ ನಡೆಯಲಿದ್ದು,ಶನಿವಾರ 27 ರಂದು ಆಯ್ದ 16 ಇಂಟರ್ ಚರ್ಚ್ ತಂಡಗಳಿಗೆ ಹಾಗೂ ರವಿವಾರ 28 ರಂದು ಆಯ್ದ ಸ್ಥಳೀಯ 16 ತಂಡಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.ಶನಿವಾರ ಹಾಗೂ ಭಾನುವಾರ ಫೈನಲ್ ತಲುಪಿದ ತಂಡಗಳು  ಸಿ.ಪಿ‌.ಸಿ‌ ಟ್ರೋಫಿ-2021 ಗಾಗಿ ಸೆಣಸಾಡಲಿವೆ.
ಪಂದ್ಯಾಕೂಟದ ಪ್ರಥಮ ಪ್ರಶಸ್ತಿ ವಿಜೇತ ತಂಡ 25,000 ನಗದು ಹಾಗೂ ದ್ವಿತೀಯ ಸ್ಥಾನಿ ತಂಡ 15,000 ನಗದು ಸಹಿತ ಆಕರ್ಷಕ ಶಾಶ್ವತ ಫಲಕಗಳನ್ನು ಪಡೆಯಲಿದ್ದು,ವೈಯಕ್ತಿಕ ಶ್ರೇಷ್ಟ ನಿರ್ವಹಣೆ ನೀಡಿದ ಆಟಗಾರರಿಗೆ ಆಕರ್ಷಕ ಉಡುಗೊರೆ ನೀಡಲಾಗುತ್ತಿದೆ.
ತಂಡಗಳ‌ ಹೆಸರು ನೊಂದಾಯಿಸಲು ಫೆಬ್ರವರಿ 22 ಕೊನೆಯ ದಿನಾಂಕವಾಗಿದ್ದು,ಹೆಚ್ಚಿನ ವಿವರಗಳಿಗಾಗಿ 7892391938,8105135218,9535435575 ಈ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದು.
Exit mobile version