SportsKannada | ಸ್ಪೋರ್ಟ್ಸ್ ಕನ್ನಡ

ಯು.ಎ.ಇ-ಹೊನ್ನಾಳ ಪ್ರೀಮಿಯರ್ ಲೀಗ್-2021(ಸೀಸನ್ 4)ಜನವರಿ 1 ರಂದು.

ಹೊನ್ನಾಳ ಉರ್ದು ಸ್ಕೂಲ್ ಹಳೆವಿದ್ಯಾರ್ಥಿಗಳ ಅಸೋಸಿಯೇಷನ್ ಯು.ಎ.ಇ ಇವರ ಆಶ್ರಯದಲ್ಲಿ ಜನವರಿ 1 ರಂದು ಅಬುಹೈಲ್ ಮೆಟ್ರೋ ಸ್ಟೇಷನ್ ಸಮೀಪದ ಗೋಲ್ಟರಿ ಕ್ರಿಕೆಟ್ ಅಕಾಡೆಮಿಯಲ್ಲಿ ಹೊನ್ನಾಳ ಪ್ರೀಮಿಯರ್ ಲೀಗ್-2021 ಸೀಸನ್ 4 ಪಂದ್ಯಾವಳಿ ಆಯೋಜಿಸಲಾಗಿದೆ.

ಈ ಪಂದ್ಯಾವಳಿಯ ಪ್ರಥಮ ಪ್ರಶಸ್ತಿ ವಿಜೇತ ತಂಡ 888 ದಿರ್ಹಮ್,ದ್ವಿತೀಯ ಸ್ಥಾನಿ 666 ದಿರ್ಹಮ್ ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ಪಂದ್ಯಾಟದ ನಿಯಮಗಳು ಈ ಕೆಳಗಿನಂತಿದೆ.
1)ಕೇವಲ 5 ಸ್ಪಾನ್ಸರ್ಸ್ ಗಳ 5 ತಂಡಗಳಿಗೆ ಅವಕಾಶವಿರುತ್ತದೆ.
2)ಲೀಗ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದೆ.
3)5 ಓವರ್ ಗಳ ಪಂದ್ಯವಾಗಿದ್ದು,ಹವಾಮಾನ ಅನುಕೂಲದ ಪ್ರಕಾರ ಸಮಯ ಹಾಗೂ ಓವರ್ ನಿರ್ಧರಿತವಾಗಿರುತ್ತದೆ.
4)ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿದ್ದು,ಥರ್ಡ್ ಅಂಪಾಯರ್ ಸೌಲಭ್ಯ ಇರುವುದಿಲ್ಲ.
5)ಒಬ್ಬ ಹಿರಿಯ ಆಟಗಾರರನ್ನು ಆರಂಭಿಕ ಆಟಗಾರರಾಗಿ ಕಣಕ್ಕಿಳಿಸತಕ್ಕದ್ದು.
6)8 ಜನ ಆಟಗಾರ ಫೀಲ್ಡಿಂಗ್ ಹಾಗೂ 9 ಜನ ಆಟಗಾರರು ಬ್ಯಾಟಿಂಗ್ ಮಾಡಬಹುದಾಗಿದೆ.
7)ಎಲ್ಲಾ ತಂಡದ 9 ಆಟಗಾರರು ಪಂದ್ಯಗಳಲ್ಲೂ ಆಡತಕ್ಕದ್ದು.ಬದಲಿ ಆಟಗಾರರು ರೊಟೇಶನ್ ಆಧಾರದಲ್ಲಿ ಆಡಬಹುದಾಗಿದೆ.
8)ಎಲ್ಲಾ ತಂಡದ ಆಟಗಾರರು ಯಾವ ಸಮಯದಲ್ಲೂ ತಯಾರಿರತಕ್ಕದ್ದು.
9)ಪಂದ್ಯ ಟೈ ಆದಲ್ಲಿ ಸೂಪರ್ ಓವರ್ ನಡೆಸಲಾಗುವುದು ಹಾಗೂ 3 ಬ್ಯಾಟ್ಸ್‌ಮನ್ ಅವಕಾಶವಿರುತ್ತದೆ.
10)ಪ್ರತಿ ಸ್ಪಾನ್ಸರ್ಸ್ ಶುಲ್ಕ- 300 ದಿರ್ಹಮ್
11)ಭಾಗವಹಿಸುವ ಪ್ರತಿಯೊಬ್ಬ ಆಟಗಾರರ ಶುಲ್ಕ 25 ದಿರ್ಹಮ್
12)ಹೆಚ್ಚಿನ ಮಾಹಿತಿಗಾಗಿ ರೆಹಮತ್,ಫಿರೋಜ್ ಹಾಗೂ ಜಾಕಿರ್ ರವರನ್ನು ಸಂಪರ್ಕಿಸಬಹುದು.
13)ಪ್ರವೇಶ ಶುಲ್ಕವನ್ನು ರೆಹಮತ್ ಹಾಗೂ ಫಿರೋಜ್ ರವರ ಬಳಿ ನೀಡಿ ಸಹಕರಿಸಬೇಕಾಗಿ ವಿನಂತಿ.
Exit mobile version