SportsKannada | ಸ್ಪೋರ್ಟ್ಸ್ ಕನ್ನಡ

ಹೆಬ್ರಿ- ಕ್ರಿಕೆಟ್ ಶಿಸ್ತಿನಿಂದ ಆಡಿ,ಹಿರಿಯ ಆಟಗಾರರನ್ನು ಗೌರವಿಸಿ-ಗೌತಮ್ ಶೆಟ್ಟಿ(ಜಿಲ್ಲಾಧ್ಯಕ್ಷರುT.C.A)

ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಪ್ರಾಯೋಜಿತ,
ಸವ್ಯಸಾಚಿ ಹೆಬ್ರಿ ತಂಡದ ಮಾಜಿ ಆಟಗಾರರು,ಕ್ರೀಡಾ ಸಂಘಟಕರು ಸುಕೇಶ್ ಶೆಟ್ಟಿ ಹೆಬ್ರಿ ಮತ್ತು ಅಶೋಕ್ ಹೆಗ್ಡೆ ಹೆಬ್ರಿ ಇವರ ಸಾರಥ್ಯದಲ್ಲಿ ನಡೆದ ಹೆಬ್ರಿ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಅಗಸ್ತ್ಯ ಮದಗ ತಂಡ 61 ರನ್ ಗಳ ಭರ್ಜರಿ ಗೆಲುವನ್ನು ಸಾಧಿಸಿದೆ.
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅಗಸ್ತ್ಯ ಮದಗ ತಂಡ,ಪ್ರಮೋದ್ ಸ್ಪೋಟಕ 40 ರನ್ ಹಾಗೂ ದಿಲೀಪ್ 22 ರನ್ ಗಳ‌ ಸಹಾಯದಿಂದ 10 ಓವರ್ ಗಳಲ್ಲಿ 95 ರನ್ ಕಲೆಹಾಕಿತ್ತು.ಸವಾಲಿನ ಗುರಿಯನ್ನು ಚೇಸ್ ಮಾಡುವ ವೇಳೆ ಪ್ರಮೋದ್ 3 ವಿಕೆಟ್, ಅಕ್ಷಯ್ 3 ವಿಕೆಟ್‌ ಉರಿ ಬೌಲಿಂಗ್ ದಾಳಿಗೆ  ಹೆಬ್ರಿ ಹಾಕ್ಸ್ ತಂಡ 7.3 ಓವರ್ ಗಳಲ್ಲಿ 34 ರನ್ ಗಳಿಗೆ ಸರ್ವಪತನ ಕಂಡಿತು.
ಫೈನಲ್ ನ  ಪಂದ್ಯಶ್ರೇಷ್ಟ ಪ್ರಶಸ್ತಿ ಪ್ರಮೋದ್,ಪಂದ್ಯಾಟದ ಬೆಸ್ಟ್ ಬ್ಯಾಟ್ಸ್‌ಮನ್‌ ಪ್ರಜ್ವಲ್ ಶೆಣೈ, ಬೆಸ್ಟ್ ಬೌಲರ್ ಧನಿಕ್,ಸರಣಿಶ್ರೇಷ್ಟ ಅಗಸ್ತ್ಯ ಮದಗ ತಂಡದ ಪ್ರಮೋದ್ ಪಾಲಾಯಿತು.
*ಸಮಾರೋಪ ಸಮಾರಂಭ*
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ “ಕ್ರೀಡೆ ನಮಗೆ ಸಮಾಜದಲ್ಲಿ ಗುರುತನ್ನು ಮೂಡಿಸುತ್ತದೆ,ಜೀವನ ಕೌಶಲ್ಯವನ್ನು ಕಲಿಸುತ್ತದೆ,ಕ್ರಿಕೆಟ್ ಶಿಸ್ತಿನಿಂದ ಆಡಿ,ಹಿರಿಯ ಆಟಗಾರರನ್ನು ಗೌರವಿಸಿ”ಎಂದು ಹೇಳಿದರು.
ಗೌರವಾಧ್ಯಕ್ಷರಾದ ಶ್ರೀಧರ್ ಶೆಟ್ಟಿ ಪ್ಯಾರಡೈಸ್ ಬನ್ನಂಜೆ ಮಾತನಾಡಿ ಈಗಿನ ಆಟಗಾರರು ಕಡಿಮೆ ಓವರ್ ಗಳ ಪಂದ್ಯಗಳನ್ನಾಡಿ ಪರಿಪೂರ್ಣ ಆಟಗಾರರಾಗಿ ಹೊರಹೊಮ್ಮುವಲ್ಲಿ ವಿಫಲರಾಗುತ್ತಿದ್ದಾರೆ ಆದ್ದರಿಂದ
ಫಿಟ್ನೆಸ್ ಬಗ್ಗೆ ಗಮನ ಹರಿಸಬೇಕಿದೆ ಎಂದರು.ಹಿರಿಯ ಆಟಗಾರರಾದ ರಮೇಶ್ ಶೇರಿಗಾರ್ ಮಾತನಾಡಿ ಕ್ರೀಡೆಯ ಧ್ಯೇಯ ಸಂಸ್ಕಾರ,ಸಂಘಟನೆ,ಸೇವೆಯನ್ನು ಕ್ರೀಡಾಪಟುಗಳು
ಪಾಲಿಸಬೇಕೆಂದರು.ಗೌರವಾಧ್ಯಕ್ಷರಾದ ಶರತ್ ಶೆಟ್ಟಿ ಪಡುಬಿದ್ರಿ ಇವರು ಉಡುಪಿ ಜಿಲ್ಲೆಯ ಆಟಗಾರರೆಲ್ಲರಿಗೂ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಸೋಸಿಯೇಷನ್ ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ವಿಫುಲ ಅವಕಾಶವನ್ನು ಸೃಷ್ಟಿಸಿದೆ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.
ಅನಂತ ಪದ್ಮನಾಭ ಮೋಟಾರ್ಸ್ ನ ಮಾಲೀಕರಾದ ಶ್ರೀಯುತ ಪ್ರವೀಣ್ (ಅಪ್ಪಿ) ಬಲ್ಲಾಳ್,ಸ್ಪೋರ್ಟ್ಸ್ ಕನ್ನಡ ಪ್ರವರ್ತಕರಾದ ಕೋಟ ರಾಮಕೃಷ್ಣ ಆಚಾರ್,ಟೂರ್ನಮೆಂಟ್ ನ ಪ್ರಮುಖ ಸಂಘಟಕರಾದ ಸುಕೇಶ್ ಶೆಟ್ಟಿ ಹೆಬ್ರಿ ಮತ್ತು ಅಶೋಕ್ ಹೆಗ್ಡೆ ಹೆಬ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಈ ಸಂದರ್ಭ T.C.A ವತಿಯಿಂದ ಸುಕೇಶ್ ಶೆಟ್ಟಿ ಹೆಬ್ರಿ ಇವರನ್ನು ಸನ್ಮಾನಿಸಲಾಯಿತು.
 ಕೆ.ಎಸ್.ಸಿ‌.ಎ ಅಂಗೀಕೃತ ಅಂಪಾಯರ್ ಗಳಾದ ಇಬ್ರಾಹಿಂ ಆತ್ರಾಡಿ ಮತ್ತು ರಾಘು ಬ್ರಹ್ಮಾವರ ತೀರ್ಪುಗಾರರಾಗಿ ಮತ್ತು ಹಿರಿಯ ವೀಕ್ಷಕ ವಿವರಣೆಕಾರರಾದ ವಿನಯ್ ಉದ್ಯಾವರ ವೀಕ್ಷಕ ವಿವರಣೆಯನ್ನು ನಡೆಸಿದರು.M9 ಸ್ಪೋರ್ಟ್ಸ್ ಯೂ ಟ್ಯೂಬ್ ಚಾನೆಲ್ ಪಂದ್ಯಾವಳಿಯ ನೇರ ಪ್ರಸಾರ ಬಿತ್ತರಿಸಿದರು.
Exit mobile version