SportsKannada | ಸ್ಪೋರ್ಟ್ಸ್ ಕನ್ನಡ

ಶಾಲಾ ಕಾಲೇಜು ವಿದ್ಯಾರ್ಥಿಗಳ ಕ್ರಿಕೆಟ್ ಮುಖಾಮುಖಿಗೆ ಬೃಹತ್ ವೇದಿಕೆಯನ್ನು ಸಿದ್ಧಪಡಿಸುತ್ತಿರುವ ಟಿ.ಸಿ.ಎ ಉಡುಪಿ

ಉಡುಪಿ- ಶಾಲಾ,ಕಾಲೇಜು ವಿದ್ಯಾರ್ಥಿಗಳಿಗಾಗಿ ನವೆಂಬರ್ 06 ರಿಂದ ನವೆಂಬರ್ 12 ರ ವರೆಗೆ  ಟೆನಿಸ್ ಬಾಲ್ ಕ್ರಿಕೆಟ್  ಪಂದ್ಯಾವಳಿಯನ್ನು ಆಯೋಜಿಸಲು ಉಡುಪಿ  ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಸಜ್ಜಾಗುತ್ತಿದೆ.
ಪಂದ್ಯಾವಳಿಯು ನವೆಂಬರ್ 6 ರಿಂದ ಪ್ರಾರಂಭವಾಗಲಿದ್ದು,ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯ  ವಿವಿಧ ಶಾಲಾ-ಕಾಲೇಜಿನ ಒಟ್ಟು 64 ತಂಡಗಳು ನೋಂದಣಿ ಮಾಡಿಕೊಂಡಿದ್ದು,ಕುಂದಾಪುರ ಗಾಂಧಿ ಮೈದಾನದಲ್ಲಿ 700 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕ್ರಿಕೆಟ್‌ನಲ್ಲಿ ಸ್ಪರ್ಧಿಸುವುದನ್ನು ನೋಡಬಹುದಾಗಿದೆ.
“ಈ ಪಂದ್ಯಾವಳಿಯು ಶಾಲಾ- ಕಾಲೇಜು  ಮಕ್ಕಳಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ ಮತ್ತು ವಿದ್ಯಾರ್ಥಿಗಳಲ್ಲಿ ದೈಹಿಕ ಕ್ಷಮತೆ ಮತ್ತು ಸಾಂಘಿಕ ಕೆಲಸವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.ನವೆಂಬರ್ 6 ಬೆಳಿಗ್ಗೆ 9 ಗಂಟೆಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಯುತ ಎ.ಕಿರಣ್ ಕೊಡ್ಗಿ ಮತ್ತು ಜನತಾ ಫಿಶ್ ಮಿಲ್ ನ ಪ್ರವರ್ತಕರಾದ ಶ್ರೀ ಪ್ರಶಾಂತ್ ಕುಂದರ್ ಇವರು ಉದ್ಘಾಟಿಸಲಿದ್ದು,
ಟಿ‌.ಸಿ.ಎ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು ಭಾಗವಹಿಸಲಿದ್ದಾರೆ”ಎಂದು ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷ ಗೌತಮ್ ಶೆಟ್ಟಿ ತಿಳಿಸಿದ್ದಾರೆ.”
ಟಿ.ಸಿ.ಎ ಉಡುಪಿ ಸಂಸ್ಥೆ ಈ ಕ್ರಿಕೆಟ್ ಪಂದ್ಯಾಟವನ್ನು ಕುಂದಾಪುರದ ಗಾಂಧಿ ಮೈದಾನದಲ್ಲಿ ಆಯೋಜಿಸುತ್ತಿದ್ದು,ಎರಡು ಪ್ರತ್ಯೇಕ ವಿಭಾಗಗಳಲ್ಲಿ ನಡೆಯಲಿದೆ. ಒಂದರಿಂದ 10ನೇ ತರಗತಿಯ ಮಕ್ಕಳಿಗೆ ಶಾಲಾ ಮಟ್ಟದಲ್ಲಿ ಹಾಗೂ ಪಿಯುಸಿ ಮತ್ತು ಪದವಿ  ವಿದ್ಯಾರ್ಥಿಗಳಿಗೆ ಕಾಲೇಜು ಮಟ್ಟದಲ್ಲಿ  ಹೀಗೆ ಎರಡು ವಿಭಾಗಗಳಲ್ಲಿ ಪಂದ್ಯಾಟ ನಡೆಯಲಿದೆ.
ಪಂದ್ಯಾವಳಿಯ ನೇರ ಪ್ರಸಾರ Sportskannadatv ಯುಟ್ಯೂಬ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.
Exit mobile version