Site icon SportsKannada ಸ್ಪೋರ್ಟ್ಸ್ ಕನ್ನಡ

ಉಡುಪಿಯಲ್ಲಿ ಸೈಮಂಡ್ಸ್ ಪ್ರೀಮಿಯರ್ ಲೀಗ್ 2025: SPLಸೀಸನ್ 5

ಉಡುಪಿಯಲ್ಲಿ ಸೈಮಂಡ್ಸ್ ಪ್ರೀಮಿಯರ್ ಲೀಗ್ 2025: SPLಸೀಸನ್ 5

ಉಡುಪಿಯ ಸೈಮಂಡ್ಸ್ ಕ್ರಿಕೆಟ್ ಕ್ಲಬ್ ನಡೆಸುತ್ತಿರುವ ಬಹು ನಿರೀಕ್ಷಿತ ಸೈಮಂಡ್ಸ್ ಪ್ರೀಮಿಯರ್ ಲೀಗ್ (SPL) 2025 ಕ್ರಿಕೆಟ್ ಟೂರ್ನಮೆಂಟ್, ಮೇ 11, 2025 ರಂದು ಉಡುಪಿಯ ಕಡಿಯಾಳಿ ಶಾಲಾ ಮೈದಾನದಲ್ಲಿ ಜರುಗಲಿದೆ. ಇದು SPL ನ ಐದನೇ ಆವೃತ್ತಿಯಾಗಿದ್ದು, ಈ ಪಂದ್ಯಾವಳಿ ಸೈಮಂಡ್ಸ್ ಕ್ರಿಕೆಟ್ ಕ್ಲಬ್ ಸದಸ್ಯರಿಗೆ ಮಾತ್ರ ಮೀಸಲಾಗಿದ್ದು, ಈ ಬಾರಿ ನಾಲ್ಕು ತಂಡಗಳು ಕಣಕ್ಕಿಳಿಯಲಿವೆ. ಇವುಗಳೆಂದರೆ:

ಸೈಮಂಡ್ಸ್ ಸೂಪರ್‌ಜೈಂಟ್ಸ್

ಸೈಮಂಡ್ಸ್ ಸ್ಟ್ರೈಕರ್ಸ್

ಸೈಮಂಡ್ಸ್ ರಾಯಲ್ ಚಾಲೆಂಜರ್ಸ್

ಸೈಮಂಡ್ಸ್ ಬ್ಲ್ಯಾಕ್ ಪ್ಯಾಂಥರ್ಸ್

 

ಪಂದ್ಯಾವಳಿ ಲೀಗ್ ಕಮ್ ನಾಕ್ ಔಟ್ ಮಾದರಿಯಲ್ಲಿ ನಡೆಯಲಿದ್ದು, ಮೊದಲಿಗೆ ಲೀಗ್ ಹಂತದ ಪಂದ್ಯಗಳು ನಡೆಯುತ್ತವೆ. ನಂತರ ಅತ್ಯುತ್ತಮ ಪ್ರದರ್ಶನ ನೀಡಿದ ತಂಡಗಳು ನಾಕ್ ಔಟ್ ಹಂತಕ್ಕೆ ಅರ್ಹತೆ ಪಡೆಯುತ್ತವೆ. ಇದು ಉಡುಪಿಯ ಸೈಮಂಡ್ಸ್ ಕ್ರಿಕೆಟ್ ಕ್ಲಬ್ ಸದಸ್ಯರಿಗೆ ಸಂಭ್ರಮದ ಕ್ಷಣವನ್ನು ನೀಡಲಿದೆ.

ಆಸಕ್ತರು ಈ ಪಂದ್ಯಾವಳಿಯನ್ನು ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರದ ಮೂಲಕ ವೀಕ್ಷಿಸಬಹುದಾಗಿದೆ.

Exit mobile version