SportsKannada | ಸ್ಪೋರ್ಟ್ಸ್ ಕನ್ನಡ

ಚಾಲೆಂಜ್ ರಾಷ್ಟ್ರೀಯ ಮಟ್ಟದ ಟ್ರೋಫಿ ಅನಾವರಣಗೊಳಿಸಿದ ಚಕ್ರವರ್ತಿ ಶ್ರೀಪಾದ ಉಪಾಧ್ಯಾಯ ಮತ್ತು ಪ್ರದೀಪ್ ವಾಜ್ ಇವರಿಗೆ ಸನ್ಮಾನ

ಕುಂದಾಪುರ-ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಚಾಲೆಂಜ್ ಟ್ರೋಫಿ-2022 ಅಂತಿಮ‌ ದಿನವಾದ ರವಿವಾರ ಬೆಳಿಗ್ಗೆ ಚಕ್ರವರ್ತಿ ಕ್ರಿಕೆಟ್ ಕ್ಲಬ್ ಕುಂದಾಪುರ ತಂಡದ ಯಶಸ್ವಿ ನಾಯಕರಾದ ಶ್ರೀಪಾದ ಉಪಾಧ್ಯಾಯ ಮತ್ತು ಸವ್ಯಸಾಚಿ ಆಟಗಾರರಾದ ಪ್ರದೀಪ್ ವಾಜ್ ಇವರನ್ನು ಚಾಲೆಂಜ್ ಕ್ರಿಕೆಟರ್ಸ್ ವತಿಯಿಂದ ಸನ್ಮಾನಿಸಲಾಯಿತು
ತದನಂತರ ಚಾಲೆಂಜ್ ಟ್ರೋಫಿಯನ್ನು ಶ್ರೀಪಾದ ಉಪಾಧ್ಯಾಯ ಮತ್ತು ಪ್ರದೀಪ್ ವಾಜ್ ಮತ್ತು ಕೆನರಾ ಕಿನ್ನಿಮೂಲ್ಕಿ ಉದಯ್ ಕುಮಾರ್ ಜೊತೆಯಾಗಿ ಅನಾವರಣಗೊಳಿಸಿದರು.
ಈ ಸಂದರ್ಭ ಸನ್ನಿ ಉಡುಪಿ ಅಮರನಾಥ್ ಭಟ್,ಕಿಶೋರ್,ಕೆನರಾ ಉದಯ್ ಕುಮಾರ್ ಕಿನ್ನಿಮೂಲ್ಕಿ,ರಾಜಾ ಚಕ್ರವರ್ತಿ ಇವರನ್ನು ಕೂಡ ಗೌರವಿಸಲಾಯಿತು.
ಚಕ್ರವರ್ತಿ ಕ್ರಿಕೆಟ್ ಕ್ಲಬ್ ಕಪ್ತಾನರಾದ ಶ್ರೀಪಾದ್ ಉಪಾಧ್ಯಾಯರು ಅವಿಘ್ನ‌ ಸೃಷ್ಟಿ ಮತ್ತು ಫ್ರೆಂಡ್ಸ್ ಬೆಂಗಳೂರು ತಂಡಗಳ ನಡುವಿನ ನಿರ್ಣಾಯಕ ಕ್ವಾರ್ಟರ್ ಫೈನಲ್ ಟಾಸ್ ನಡೆಸಿದರು.ಆ ಪಂದ್ಯದ ವಿಜೇತ ತಂಡ ಫ್ರೆಂಡ್ಸ್ ಬೆಂಗಳೂರು ತಂಡದ ಸಾಗರ್ ಭಂಡಾರಿ ಇವರಿಗೆ ಪ್ರದೀಪ್ ವಾಜ್ ರವರು ಪಂದ್ಯಶ್ರೇಷ್ಟ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭ ಹಿರಿಯ ಆಟಗಾರರಾದ ಜಗದೀಶ್ ಕಾಮತ್ ಕಟಪಾಡಿ,ಅಮರನಾಥ ಭಟ್ ಸನ್ನಿ,
ಭೂಷಣ್ ಸನ್ನಿ ಉಡುಪಿ,ಕುಂದಾಪುರ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಶಿಧರ್ ಹೆಮ್ಮಾಡಿ,ಹಿರಿಯ ಪತ್ರಕರ್ತ ನಾಗರಾಜ್ ರಾಯಪ್ಪನಮಠ,ಚಕ್ರವರ್ತಿ ಕುಂದಾಪುರದ ಹಿರಿಯ ಆಟಗಾರರಾದ ಮನೋಜ್ ನಾಯರ್,ಕೆ‌.ಪಿ.ಸತೀಶ್,ರಂಜಿತ್ ಶೆಟ್ಟಿ,ಸ್ಪೋರ್ಟ್ಸ್ ಕನ್ನಡ ಕೋಟ ರಾಮಕೃಷ್ಣ ಆಚಾರ್,ಚಾಲೆಂಜ್ ತಂಡದ ವ್ಯವಸ್ಥಾಪಕರಾದ ಚಾಲೆಂಜ್ ಚಂದ್ರ,ಪಂದ್ಯಾಟ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಮತ್ತು ಚಾಲೆಂಜ್ ತಂಡದ ಆಟಗಾರರು ಉಪಸ್ಥಿತರಿದ್ದರು…
Exit mobile version