
*ಶಾರ್ಜಾದ ಜೆ.ಎಂ.ಆರ್.ಸ್ಪೋರ್ಟಿಂಗ್ ಟ್ರೋಫಿ ಜಗರ್ ನಾಟ್ ಮಡಿಲಿಗೆ*
ಶಾರ್ಜಾದ ಜೆ.ಎಂ.ಆರ್ ಸ್ಪೋರ್ಟಿಂಗ್ ಮೈದಾನದಲ್ಲಿ ಜರಗಿದ ಸೀಸನ್ 8ರ ಈ ಪಂದ್ಯಾಕೂಟದಲ್ಲಿ ಲೆದರ್ ಬಾಲ್ ಕ್ರಿಕೆಟನಲ್ಲಿ ಪ್ರಸಿದ್ಧಿ ಪಡೆದಿರುವ ಯು.ಎ.ಇ ನ ಪ್ರಮುಖ ನಾಲ್ಕು ತಂಡಗಳಾದ ಜಗ್ಗರನಾಟ್ ಕ್ಲಾಸಿಕ್ ಏಸಸ್, ಗೋಜಲ್ ಯುನೈಟೆಡ ಯು.ಎ ಯಿ,ನೆಟ್ವರ್ಕ್ ಹಾಗೂ ದಿ ರಾಯಲ್ ಮೇವರಿಕ್ಸ್ ತಂಡಗಳು ಭಾಗವಹಿಸಿದ್ದವು.
ಫೈನಲ್ ಪಂದ್ಯವು ಗೋಜಲ್ ಯುನೈಟೆಡ್ ಯು.ಎ.ಯಿ ಹಾಗೂ ಜಗ್ಗರನಾಟ್ ಕ್ಲಾಸಿಕ್ ಏಸಸ್ ತಂಡಗಳ ನಡುವೆ ಜರಗಿತು.ಮೊದಲು ಬ್ಯಾಟ್ ಮಾಡಿದ ಗೋಜಲ್ ಯುನೈಟೆಡ್ ತಂಡವು 20 ಓವರಗಳಲ್ಲಿ 9 ವಿಕೆಟ್ ನಷ್ಟಕ್ಕೆ 206 ರನ್ನುಗಳ ಬೃಹತ್ ಮೊತ್ತವನ್ನು ಪೇರಿಸಿತು.ಈ ಕಠಿಣ ಗುರಿಯನ್ನು ಬೆಂಬತ್ತಿದ್ದ ಜಗರನಾಟ್ ತಂಡವು ಕೇವಲ 15.5 ಓವರಗಳಲ್ಲಿ 5 ವಿಕೆಟುಗಳನ್ನು ಕಳೆದುಕೊಂಡು ಸಲೀಸಾಗಿ 207ರನ್ನು ಗಳಿಸಿ 5 ವಿಕೆಟುಗಳಿಂದ ಗೋಜಲ್ ಯುನೈಟೆಡ್ ತಂಡವನ್ನು ಭರ್ಜರಿಯಾಗಿ ಮಣಿಸಿ ವಿಜಯಪತಾಕೆ ಹಾರಿಸಿತು. ಜಗರನಾಟ್ ತಂಡದ ಬೀಸುದಾಂಡಿಗ ಗಯಾನಾ ಚಿಂತಕ್ ಕೇವಲ 40 ಚೆಂಡುಗಳಲ್ಲಿ 7 ಗಗನಚುಂಬಿ ಸಿಕ್ಸರ್ ಹಾಗೂ 10 ಮನಮೋಹಕ ಬೌಂಡರಿಯೊಂದಿಗೆ ಸಿಡಿಲಬ್ಬರದ 96ರನ್ನು ಸಿಡಿಸಿ ತಂಡದ ವಿಜಯಕ್ಕೆ ಆಸರೆಯಾದರು. ಬೌಲಿಂಗನಲ್ಲೂ ಮಿಂಚಿದ ಚಿಂತಕ್ 3ಓವರಗಳಲ್ಲಿ ಒಂದು ಅಮೂಲ್ಯ ವಿಕೆಟನ್ನು ಕೂಡಾ ಪಡೆಯುವುದರ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಅಭಿನಂದಿತರಾದರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಜಗರನಾಟ್ ತಂಡವು ಮಿರಮಿರನೆ ಮಿಂಚುವ ಜೆ.ಎಂ.ಆರ್ ಸ್ಪೋರ್ಟಿಂಗ್ ಟ್ರೋಫಿ ಸಹಿತ 1500 ಎ.ಇ.ಡಿ ನಗದು ಹಾಗೂ ಪಾರಿತೋಷಕಗಳನ್ನು ಶಾರ್ಜಾದ ಜೆ.ಎಂ.ಆರ್ ಸ್ಪೋರ್ಟಿಂಗ್ ಕಮಿಟಿಯ ಮುಖ್ಯಸ್ಥರಾದ ಶ್ರೀಯುತ ತಲಹ್ ರವರಿಂದ ತಂಡದ ನಾಯಕ ಜೊನಾಥನ್ ಡೇನಿಯಲ್ ಸ್ವೀಕರಿಸಿದರು. ಗೋಜಲ್ ಯುನೈಟೆಡ್ ತಂಡದ ನಾಯಕ ಶ್ರೀಯುತ ರನ್ಝಾನ್ ಸೋಲೆಹ್ ರನ್ನರ್ ಅಪ್ ಪ್ರಶಸ್ತಿ ನಗದು ಪಾರಿತೋಷಕಗಳನ್ನು ದುಬೈ ಟೆಕ್ನೋಟೈಟಾನ್ಸ್ ತಂಡದ ನಾಯಕ ಹಾಗೂ ಸ್ಪೋರ್ಟ್ಸ್ ಕನ್ನಡ ಚಾನೆಲಿನ ಮಧ್ಯಪ್ರಾಚ್ಯ ದೇಶಗಳ ಪ್ರತಿನಿಧಿ ಶ್ರೀಯುತ ವಿಠಲ್ ರಿಶಾನ್ ನಾಯಕರಿಂದ ಪಡೆದರು.
ಜನಮನ ಸೆಳೆದ ಈ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಅರಬ್ ಸಂಯುಕ್ತ ರಾಷ್ಟ್ರದ ಪ್ರಮುಖ ಗಣ್ಯರು,ಕ್ರೀಡಾಪಟುಗಳು ಸೇರಿದಂತೆ ಅನೇಕ ಪ್ರಮುಖರು ಪಾಲ್ಗೊಂಡಿದ್ದರು.
ಈ ಅಪೂರ್ವ ಪಂದ್ಯಾವಳಿಯ
ವಿಜೇತರಿಗೆ,ಪಾಲ್ಗೊಂಡ ಕ್ರೀಡಾಪಟುಗಳಿಗೆ,ವೀಕ್ಷಿಸಿದ ಎಲ್ಲಾ ಕ್ರೀಡಾಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡ ಚಾನೆಲಿನ ಸ್ಥಾಪಕ ಶ್ರೀರಾಮಕೃಷ್ಣ ಆಚಾರ್ಯರು ಶುಭಾಶಯ ಕೋರಿದ್ದಾರೆ.
ಮನುಕುಲಕ್ಕೆ ಕ್ರೀಡೆಗಳು ಸದಾ ಬೆಳಕಾಗಿರಲಿ.
ಬರಹ: ಪಿ.ಲಾತವ್ಯ ಆಚಾರ್ಯ ಉಡುಪಿ.
