SportsKannada | ಸ್ಪೋರ್ಟ್ಸ್ ಕನ್ನಡ

ಸತತ 4 ಸಿಕ್ಸರ್ ಸಿಡಿಸಿದ ಸಚಿನ್ ಕೋಟೇಶ್ವರ-ಎಸ್‌.ಎಸ್.ಕಿಂಗ್ಸ್ ತಂಡಕ್ಕೆ K.P.L 2020 ಪ್ರಶಸ್ತಿ.

ಅಜೇಯ್ ಕ್ರಿಕೆಟ್ ಕ್ಲಬ್ ಕುಂಜಿಗುಡಿ
ಸಾಲಿಗ್ರಾಮ ತಂಡದ 35 ವಾರ್ಷಿಕೋತ್ಸವದ ಸವಿನೆನಪಿಗಾಗಿ,ನಾಗೇಶ್ ಪೂಜಾರಿ ಕಾರ್ಕಡ ಇವರ ದಕ್ಷ ಸಾರಥ್ಯದಲ್ಲಿ
ಸ್ಥಳೀಯ ಪ್ರತಿಭೆಗಳ ಅನ್ವೇಷಣೆಗಾಗಿ,ನ್ಯೂ ಕಾರ್ಕಡ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ಜರುಗಿದ್ದ
45 ಗಜಗಳ ಹೊನಲು ಬೆಳಕಿನ
KPL-2020 ಪ್ರಶಸ್ತಿಯನ್ನು ಶಶಿಕುಮಾರ್ ಬಿ.ಬಿ.ಸಿ,ಸಂದೀಪ್ ನಾಯರಿ ಸಾರಥ್ಯದ
ಎಸ್.ಎಸ್.ಕಿಂಗ್ಸ್ ಜಯಿಸಿದೆ.

ಸ್ಥಳೀಯ 8 ಫ್ರಾಂಚೈಸಿಗಳ ಲೀಗ್ ಹಂತದ ರೋಚಕ ಸೆಣಸಾಟಗಳ ಬಳಿಕ, ಎಮ್.ಪಿ.ಹಂಟರ್ಸ್,ಫ್ರೆಂಡ್ಸ್ ಕಾವಡಿ,ಜಿ.ಆರ್.ಎಸ್.ಟಿ ಕಾರ್ಕಡ ರಾಯಲ್ಸ್ ಹಾಗೂ ಎಸ್.ಎಸ್.ಕಿಂಗ್ಸ್ ಕ್ವಾಲಿಫೈಯರ್ ಸುತ್ತು ಪ್ರವೇಶಿಸಿದ್ದವು.ಅಂತಿಮವಾಗಿ


ಎಮ್.ಪಿ ಹಂಟರ್ಸ್ ಹಾಗೂ ಎಸ್.ಎಸ್.ಕಿಂಗ್ಸ್ ಫೈನಲ್ ಟಿಕೆಟ್ ಪಡೆದಿದ್ದರು.
ಫೈನಲ್ ನಲ್ಲಿ


ಮೊದಲು ಬ್ಯಾಟಿಂಗ್ ನಡೆಸಿದ ಎಮ್.ಪಿ.ಹಂಟರ್ಸ್ ಎದುರಾಳಿಗೆ 44 ರನ್ ಗಳ ಗುರಿಯನ್ನು ನೀಡಿತ್ತು.ಚೇಸಿಂಗ್ ವೇಳೆ
ಮೊದಲ 4 ಓವರ್ ಗಳಲ್ಲಿ ರನ್ ಗಾಗಿ ಪರದಾಡಿದ ಎಸ್.ಎಸ್.ಕಿಂಗ್ಸ್
ಕೊನೆಯ ಓವರ್ ನಲ್ಲಿ 20 ರನ್ ಗಳ ಅವಶ್ಯಕತೆ ಬಿದ್ದಾಗ,
ಸಚಿನ್ ಕೋಟೇಶ್ವರ ಸತತ 4 ಎಸೆತಗಳಲ್ಲಿ ಬಿರುಸಿನ
4 ಸಿಕ್ಸ್ ಸಿಡಿಸಿ ತಂಡದ ಜಯಭೇರಿ ಬಾರಿಸಿದರು.

ಪ್ರಶಸ್ತಿ ವಿಜೇತ ಎಸ್.ಎಸ್.ಕಿಂಗ್ಸ್
50 ಸಾವಿರ ನಗದು ಹಾಗೂ ರನ್ನರ್ಸ್ ಎಮ್.ಪಿ.ಹಂಟರ್ಸ್ 30 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರು.
ವೈಯಕ್ತಿಕ ಪ್ರಶಸ್ತಿಗಳಾದ
ಬೆಸ್ಟ್ ಬೌಲರ್ ಭರತ್ ಗಿಳಿಯಾರು,


ಬೆಸ್ಟ್ ಬ್ಯಾಟ್ಸ್‌ಮನ್ ಶ್ರೀಧರ್ ಕಾರ್ಕಡ,ಬೆಸ್ಟ್ ಫೀಲ್ಡರ್ ರಾಜಾ ಗಂಗೊಳ್ಳಿ,ಬೆಸ್ಟ್ ಕೀಪರ್ ವಿನೋದ್ ಕಾರ್ಕಡ,ಟೂರ್ನಿಯುದ್ದಕ್ಕೂ ಶ್ರೇಷ್ಟ ಬ್ಯಾಟಿಂಗ್ ಪ್ರದರ್ಶಿಸಿದ ಗಿಳಿಯಾರು ನಾಗ ಸರಣಿಶ್ರೇಷ್ಟ ಪ್ರಶಸ್ತಿ ಪಡೆದುಕೊಂಡರು.

ಶನಿವಾರ ಸಂಜೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಾಲಿಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ರಾಜು ಪೂಜಾರಿ ಕಾರ್ಕಡ ಹಾಗೂ ಕಾರ್ಕಡ ಹೊಸ.ಹಿ.ಪ್ರಾ‌.ಶಾಲೆಯ ಮುಖ್ಯೋಪಾಧ್ಯಾಯರು ಪ್ರಭಾಕರ್ ಕಾಮತ್,ಪಟ್ಟಣ ಪಂಚಾಯತ್ ಸದಸ್ಯ ಸಂಜೀವ ಕಾರ್ಕಡ,ಬಿಲ್ಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಥ್ವೀರಾಜ್ ಶೆಟ್ಟಿ,ಜಾನ್ಸನ್ ಹಂಗಳೂರಿನ ರವಿ ಹೆಗ್ಡೆ,ವಸಂತ್ ಕಾಂಚನ್ ಗುಂಡ್ಮಿಇನ್ನಿತರರು
ಉಪಸ್ಥಿತರಿದ್ದರು.


ಈ ಸಂದರ್ಭ ಅಜೇಯ್ ಕ್ರಿಕೆಟ್ ಕ್ಲಬ್ ನ ಪರವಾಗಿ ಹಲವಾರು ವರ್ಷಗಳ ಸೇವೆ ಸಲ್ಲಿಸಿದ ಹಿರಿಯ ಆಟಗಾರರಾದ ಉದಯ ಪೂಜಾರಿ ಹಾಗೂ ಅಣ್ಣಪ್ಪ ಕುಂಜಿಗುಡಿ ಹಾಗೂ ಸನ್ಮಾನಿಸಲಾಯಿತು.ಜೊತೆಗೆ ತಂಡದ ಪರವಾಗಿ‌ ಯಶಸ್ವಿ ಪ್ರದರ್ಶನ ತೋರಿಸಿದ ಗಿಳಿಯಾರು ನಾಗ,ಸುಧಾಕರ್ ಕುಂಭಾಶಿ,ಸಚಿನ್ ಕೋಟೇಶ್ವರ,ಅಜಿತ್ ಪಾಂಡೇಶ್ವರ,ಚೇತು ಪಾಂಡೇಶ್ವರ,ಪ್ರದೀಪ್ ಶೆಟ್ಟಿ ಗಿಳಿಯಾರು, ನಿಖಿಲ್ ಸಾಸ್ತಾನ,ಸತೀಶ್ ಪಡುಕರೆ,ರಾಜಾ ಜೈಹಿಂದ್ ಹಾಗೂ ಆದರ್ಶ ಕಾವಡಿ ಯವರನ್ನು ಗೌರವಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಅಜೇಯ್ ಕ್ರಿಕೆಟ್ ಕ್ಲಬ್ ಕಳೆದ 35 ವರ್ಷಗಳಿಂದ ನಿರಂತರವಾಗಿ ಸಾಂಸ್ಕೃತಿಕ,ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮಾದರಿ ಸಂಸ್ಥೆಯಾಗಿದೆ ಎಂದು ವಿಜೇತರನ್ನು ಅಭಿನಂದಿಸಿದರು.
ಈ ಸಂದರ್ಭ ಅಜೇಯ್ ತಂಡದ ಗೌರವಾಧ್ಯಕ್ಷ ಮಂಜುನಾಥ್ ನಾಯರಿ,ಅಧ್ಯಕ್ಷ ಮಹೇಶ್ ನಾಯರಿ,ಉದ್ಯಮಿ ಕೆ.ಪಿ.ಶೇಖರ್,ಸಂಜೀವ ದೇವಾಡಿಗ,
ತಿಮ್ಮಪ್ಪ ಪೂಜಾರಿ ನಾಗರಮಠ,
ಅಜೇಯ್ ಕ್ರಿಕೆಟ್ ಕ್ಲಬ್ ನ ಮಾಲೀಕ್ ಹಾಗೂ ನಾಯಕ ನಾಗೇಶ್ ಪೂಜಾರಿ ಹಾಗೂ ಸ್ಪೋರ್ಟ್ಸ್ ಕನ್ನಡ ಸಂಚಾಲಕ ಕೋಟ ರಾಮಕೃಷ್ಣ ಆಚಾರ್ಯ ಉಪಸ್ಥಿತರಿದ್ದರು‌.

ಪಂದ್ಯಾವಳಿಯ ನೇರ ಪ್ರಸಾರವನ್ನು M.Sports ಯೂ ಟ್ಯೂಬ್ ಚಾನೆಲ್ ನ ಮೂಲಕ 2 ದಿನಗಳ ಕಾಲ 55,000 ಕ್ಕೂ ಮಿಕ್ಕಿದ ಕ್ರೀಡಾಭಿಮಾನಿಗಳು ವೀಕ್ಷಿಸಿದರು.

ಆರ್.ಕೆ.ಆಚಾರ್ಯ ಕೋಟ…

Exit mobile version