SportsKannada | ಸ್ಪೋರ್ಟ್ಸ್ ಕನ್ನಡ

ಸಂಘಟಿತ ಹೋರಾಟ-ಫ್ರೆಂಡ್ಸ್ ಬೆಂಗಳೂರಿಗೆ YPL ಕಿರೀಟ

ಬೆಂಗಳೂರಿನ ಯಶವಂತಪುರದ ಜೆ.ಪಿ‌ ಪಾರ್ಕ್ ಹಾಗೂ ರೈಲ್ವೇಸ್ ಅಂಗಣದಲ್ಲಿ ಸತತ 5 ದಿನಗಳ ಕಾಲ ಹೊನಲು ಬೆಳಕಿನಲ್ಲಿ ಸಾಗಿದ ಯಶವಂತಪುರ ಕ್ರಿಕೆಟ್ ಹಬ್ಬ Y.P.L -2019 ಪ್ರಶಸ್ತಿಯನ್ನು ರೇಣು ಗೌಡ ಮಾಲೀಕತ್ವದ “ಫ್ರೆಂಡ್ಸ್ ಬೆಂಗಳೂರು” ತಂಡ ಗೆದ್ದು ಲೀಗ್ ಹಂತದ ಪ್ರಬಲ ಪೈಪೋಟಿಗಳ ಬಳಿಕ, ರೌಂಡ್ ರಾಬಿನ್ ಮಾದರಿಯಲ್ಲಿ ನಡೆದ ಸೆಮಿಫೈನಲ್ಸ್ ಕಾಳಗದಲ್ಲಿ ಫ್ರೆಂಡ್ಸ್, ನ್ಯಾಶ್ ಹಾಗೂ R.F.C ಫ್ರೆಂಡ್ಸ್ ಮುಖಾಮುಖಿಯಾಗಿದ್ದು R.F.C ತಂಡ ಸೋತು ಹೊರಬಿದ್ದಿತ್ತು.

 

ಅಂತಿಮವಾಗಿ ಫೈನಲ್ ಪ್ರವೇಶಿಸಿದ ನ್ಯಾಶ್ ಬೆಂಗಳೂರು ತಂಡ ಮೊದಲು ಬ್ಯಾಟಿಂಗ್ ನಡೆಸಿ 7 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 42 ರನ್ ಕಲೆ ಹಾಕಿತ್ತು. ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ ಫ್ರೆಂಡ್ಸ್ ಬೆಂಗಳೂರು ನವೀನ್ 13 ಹಾಗೂ ನಸ್ರುದ್ದೀನ್ 10 ರನ್ ಗಳ ನೆರವಿನಿಂದ 6 ವಿಕೆಟ್ ಗಳ ಸುಲಭ ಜಯ ಸಾಧಿಸಿತ್ತು.

ಪ್ರಥಮ ಸ್ಥಾನಿ ಫ್ರೆಂಡ್ಸ್ ಬೆಂಗಳೂರು ತಂಡ 2 ಲಕ್ಷ ನಗದು,ರನ್ನರ್ಸ್ ನ್ಯಾಶ್ ಬೆಂಗಳೂರು 1 ಲಕ್ಷ ನಗದು ಬಹುಮಾನ‌ ಸಹಿತ ಆಕರ್ಷಕ ಟ್ರೋಫಿಗಳನ್ನು ತನ್ನದಾಗಿಸಿಕೊಂಡಿತು. ಟೂರ್ನಿಯುದ್ದಕ್ಕೂ ಬ್ಯಾಟಿಂಗ್ ನಲ್ಲಿ ಶ್ರೇಷ್ಠ ನಿರ್ವಹಣೆ ತೋರಿದ ನ್ಯಾಶ್ ನ ಅಕ್ಷಯ್ ಸಿ.ಕೆ ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದುಕೊಂಡರು.

ಪಂದ್ಯಾವಳಿಯ ನೇರ ಪ್ರಸಾರ M.Sports ಬಿತ್ತರಿಸಿದ್ದು, ವೀಕ್ಷಕ ವಿವರಣೆಯಲ್ಲಿ ಗಿರಿಧರ್, ಜೂಲಿ ಹಾಗೂ ಸೀನು ನಾರಾಯಣಪ್ಪ ಸಹಕರಿಸಿದ್ದರು.

ಆರ್.ಕೆ.ಆಚಾರ್ಯ ಕೋಟ

Exit mobile version