
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮುಂಬೈಕರ್ ಬೌಲಿಂಗ್ ಕೋಚ್
ಐಪಿಎಲ್-2025ನೇ ಸಾಲಿನ ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಜ್ಜಾಗುತ್ತಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಮತ್ತು ಯಶ್ ದಯಾಳ್ ಅವರನ್ನು ರಿಟೇನ್ ಮಾಡಿಕೊಂಡಿರುವ ಆರ್.ಸಿ.ಬಿ, ಮೆಗಾ ಆಕ್ಷನ್’ಗೆ ರೆಡಿಯಾಗುತ್ತಿದೆ.
ಈ ಮಧ್ಯೆ ಆರ್.ಸಿ.ಬಿ ತಂಡಕ್ಕೆ ಹೊಸ ಬೌಲಿಂಗ್ ಕೋಚ್ ಬಂದಿದ್ದಾರೆ. ಅವರೇ, ಮುಂಬೈನ ಓಂಕಾರ್ ಸಾಳ್ವಿ.
ಓಂಕಾರ್ ಸಾಳ್ವಿ ರಣಜಿ ಟ್ರೋಫಿ, ಇರಾನಿ ಕಪ್ ವಿಜೇತ ಮುಂಬೈ ತಂಡದ ಬೌಲಿಂಗ್ ಕೋಚ್ ಆಗಿದ್ದರು. ಇದೀಗ ಆರ್.ಸಿ.ಬಿ ಬ್ಯಾಟಿಂಗ್ ಕೋಚ್ ಹಾಗೂ ಮೆಂಟರ್ ಆಗಿರುವ ದಿನೇಶ್ ಕಾರ್ತಿಕ್, ಮುಂಬೈನ ಓಂಕಾರ್ ಸಾಳ್ವಿ ಅವರನ್ನು ರಾಯಲ್ ಚಾಲೆಂಜರ್ಸ್ ತಂಡದ ಕೋಚಿಂಗ್ ಸ್ಟಾಫ್ ಆಗಿ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
RCB ಕೋಚಿಂಗ್ ಮತ್ತು ಸಹಾಯಕ ಸಿಬ್ಬಂದಿ
ಚೇರ್ಮನ್: ಪ್ರಥಮೇಶ್ ಮಿಶ್ರಾ
ಉಪಾಧ್ಯಕ್ಷ ಮತ್ತು ಮುಖ್ಯಸ್ಥ: ರಾಜೇಶ್ ಮೆನನ್
ಹೆಡ್ ಕೋಚ್: ಆ್ಯಂಡಿ ಫ್ಲವರ್
ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್: ದಿನೇಶ್ ಕಾರ್ತಿಕ್
ಬೌಲಿಂಗ್ ಕೋಚ್: ಓಂಕಾರ್ ಸಾಳ್ವಿ
ಫೀಲ್ಡಿಂಗ್ ಕೋಚ್ & ಟ್ಯಾಲೆಂಟ್ ಸ್ಕೌಟ್: ಮಲೋಲನ್ ರಂಗರಾಜನ್
ಹೆಡ್ ಆಫ್ ಮಾರ್ಕೆಟಿಂಗ್ & ರೆವೆನ್ಯೂ: ನಿಖಿಲ್ ಸೋಸಲೆ
ಹೆಡ್ ಆಫ್ ಕಂಟೆಂಟ್ & ಡಿಜಿಟಲ್: ಅಜಿತ್ ರಾಮಮೂರ್ತಿ
ಡೈರೆಕ್ಟರ್ ಆಫ್ ಕ್ರಿಕೆಟ್ ಆಪರೇಷನ್ಸ್: ಮೊ ಬೊಬಾಟ್
ಸ್ಟ್ರೆಂತ್ & ಕಂಡಿಷನಿಂಗ್ ಕೋಚ್: ಶಂಕರ್ ಬಸು
ಟೀಮ್ ಫಿಸಿಯೊ: ಇವಾನ್ ಸ್ಪೀಚ್ಲೀ
ಟೀಮ್ ಅನಾಲಿಸ್ಟ್: ಫ್ರೆಡ್ಡೀ ವಿಲ್ಡೇ
ಸ್ಪೋರ್ಟ್ಸ್ ಮಸಾಜ್ ಥೆರಪಿಸ್ಟ್: ನವನೀತಾ ಗೌತಮ್
ಮ್ಯಾಸಿಯರ್ & ಕೇರ್ ಟೇಕರ್: ರಮೇಶ್ ಮಾನೆ
ಮಾಸಿಯರ್: ಮಂಗೇಶ್
ವೆಲ್’ನೆಸ್ ಎಕ್ಸ್’ಪರ್ಟ್: ಡಾ.ಚೈತನ್ಯ ಶ್ರೀಧರ್
