SportsKannada | ಸ್ಪೋರ್ಟ್ಸ್ ಕನ್ನಡ

ರಿಯಾನ್ ಬರ್ಲ್ ಮನವಿಗೆ ಸ್ಪಂದಿಸಿದ ಪೂಮಾ..!!

ಜಿಂಬಾಬ್ವೆ ಕ್ರಿಕೆಟಿಗ ರಿಯಾನ್ ಬರ್ಲ್ ತನ್ನ ಟ್ವಿಟರ್ ಖಾತೆಯಲ್ಲಿ ಹರಿದುಹೊದ ಶೂಗಳ ಚಿತ್ರವನ್ನು ಪೋಸ್ಟ್ ಮಾಡುವುದರ ಜೊತೆಗೆ ಅರ್ಥಿಕ ಬಿಕ್ಕಟ್ಟಿನಲ್ಲಿ ನಲುಗಿಹೊಗಿರುವ ತನ್ನ ತಂಡಕ್ಕೆ ಪ್ರಾಯೋಜಕರಿಗಾಗಿ ಭಾವನಾತ್ಮಕ ಮನವಿಯನ್ನು ಸಾಮಾಜಿಕ ಜಾಲತಾಣದಲ್ಲಿ  ಹಂಚಿಕೊಂಡ ನಂತರ, ಕೆಲವೇ ಗಂಟೆಗಳಲ್ಲಿ  ಜನಪ್ರಿಯ ಕ್ರೀಡಾ ದೈತ್ಯ ಪೂಮಾ ಸಂಸ್ಥೆ ಜಿಂಬಾಬ್ವೆಯ ಕ್ರಿಕೆಟ್ ತಂಡಕ್ಕೆ ತಾನು ಪ್ರಾಯೋಜಿಸುವುದಾಗಿ ಹೇಳಿದೆ.
 ಜಿಂಬಾಬ್ವೆ ಕ್ರಿಕೆಟಿಗ ರಿಯಾನ್ ಬರ್ಲ್ ಧರಿಸಿರುವ ಹರಿದ ಶೂಗಳ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಸ್ಪೋರ್ಟ್ಸ್ ವೇರ್ ಬ್ರಾಂಡ್ ಪ್ರಾಯೋಜಕತ್ವ ನೀಡುವುದಾಗಿ ಪೂಮಾ ಪ್ರತಿಜ್ಞೆ ಮಾಡಿದೆ.
ಭಾರತೀಯ ಕ್ರಿಕೆಟಿಗ ಮತ್ತು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಆಟಗಾರ ಹರ್ಭಜನ್ ಸಿಂಗ್ ಅವರು ಪೂಮಾ ಸಂಸ್ಥೆ ಜಿಂಬಾಬ್ವೆ ತಂಡಕ್ಕೆ ತೊರಿದ ಪ್ರಾಯೋಜಕತ್ವಕ್ಕೆ ಇದು ಅದ್ಭುತ ಸೇವೆ ಎಂದು ಶ್ಲಾಘಿಸಿದ್ದಾರೆ
 “ಯಾವಾಗಲೂ ಆಟಗಾರರಿಗಾಗಿ  ಪೂಮಾ ಸಂಸ್ಥೆ ಸಹಾಯ ಹಸ್ತವನ್ನು ನೀಡುತ್ತಲೆ ಇರುತ್ತದೆ ಜನಪ್ರಿಯ ಕ್ರೀಡಾ ದೈತ್ಯ ಸಂಸ್ಥೆಯಾಗಿದೆ ಪೂಮಾ.  ಪೂಮಾ ಸಂಸ್ಥೆ ಜಿಂಬಾಬ್ವೆಯ ಬರ್ಲ್‌ ಮನವಿಗೆ ಸಹಾಯ ಮಾಡುವುದಾಗಿ ಬಹಿರಂಗವಾಗಿ ಘೋಷಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಕ್ರಿಡಾಭಿಮಾನಿಗಳು ಪೂಮಾ ಸಂಸ್ಥೆಯು ಜಿಂಬಾಬ್ವೆ ತಂಡಕ್ಕೆ ತೊರಿದ ಔದಾರ್ಯವನ್ನು ಹಾಡಿ ಹೊಗಳಿದ್ದಾರೆ
 ಜಿಂಬಾಬ್ವೆ ಕ್ರಿಕೆಟಿಗನು ಕ್ರೀಡಾ ಬ್ರಾಂಡ್‌ಗಳ ಸಹಾಯವನ್ನು ಕೋರಿದ ನಂತರ ” ಹರಿದ ಶೂಗಳನ್ನು ದೂರವಿಡುವ ಸಮಯ, ನಾವು ನಿಮ್ಮ ಸಹಾಯಕ್ಕೆ ಇದ್ದೇವೆ ” ಎಂದು ಬರ್ಲ್ ಅವರ ಟ್ವೀಟ್‌ಗೆ ಪೂಮಾ ಕ್ರೀಡಾ ದೈತ್ಯ ಸಂಸ್ಥೆ ಪ್ರತಿಕ್ರಿಯಿಸಿತ್ತು.
ನಾವು ಪ್ರಾಯೋಜಕರನ್ನು ಪಡೆಯುವ ಯಾವುದೇ ಅವಕಾಶಕ್ಕಾಗಿ ಕಾಯುತ್ತಿದ್ದೇವೆ
ಪ್ರತಿ ಸರಣಿಯ ನಂತರವೂ ನಾವುಗಳು ನಮ್ಮ ಜೋಡಿ ಶೂಗಳನ್ನು ಹೊಲಿದುಕೊಳ್ಳಬೇಕಿತ್ತು ಎಂದು ಬರ್ಲ್ ಬಹಿರಂಗಪಡಿಸಿದ್ದರು.
ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಬರ್ಲ್‌ನ ಅಗ್ನಿಪರೀಕ್ಷೆಯನ್ನು ರಿಟ್ವೀಟ್ ಮಾಡುವ ಮೂಲಕ ಮತ್ತು ಪ್ರಸ್ತಾಪಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳು ಮತ್ತು ಕ್ರೀಡಾ ಅನುಯಾಯಿಗಳು ತಮ್ಮ ಬೆಂಬಲವನ್ನು ವಿಸ್ತರಿಸಿದ್ದರಿಂದ ಬರ್ಲ್ ಅವರ ಟ್ವೀಟ್ ಅತಿ ಶೀಘ್ರದಲ್ಲಿ ವಿಶ್ವಮಟ್ಟದಲ್ಲಿ  ಚರ್ಚೆಯಾಯಿತು.
 ಆಲ್‌ರೌಂಡರ್ ಬರ್ಲ್, ಜಿಂಬಾಬ್ವೆ ಕ್ರಿಕೆಟ್ ತಂಡದ ಪರ 46 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
27 ರ ಹರೆಯದವರು ಎಲ್ಲಾ ಸ್ವರೂಪಗಳಲ್ಲಿ 500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.  ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬರ್ಲ್ ತನ್ನ ಸ್ಪಿನ್ ಮೊಡಿಯೊಂದಿಗೆ 26 ವಿಕೆಟ್ ಗಳಿಸಿದ್ದಾರೆ.
 ಜಿಂಬಾಬ್ವೆ ತಂಡ ಆಗಸ್ಟ್‌ನಲ್ಲಿ ಸೀಮಿತ ಓವರ್‌ಗಳ ಸರಣಿಯಲ್ಲಿ ಐರ್ಲೆಂಡ್ ವಿರುದ್ಧ ಆಡಲಿದೆ.
ಪೂಮಾ ಸಹಾಯ ಹಸ್ತ ವಿಶ್ವವ್ಯಾಪ್ತಿಯಲ್ಲಿರು ಕ್ರಿಕೆಟ್  ಅಭಿಮಾನಿಗಳ ಬೆಂಬಲದೊಂದಿಗೆ ಜಿಂಬಾಬ್ವೆ ತಂಡ ಪಾಕಿಸ್ತಾನದ ಎದುರಿನ ಸೋಲಿಕ ಕಹಿಯನ್ನು ಮರೆತು ಪುಟಿದೇಳುವಂತಾಗಲಿ ಎನ್ನುವುದೆ ನಮ್ಮೆಲ್ಲರ ಆಶಯವಾಗಿದೆ……
Exit mobile version