SportsKannada | ಸ್ಪೋರ್ಟ್ಸ್ ಕನ್ನಡ

ಪ್ರದೀಪ್ ವಾಜ್ ಚಕ್ರವರ್ತಿ-ನಾ ಕಂಡ ಟೆನ್ನಿಸ್ ಬಾಲ್ ಕ್ರಿಕೆಟ್ ನ ದಿಗ್ಗಜ-ಅಶೋಕ್ ಹೆಗ್ಡೆ ಹೆಬ್ರಿ

ನಮ್ಮಲ್ಲಿ ಒಂದು ಆಡುಭಾಷೆ ಇದೆ “ಆತ ಬಾರಿಸುವ ಸಿಕ್ಸರ್ ಗಳು ಮೈಲುಗಟ್ಟಲೆ ದೂರ ಹೋಗಿ ಬೀಳುತ್ತವೆ” ಇದನ್ನು ನಾವು ಹೆಚ್ಚಾಗಿ ಕಾರ್ಲ್ ಹೂಪರ್ ಆಂಡ್ರೂ ಸೈಮಂಡ್ಸ್ ಚಮಿಂಡ ವಾಸ್ ಎಡ್ಡೋ ಬ್ರಾಂಡಿಸ್, ಇಜಾಸ್ ಅಹ್ಮದ್ ಇಂಥವರಿಗೆ ಉಪಯೋಗಿಸುತ್ತಿದ್ದ ಪದಗಳು.
ಆದರೆ ಟೆನ್ನಿಸ್ ಬಾಲ್ ಕ್ರಿಕೆಟ್ ನಲ್ಲಿ ಶ್ರೀ ಪ್ರದೀಪ್ ವಾಜ್ ಸರ್ ಎಂಬ ಲೆಜೆಂಡ್ ಪ್ಲೇಯರ್ ಗೂ ಕೂಡ ಇದೇ ಆಡುಭಾಷೆ ಉಪಯೋಗಿಸುತ್ತಿದ್ದೆವು ಎಂದರೆ ಈ ಮನುಷ್ಯನ ಸಾಮರ್ಥ್ಯವನ್ನು ಅಂದಾಜಿಸಬಹುದು.
ಅದು ಚಕ್ರವರ್ತಿ ಕುಂದಾಪುರ ತಂಡದ ಆಟ ಅಂಕಣದಲ್ಲಿ ನಡೆಯುತ್ತಿತ್ತು ಎಂದರೆ ನಾನು ಕಾಯುತ್ತಿದ್ದದ್ದು ಪ್ರದೀಪ್ ವಾಜ್ ಸರ್ ಬ್ಯಾಟಿಂಗ್ ಬಗ್ಗೆ.
 ಶ್ರೀಪಾದ ಸರ್ ಸತೀಶ್ ಕೋಟ್ಯಾನ್ ಸರ್,  ಮನೋಜ್ ನಾಯರ್ ಸರ್ ಘಟಾ’ನುಘಟಿಗಳು  ಔಟ್ ಆದರೆ ಮಾತ್ರ ವಾಜ್ ಸರ್ ಗೆ ಅವಕಾಶ. ನಾವಂತೂ  ಇವರುಗಳು ಯಾವಾಗ ಔಟ್ ಆಗುತ್ತಾರೋ ಎಂದು ಕಾಯುತ್ತಿದ್ದೆವು. ನಾಲ್ಕು ಅಥವಾ ಐದನೇ ಕ್ರಮಾಂಕದಲ್ಲಿ ಬರುತ್ತಿದ್ದರು ನನ್ನ ಫೇವರೆಟ್ ಆಟಗಾರ ಪ್ರದೀಪ ವಾಜ್ ಸರ್.
ಒಬ್ಬ ತಮ್ಮ ತಂಡದ ಅಭಿಮಾನಿಯಾಗಿ ಅದೇ ತಂಡದ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಔಟ್ ಆಗಲಿ ಎಂದು ಕಾಯ್ತಿದ್ದದ್ದು ಸ್ವಲ್ಪ ರೀತಿಯಲ್ಲಿ ವಿಚಿತ್ರವಾಗಿ ಕಂಡರೂ ಇದರಲ್ಲಿ ಸ್ವಲ್ಪ ಸ್ವಾರ್ಥ ಅಡಗಿತ್ತು.
 ಹಿಂದಿ ಭಾಷೆಯಲ್ಲಿ ಒಂದು ಗಾದೆಯಿದೆ “”ಕುಚ್ ಪಾನೆ ಕೆ ಲಿಯೆ ಕುಚ್ ಕೋನಾ ಪಡ್ತಾ ಹೆ””. ಚಕ್ರವರ್ತಿ ತಂಡದ ಟಾಪ್ ಆರ್ಡರ್  ಔಟ್ಆದರೆ ಮಾತ್ರ ನನ್ನ ಇಷ್ಟವಾದ ಆಟಗಾರನ ಬ್ಯಾಟಿಂಗನ್ನು ಕಣ್ತುಂಬಿಕೊಳ್ಳಲು ಸಾಧ್ಯ. ಇಲ್ಲವಾದಲ್ಲಿ ಅಂದಿನ ರಾತ್ರಿ ನಿದ್ರೆ ಬಿಟ್ಟಿದ್ದು ವೇಸ್ಟ್ ಎಂಬ ಭಾವನೆ ಬರ್ತಾ ಇತ್ತು.
ನನ್ನ ಪ್ರಕಾರ ಐದನೇ ಮತ್ತು ಆರನೇ ಬ್ಯಾಟಿಂಗ್ ಕ್ರಮಾಂಕ ತುಂಬಾ ಕಷ್ಟಕರವಾಗಿರುತ್ತದೆ. ಸುಲಭವಾಗಿ ತುತ್ತಾಗುವ ತಂಡಗಳ ವಿರುದ್ಧ ಇವರುಗಳಿಗೆ ಆಡುವ ಪ್ರಮೇಯ ಬರುವುದಿಲ್ಲ ಆದರೆ ಜಿದ್ದಾಜಿದ್ದಿನ ಹೋರಾಟ ನಡಿಯೋ ತಂಡಗಳ ವಿರುದ್ಧ ಮಾತ್ರ ಇವರುಗಳಿಗೆ  ಅಂದರೆ ಐದನೇ ಮತ್ತು ಆರನೇ ಕ್ರಮಾಂಕದ ಆಟಗಾರರಿಗೆ ಅವಕಾಶ ಸಿಗುತ್ತದೆ ಮತ್ತು ಪಂದ್ಯದ ಮಹತ್ವದ ಕ್ಷಣದಲ್ಲಿ ಎದುರಾಳಿ ತಂಡದ ಡೆತ್ ಓವರ್ ಬೌಲರ್ (ಸಾಮಾನ್ಯವಾಗಿ ಈ ಓವರ್ ಗಳನ್ನ ತಂಡದ ಬೆಸ್ಟ್ ಬೌಲರ್ ಗಳು ಎಸೆಯುತ್ತಾರೆ) ಎದುರು ನೀಡುವ ಪ್ರದರ್ಶನ ಕ್ಕೆ ಯಾವುದೂ ಕೂಡ ಸರಿಸಮಾನ ಅಲ್ಲ. ಪಂದ್ಯದ ಪ್ರಮುಖ ಫಟ್ಟದಲ್ಲಿ  ಇವರ ಪಾತ್ರ ನಿರ್ಣಾಯಕ ವೆನಿಸುತ್ತದೆ.
ನಾನು ನೋಡಿದ ಪಂದ್ಯಗಳಲ್ಲಿ ಪ್ರದೀಪ್ ವಾಜ್ ಸರ್ ಇಂಥಾ ಸಂದರ್ಭಗಳಲ್ಲಿಯೇ ಬ್ಯಾಟಿಂಗ್ ನಡೆಸಿ ನಮ್ಮ ಮನಗೆದ್ದಿದ್ದರು.
ಕೆಲವು ಕೈ ತಪ್ಪಿಹೋದ ಪಂದ್ಯಗಳನ್ನೂ ಎಳೆದುತಂದ ಉದಾಹರಣೆ ಇನ್ನೂ ನೆನಪಿದೆ. ಅದು ಕುಂದಾಪುರ ಗಾಂಧಿ ಮೈದಾನ್ ಆಗಿರಬಹುದು, ಅಜ್ಜರಕಾಡು ಮೈದಾನ ಆಗಿರಬಹುದು ನೇತಾಜಿ ಪರ್ಕಳ ಮೈದಾನ ಆಗಿರಬಹುದು ಎಂಜಿಎಂ ಗ್ರೌಂಡ್ ಆಗಿರಬಹುದು ಹತ್ತುಹಲವು ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಗಳು ಇವರ ಮೂಲಕ ಬಂದಿದ್ದು 4 5 ಮತ್ತು ಆರನೇ ಕ್ರಮಾಂಕದಲ್ಲಿ.
ಕ್ರಿಕೆಟ್ ಲೆಜೆಂಡ್ ರಾಹುಲ್ ದ್ರಾವಿಡ್ ಎದುರು ಕೂಡ ಇವರು ಆಡಿರುತ್ತಾರೆ. ಕರ್ನಾಟಕ ಗ್ರಾಮಾಂತರ ತಂಡ MOFUSSIL XI ಎಂಬ ತಂಡ ಪ್ರತಿನಿಧಿಸುತ್ತ, ದ್ರಾವಿಡ್ ತಂಡವನ್ನು ಕೂಡ ಎದುರಿಸಿದ್ದರು. ಅಂತರಾಷ್ಟ್ರೀಯ ತಂಡದಲ್ಲಿ ಎಷ್ಟು ಮಂದಿ ರಾಬಿನ್ ಸಿಂಗ್ ನನ್ನು ಇಷ್ಟಪಡುತಿದ್ದರೊ ತಿಳಿದಿಲ್ಲ ಆದರೆ ವಾಜ್ ಸರ್ ಗೆ ರಾಬಿನ್ ಸಿಂಗ್ ಇಷ್ಟವಾದ ಆಟಗಾರ. ಅದು ಹಾಗೆ ಬಿಡಿ ತುಂಬಿದ ಕೊಡ ತುಳುಕೊದಿಲ್ಲ ಪ್ರದೀಪ್ ವಾಜ್ ಸರ್ ಕೂಡಾ ಟೆನ್ನಿಸ್ ಬಾಲ್ ಕ್ರಿಕೆಟ್ ನಲ್ಲಿ ಯಾವ ರಾಬಿನ್ ಸಿಂಗ್ ಗೆ ಕಡಿಮೆ ಇರಲಿಲ್ಲ.
ಈಗಲೂ ಒಂದು ಬೇಸರ ತರಿಸಿದೆ ಆ ಇನ್ನಿಂಗ್ಸ್ ವೀಕ್ಷಿಸಲು ಮಿಸ್ ಮಾಡಿಕೊಂಡೆ. ಕೇವಲ ನ್ಯೂಸ್ ಪೇಪರ್ ನಲ್ಲಿ ಓದಿ ತ್ರಪ್ತಿ ಪಡಬೇಕಾಯಿತು.  ಹೌದು ಕೋಟೇಶ್ವರದ ಗ್ರೌಂಡ್ ನಲ್ಲಿ ನಡೆದ ಮ್ಯಾಜಿಕ್ “VAZ STORM INNINGS”. ಈಗಲೂ ಯಾವುದೇ ಒಂದು ಪಂದ್ಯ ತುಂಬಾ ಕ್ಲೋಸ್ ಬಂದಾಗ ಇವರ ಈ ಇನಿಂಗ್ಸ್ ನೆನಪಿಗೆ ಬರುತ್ತದೆ.
ಮೈದಾನದಲ್ಲಿ ತುಂಬ ಶಿಸ್ತಿನ ಮನುಷ್ಯ ಆಗಿದ್ದ ಪ್ರದೀಪ ವಾಜ್ ಸರ್. ಅದೇ ರೀತಿ ಮೈದಾನದ ಹೊರಗೆ ಕೂಡ ಪ್ರಾಕ್ಟೀಸ್ ಟಚ್ ಮಾಡುತ್ತಿರುವಾಗಲೂ ನಾವು ಅವರನ್ನು ಗಮನಿಸುತ್ತಾ ಇದ್ದೆ.
ಎಲ್ಲಾ ವಿಚಾರಗಳು ಅವರ ಮೇಲಿನ ಅಭಿಮಾನ ಮತ್ತಷ್ಟು ಗಟ್ಟಿಗೊಳ್ಳಲು  ಕಾರಣವಾಯಿತು.
ಈ ದಿನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನೆಚ್ಚಿನ ಪ್ರದೀಪ ವಾಜ್ ಸರ್ ಗೆ ದೇವರು ಒಳ್ಳೆಯದನ್ನು ಮಾಡಲಿ ಹಾರೈಸುತ್ತೇನೆ ಹ್ಯಾಪಿ ಬರ್ತಡೆ ಸರ್. ಮುಂದೆ ಒಂದು ದಿನ ನಿಮ್ಮನ್ನು ಖಂಡಿತ ಭೇಟಿಯಾಗಿ ನಿಮಗೆ ಒಂದು ಓವರ್ ಬೌಲ್ ಮಾಡೋದೇ ನೋಡ್ತಾ ಇರಿ ಸರ್(Sixer strictly restricted ). ಎಂದೆಂದಿಗೂ ನಿಮ್ಮ ಆಟದ ಅಭಿಮಾನಿ ಅಶೋಕ್ ಹೆಗ್ಡೆ ಹೆಬ್ರಿ
Exit mobile version