SportsKannada | ಸ್ಪೋರ್ಟ್ಸ್ ಕನ್ನಡ

ಟೀಮ್ ಇಂಡಿಯಾದ ರಿಷಭ್ ಪಂತ್ ಗೆ ಹೆದರಿದ ನ್ಯೂಜಿಲೆಂಡ್ ಬೌಲಿಂಗ್ ಕೋಚ್

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್  ಫೈನಲ್ ಪಂದ್ಯವಳಿಗೆ ಕ್ಷಣಗಣನೆ ಆರಂಭವಾಗಿದೆ ಇಪ್ಪತ್ತು ಸದಸ್ಯರ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ನ ಸೌತಾಂಪ್ಟನ್ ತಲುಪಿದ್ದಾರೆ.
ಭಾರತ ಆಟಗಾರರು ಪ್ರವಾಸಕ್ಕೆ ಮುನ್ನ ಮುಂಬೈನಲ್ಲಿ ಹದಿನೈದು ದಿನದ ಕ್ವಾರಂಟೈನ್ ನಲ್ಲಿದ್ದಾರೆ,
ಜೂನ್ 18ರಿಂದ ಟೆಸ್ಟ್‌ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯ ಇಂಗ್ಲೆಂಡ್‌ನ ಸೌತಾಂಪ್ಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಕುರಿತು ನ್ಯೂಜಿಲೆಂಡ್ ತಂಡದ ಬೌಲಿಂಗ್ ತರಬೇತುದಾರ ಶೇನ್ ಜರ್ಗೆನ್ಸನ್ ಟೀಂ ಇಂಡಿಯಾ ತಂಡದ ಆಟಗಾರರ ಕುರಿತು ಮಾತನಾಡಿದ್ದಾರೆ. ಟೀಮ್ ಇಂಡಿಯಾ ಬಲಿಷ್ಠ ತಂಡವಾಗಿದ್ದು ಈ ತಂಡದ ಆಟಗಾರರು ಒಂದಲ್ಲ ಒಂದು ರೀತಿಯಲ್ಲಿ ತಂಡದ ಗೆಲುವಿಗೆ ಶಕ್ತಿಮಿರಿ ಪ್ರಯತ್ನಿಸುತ್ತಾರೆಂದು ಭಾರತ ತಂಡದ ಕುರಿತು ಮಾತನಾಡಿರುವ ನ್ಯೂಜಿಲೆಂಡ್ ಬೌಲಿಂಗ್ ಕೋಚ್ ಶೇನ್ ಜರ್ಗೆನ್ಸನ್ ರಿಷಭ್ ಪಂತ್ ಬಗ್ಗೆ ಒಂದು ಹೆಜ್ಜೆ ಮುಂದೆ ಹೊಗಿ ಆತನ ಬ್ಯಾಟಿಂಗ್ ಶೈಲಿಯ ಮತ್ತು ಕಷ್ಟದ ಪರಿಸ್ಥಿತಿಯಲ್ಲಿ ಆತ ತಂಡವನ್ನು ಗೆಲುವಿನ ಸಮೀಪಕ್ಕೆ ತೆಗೆದುಕೊಂಡು ಹೊಗುವ  ಸಾಮರ್ಥ್ಯವುಳ್ಳ  ಡೇಂಜರಸ್ ಆಟಗಾರ ಎಂದಿದ್ದಾರೆ.
‘ರಿಷಭ್ ಪಂತ್ ಒಬ್ಬ ಅತ್ಯದ್ಭುತ ಆಕ್ರಮಣಕಾರಿ ಆಟಗಾರ. ಯಾವ ಕ್ಚಣದಲ್ಲಾದರು ಪರಿಸ್ಥಿತಿ ಎಂತಹ ಕಷ್ಟಕರವಾಗಿದ್ದರು ಪಂದ್ಯದ ದಿಕ್ಕನ್ನು ಬದಲಿಸಬಲ್ಲಂತ ಸಾಮರ್ಥ್ಯವುಳ್ಳ ರಿಷಭ್ ಪಂತ್ ನಮ್ಮ ತಂಡಕ್ಕೆ ತಲೆನೋವಾಗಿ ಪರಿಣಮಿಸುವುದು ಗ್ಯಾರಂಟಿ. ಇದಕ್ಕೆ ಸಾಕ್ಷಿ ಎಂಬಂತೆ  ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಸರಣಿಗಳಲ್ಲಿ ರಿಷಭ್ ಪಂತ್ ಸ್ಫೋಟಕ ಆಟವನ್ನು ಅಡಿ ತಂಡವನ್ನು ಗೆಲ್ಲಿಸಿದ್ದನ್ನು ನಾವುಗಳು ನೋಡಿದ್ದೇವೆ, ಅವಕಾಶ ಸಿಕ್ಕಾಗ ಆತನ ವಿಕೆಟ್ ಪಡೆಯುವುದು ಉತ್ತಮ’ ಎಂದು ನ್ಯೂಜಿಲೆಂಡ್ ತಂಡದ ಬೌಲರ್ ಗಳಿಗೆ ಸಂದೇಶ ರವಾನಿಸಿದ್ದಾರೆ ಕೋಚ್ ಶೇನ್ ಜರ್ಗೆನ್ಸನ್.
ರಿಷಭ್ ಪಂತ್ ಸ್ಫೋಟಕ ಆಟದ ಕುರಿತು ತಮ್ಮ ಅಭಿಪ್ರಾಯವನ್ನು ಶೇನ್ ಜರ್ಗೆನ್ಸನ್ ವ್ಯಕ್ತಪಡಿಸಿದ್ದು ರಿಷಭ್ ಪಂತ್ ಗೆ ಮತ್ತಷ್ಟು ಜವಬ್ದಾರಿ ಹೆಚ್ಚಿದಂತಾಗಿದೆ.ಸದ್ಯದ ಸ್ಥಿತಿಯಲ್ಲಿ ಮತ್ತು ಅಂಕಿ ಅಂಶಗಳ ಪುಟ ತೆರೆದು ನೋಡಿದಾಗ ಭಾರತ ತಂಡ ವಿಶ್ವ ಕ್ರಿಕೆಟ್ ನ ಬಲಿಷ್ಠ ತಂಡವಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ.ಇನ್ನೇನಿದ್ದರು ಜೂನ್ ಹದಿನೆಂಟರಿಂದ ಆರಂಭವಾಗುವ ಪಂದ್ಯವನ್ನು ಕಾದು ನೋಡಬೇಕಿದೆ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಟ್ಟವನ್ನು ಮುಡಿಗೇರಿಸಿಕೊಳ್ಳುವುದೆ ಎಂದು…?
Exit mobile version