SportsKannada | ಸ್ಪೋರ್ಟ್ಸ್ ಕನ್ನಡ

ಸೆಪ್ಟೆಂಬರ್ 22ರಂದು ಹಿರಿಯಡಕ ಕಾಲೇಜು ಮೈದಾನದಲ್ಲಿ ಪ್ರಿಮಿಯರ್ ಲೀಗ್ ಅರ್ಪಿಸುವ ಮಾನ್ಸೂನ್ ಟ್ರೋಫಿ – 2019

ಇತ್ತೀಚೆಗಷ್ಟೇ ಬೊಮ್ಮಾರಬೆಟ್ಟು ಗ್ರಾಮದ ಪಂಚನಬೆಟ್ಟಿನ ಕಿರಣ್ ಆಚಾರ್ಯ ನೆಲಕ್ಕೆ ಬಿದ್ದು ಮೆದುಳು ಹಾಗೂ ತಲೆ ಭಾಗದ ನರಗಳಿಗೆ ತೀವ್ರ ಹಾನಿಯಾಗಿ ನೆನಪಿನ ಶಕ್ತಿ ಹಾಗೂ ಕೈ ಕಾಲುಗಳ ಸ್ವಾಧೀನ ಕಳೆದುಕೊಂಡು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಆಸ್ಪತ್ರೆಯಲ್ಲಿ ಈಗಾಗಲೇ 2 ತಿಂಗಳಲ್ಲಿ 5 ಲಕ್ಷ ವೆಚ್ಚವಾಗಿದ್ದು,ಪ್ರಸ್ತುತ ಉದ್ಯಾವರದ ಆಯುರ್ವೇದ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಡು ಬಡವರಾದ ಇವರ ಕುಟುಂಬಕ್ಕೆ ಸಹಾಯ ಹಸ್ತ ನೀಡುವ ನಿಟ್ಟಿನಲ್ಲಿ, ಫ್ರೆಂಡ್ಸ್ ಹಿರಿಯಡಕ ತಂಡ ರವಿವಾರ 22 ರಂದು “ಹಿರಿಯಡಕ ಪ್ರಿಮಿಯರ್ ಲೀಗ್” ಮಾನ್ಸೂನ್ ಟ್ರೋಫಿ-2019 ಆಹ್ವಾನಿತ ಲೀಗ್ ಮಾದರಿಯ ಪಂದ್ಯಾಕೂಟ ಏರ್ಪಡಿಸಿದೆ.

ಈ ಪಂದ್ಯಾಕೂಟ ಹಿರಿಯಡಕದ ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ವಿಜೇತ ತಂಡ 10,001,ರನ್ನರ್ಸ್ ತಂಡ 6,006 ರೂ ನಗದಿನ ಜೊತೆಗೆ ಶಾಶ್ವತ ಫಲಕಗಳನ್ನು ಹಾಗೂ ಇತರ ವೈಯಕ್ತಿಕ ಬಹುಮಾನಗಳನ್ನು ಅರ್ಹ ಆಟಗಾರರು ಪಡೆಯಲಿದ್ದಾರೆ.

ಸಂತ್ರಸ್ತ ಬಡಕುಟುಂಬದ ನೋವಿಗೆ ಧನಸಹಾಯದ ರೂಪದಲ್ಲಿ ಸ್ಪಂದಿಸಲಿಚ್ಛಿಸುವವರು ಮೇಲ್ಕಾಣಿಸಿದ ಮೊಬೈಲ್ ನಂಬರ್ ನ್ನು ಸಂಪರ್ಕಿಸಬಹುದಾಗಿದೆ.

ಆರ್.ಕೆ.ಆಚಾರ್ಯ ಕೋಟ

Exit mobile version