SportsKannada | ಸ್ಪೋರ್ಟ್ಸ್ ಕನ್ನಡ

ಮನೋಜ್ ತಿವಾರಿ-ರಣಜಿ ಪಂದ್ಯಾವಳಿಯಲ್ಲಿ ಆಡಲಿರುವ ಮೊಟ್ಟ ಮೊದಲ ಕ್ರೀಡಾಮಂತ್ರಿ

ರಣಜಿ ಟ್ರೋಫಿ 2022 ಪಂದ್ಯಾವಳಿಗೆ ನಿನ್ನೆ ಘೋಷಿಸಲಾದ ಪಶ್ಚಿಮ ಬಂಗಾಳದ  21 ಮಂದಿಯ ರಾಜ್ಯ ಕ್ರಿಕೆಟ್ ತಂಡದಲ್ಲಿ ಕ್ರೀಡಾ ಸಚಿವ ಮನೋಜ್ ತಿವಾರಿ ಅವರು ಸ್ಥಾನ ಪಡೆದಿದ್ದಾರೆ. 36 ವರ್ಷದ ತಿವಾರಿ ಕ್ರಿಕೆಟ್ ಬದುಕಿನಲ್ಲಿ ಸಕ್ರಿಯವಾಗಿರುವಾಗಲೇ ಕಳೆದ ಪಶ್ಚಿಮ ಬಂಗಾಳದ ವಿಧಾನ ಸಭಾ ಚುನಾವಣೆಯಲ್ಲಿ  ಸ್ಫರ್ಧಿಸಿ ಗೆದ್ದು ಸಚಿವರಾಗಿದ್ಧಾರೆ.
ಕ್ರಿಕೆಟಿಗರಾಗಿ ಪಶ್ಚಿಮ ಬಂಗಾಳದ ಕ್ರೀಡಾಸಚಿವರಾಗಿ ಇತಿಹಾಸ ಬರೆದಿದ್ದ ಮನೋಜ್ ತಿವಾರಿ ಇದೀಗ ತಮ್ಮ ರಾಜ್ಯದ ರಣಜಿ ತಂಡದಲ್ಲಿ ಮತ್ತೆ ಸ್ಥಾನ ಪಡೆಯುವುದರೊಂದಿಗೆ ಮತ್ತೊಂದು ಇತಿಹಾಸ ನಿರ್ಮಿಸಲು ಮುಂದಾಗಿದ್ದಾರೆ ಈ ಋತುವಿನ ರಣಜಿ ಪಂದ್ಯಾವಳಿಗೆ ನಿನ್ನೆ ಘೋಷಿಸಲಾದ ಪಶ್ಚಿಮ ಬಂಗಾಳ ತಂಡದ 21 ಮಂದಿಯ ಆಟಗಾರ ತಂಡದಲ್ಲಿ ಮನೋಜ್ ತಿವಾರಿ ಸ್ಥಾನ ದೊರೆತ್ತಿದೆ.
ಜನವರಿ 13ರಂದು ರಣಜಿ ಪಂದ್ಯಾವಳಿಗಳು ಆರಂಭವಾಗಲಿದೆ. ಕೋವಿಡ್​ನಿಂದ ಬಾಧಿತವಾಗಿರುವ ಪಶ್ಚಿಮ ಬಂಗಾಳ ತಂಡವನ್ನು ಅಭಿಮನ್ಯು ಈಶ್ವರನ್ ಅವರು ನಾಯಕನಾಗಿ ಮುನ್ನಡೆಸಲಿದ್ದಾರೆ. ಮನೋಜ್ ತಿವಾರಿ ಅವರು 21 ಆಟಗಾರರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮನೋಜ್ ತಿವಾರಿ ಕಳೆದ ಸೀಸನ್​ನ ರಣಜಿ ಪಂದ್ಯಾವಳಿಯಲ್ಲೂ ಆಡಿದ್ದರು. ಅಂತಿಮ ತಂಡದಲ್ಲಿ ಅವರು ಸ್ಥಾನ ಪಡೆಯಲು ಸಫಲರಾದರೆ ಹಾಲಿ ಕ್ರೀಡಾಮಂತ್ರಿಯೊಬ್ಬರು ರಣಜಿ ಟ್ರೋಫಿ ಆಡುವುದರೊಂದಿಗೆ ಹೊಸ ಇತಿಹಾಸ ಪುಟ ತೆರೆದುಕೊಳ್ಳುತ್ತದೆ.
ಮನೋಜ್ ತಿವಾರಿ ಕ್ರಿಕೆಟ್​ನಲ್ಲಿ ಸಕ್ರಿಯರಾಗಿದ್ದಾಗಲೇ ರಾಜಕಾರಣಕ್ಕೆ ಧುಮುಕಿ ಕಳೆದ ವರ್ಷ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್  ಪಕ್ಷವನ್ನು ಸೇರ್ಡಪೆಯಾಗಿ   ವಿಧಾನಸಭಾ ಚುನಾವಣೆಯಲ್ಲಿ ಶಿಬಪುರ್ ಕ್ಷೇತ್ರದಲ್ಲಿ ಟಿಎಂಸಿ ಟಿಕೆಟ್​ನಲ್ಲಿ ಸ್ಪರ್ಧಿಸಿ ಗೆಲುವನ್ನೂ ಸಾಧಿಸಿವುದರ ಜೊತೆಗೆ ಸಚಿವರಾಗಿಯು ಕ್ಯಾಬಿನೆಟ್ ನಲ್ಲಿ ಸ್ಥಾನಪಡೆದಿದ್ದರು.ಚುನಾವಣೆ ಎದುರಿಸುವ ಕೇಲವು ದಿನಗಳ ಮುನ್ನವಷ್ಟೇ ಅವರು ಸಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಪಂದ್ಯಾವಳಿಯಲ್ಲಿ ನಾಲ್ಕು ಪಂದ್ಯಗಳನ್ನ ಆಡಿದ್ದರು.
16 ವರ್ಷಗಳ ಕಾಲ ದೇಶೀಯ ಕ್ರಿಕೆಟ್​ನಲ್ಲಿ ಆಡಿರುವ ಮನೋಜ್ ತಿವಾರಿ ಒಬ್ಬ ಉತ್ತಮ ಆಟಗಾರ ಎನ್ನುವುದನ್ನು ಸಾಭಿತುಪಡಿಸಿದ್ದಾರೆ ತಿವಾರಿ 125 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿ 8965 ರನ್​ಗಳನ್ನು ಕಲೆಹಾಕಿದ್ದಾರೆ . ರಾಜಕಾರಣ ಪ್ರವೇಶಿಸಿ ಸಚಿವರಾದ ಬಳಿಕ ಅವರು ಕ್ರಿಕೆಟ್​ಗೆ ವಿದಾಯ ಹೇಳಬಹುದು ಎಂದು ನಿರೀಕ್ಷಿಸಲಾಗಿತ್ತು. ಅದರೆ, ಸಚಿವ ಸ್ಥಾನದ ಜೊತೆಗೆ ಕ್ರಿಕೆಟ್ ಆಟದಲ್ಲೂ ತಮ್ಮನ್ನು ತೊಡಗಿಸಿಕೊಂಡು ಕ್ರಿಕೆಟ್ ಅಟವನ್ನು ಮುಂದುವರಿಸುವ ನಿರ್ಧಾರವನ್ನು ತಿವಾರಿ ಕೈಗೊಂಡಿದ್ಧಾರೆ ಈ ಕಾರಣದಿಂದಲೇ ಮನೋಜ್ ತಿವಾರಿ ಮತ್ತೊಮ್ಮೆ ರಾಜ್ಯತಂಡಕ್ಕೆ ಅಯ್ಕೆ ಆಗುವುದರೊಂದಿಗೆ ಹೊಸ ಇತಿಹಾಸ ನಿರ್ಮಿಸುವ ಎಲ್ಲಾ ಸಾಧ್ಯತೆಗಳಿವೆ
ಅದೇನೆ ಇರಲಿ ಕ್ರೀಡಾ ಸಚಿವರಾಗಿಯು ತನ್ನ ವೃತ್ತಿಬದುಕಿನ ಕ್ರಿಕೆಟ್ ಆಟವನ್ನು  ಮರೆಯದೆ ಮುಂದುವರಿಸಿಕೊಂಡು ಹೋಗಿರವ ತಿವಾರಿಯವರ ಕ್ರಿಕೆಟ್ ಮೇಲಿನ ಅಭಿಮಾನವನ್ನು ಎಲ್ಲರೂ ಗೌರವಿಸಲೆ ಬೇಕು
Exit mobile version