Site icon SportsKannada ಸ್ಪೋರ್ಟ್ಸ್ ಕನ್ನಡ

ಆರ್ ಸಿ ಬಿ ಗೆಲುವಿನಿಂದ ಕಲಿಯಬಹುದಾದ ಜೀವನದ ಪಾಠಗಳು

ಆರ್ ಸಿ ಬಿ ಗೆಲುವಿನಿಂದ ಕಲಿಯಬಹುದಾದ ಜೀವನದ ಪಾಠಗಳು

 

ಕ್ರಿಕೆಟ್‌ ನಲ್ಲಿ ಆರ್ ಸಿ ಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಎಂಬ ತಂಡಕ್ಕೆ ಇರುವ ಅಭಿಮಾನ ಹಾಗೂ ಭಾವನೆಗಳು ಯಾವುದೇ ರಾಜಕೀಯ ಪಕ್ಷಕ್ಕೂ ಅಥವಾ ಸಿನಿಮಾಗೆ ಸೇರಿದ ಅಭಿಮಾನಿಗಳಿಗಿಂತ ಕಡಿಮೆ ಅಲ್ಲ. ವರ್ಷಗಳ ನಿರೀಕ್ಷೆಯ ನಂತರ, ಆರ್ ಸಿ ಬಿ ಕೊನೆಗೂ ಜಯದ ಹಾದಿ ಹಿಡಿದಾಗ, ನಮ್ಮೆಲ್ಲರ ಮನಗಳಲ್ಲೂ ಉತ್ಸಾಹ, ಭಾವನೆ ಮತ್ತು ತೃಪ್ತಿಯ ಅಲೆ ಎಬ್ಬಿಸಿತು. ಈ ಗೆಲುವು ಕೇವಲ ಕ್ರಿಕೆಟ್ ಪಂದ್ಯವಲ್ಲ – ಇದು ಬದುಕಿನ ಪಾಠಗಳನ್ನೂ ಬೋಧಿಸುತ್ತದೆ. ಇಲ್ಲಿ ಆರ್ ಸಿ ಬಿ ತಂಡದ ಗೆಲುವಿನಿಂದ ನಾವು ಕಲಿಯಬಹುದಾದ ಕೆಲವು ಮುಖ್ಯ ಪಾಠಗಳು:


1. ಧೈರ್ಯವನ್ನು ಕಳೆದುಕೊಳ್ಳಬೇಡಿ

ಆರ್ ಸಿ ಬಿ ಒಂದೆರಡು ವರ್ಷವಲ್ಲ, ದಶಕಕ್ಕಿಂತ ಹೆಚ್ಚು ಕಾಲ ‘ಇದೀಗ ಗೆಲ್ತಾರೆ’ ಅನ್ನುವ ನಿರೀಕ್ಷೆಯ ಜೊತೆಗೆ ‘ಇನ್ನೂ ಇಲ್ಲ’ ಅನ್ನುವ ನಿರಾಶೆಯನ್ನು ಎದುರಿಸುತ್ತ ಬಂದಿದ್ದಾರೆ. ಆದರೆ ಅವರು ಧೈರ್ಯವನ್ನೂ, ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ಜೀವನದಲ್ಲಿಯೂ ಇದೇ ತರಹ — ಸಫಲತೆ ತಡವಾದರೂ, ಕಷ್ಟಗಳನ್ನು ಎದುರಿಸಿ ಧೈರ್ಯದಿಂದ ಮುಂದೆ ನಡೆದರೆ, ಜಯ ಶ್ರಮಕ್ಕೆ ಶ್ರದ್ಧೆಗೆ ಸಿಗುತ್ತದೆ.


2. ಅವಮಾನವೇ ಆಧ್ಯಾತ್ಮಿಕ ಬೆಳೆವಣಿಗೆಯ ಬೀಜ

ಆರ್ ಸಿ ಬಿ ವಿರುದ್ಧ ಅನೇಕ ಬಾರಿ ಕೀಳಾಗಿ ಮಾತನಾಡಲಾಗಿದೆ — “ಟ್ರೋಫಿ ಇಲ್ಲದ ತಂಡ”, ಅಂದಿದ್ದಾರೆ. ಆದರೆ ತಾಳ್ಮೆಯಿಂದ, ಶ್ರಮದಿಂದ, ಆಟದ ಮೇಲೆ ನಿಷ್ಠೆಯಿಂದ ತಂಡ ಮುಂದುವರಿದಿದೆ. ಬದುಕಿನಲ್ಲಿ ಯಾವುದಾದರೂ ನಿಂದನೆಯು, ಹಾಸ್ಯ ಮಾಡುವವರ ಮಾತು ನಮ್ಮನ್ನು ಇಳಿಯುವ ಬದಲು, ಅವುಗಳನ್ನು  ಧೈರ್ಯವಾಗಿ ಎದುರಿಸುವ ಶಕ್ತಿ ಬೆಳೆಸಬೇಕು.


3. ಸಮಯ ಬದಲಾಯಿಸುತ್ತೆ – ಯಾರು ತಿರಸ್ಕೃತನೋ, ಅವನೇ ವೀರನಾಗಬಹುದು

ಏಕ ಕಾಲದಲ್ಲಿ ಟೀಕೆಗೊಳಗಾದ ಆಟಗಾರರು – ವಿರಾಟ್ ಕೊಹ್ಲಿ, ಡು ಪ್ಲೆಸಿಸ್, ಪಾಟಿದಾರ್ – ಇವರೆಲ್ಲರೂ ತಮ್ಮ ಆಟದಿಂದ ಮೌನವಾಗಿ ಉತ್ತರ ನೀಡಿದ್ದಾರೆ. ಜೀವನದಲ್ಲಿಯೂ ಹಲವರು ನಮ್ಮ ಮೇಲೆ ನಂಬಿಕೆ ಇಡುವುದಿಲ್ಲ. ಆದರೆ  ಇತರರು ನಮ್ಮನ್ನು ನಂಬುವುದನ್ನು ನಿಲ್ಲಿಸಿದಾಗಲೂ,, ನಾವು ನಮ್ಮ ಮೇಲೆ ನಂಬಿಕೆ ಇಟ್ಟುಕೊಂಡು ಸದಾ ಶ್ರಮ ಮಾಡಿದರೆ, ಒಮ್ಮೆ ಸಮಯ ಬದಲಾಯಿಸುವುದು ಖಂಡಿತ.


4. ಒಟ್ಟಾಗಿ ಮುನ್ನಡೆದರೆ, ದುರ್ಬಲತೆಗಳನ್ನೂ ಶಕ್ತಿಯನ್ನಾಗಿ ಮಾಡಬಹುದು

ಆರ್ ಸಿ ಬಿ ಕಳೆದ ಕೆಲವು ಸೀಸನ್‌ಗಳಲ್ಲಿ ಬೌಲಿಂಗ್‌ನಲ್ಲಿ ದುರ್ಬಲ ತಂಡವೆಂದು ಹೆಸರುವಾಸಿಯಾಗಿತ್ತು. ಆದರೆ ಈ ಬಾರಿ ತಂಡದ ಎಲ್ಲ ವಿಭಾಗಗಳು ಸಹಕರಿಸಿ ಗೆಲುವಿನತ್ತ ಸಾಗಿದವು. ಬದುಕಿನಲ್ಲಿ ವ್ಯಕ್ತಿಯ ಪ್ರತ್ಯೇಕ ಶಕ್ತಿಗಿಂತ, ತಂಡದ ಒಕ್ಕೂಟ ಶ್ರೇಷ್ಠ. ಒಟ್ಟಾಗಿ ಸಾಗಿದಾಗ ಬಹುಪಾಲು ದುರ್ಬಲತೆಗಳು ಸಹ ಶಕ್ತಿಯಾಗಿ ಪರಿಣಮಿಸಬಹುದು.


5. ಅಭಿಮಾನಿಗಳ ನಂಬಿಕೆ ಒಂದು ಜೀವಾಳ

ಆರ್ ಸಿ ಬಿ ಗೆಲ್ಲುತ್ತೆ, ಸೋಲುತ್ತೆ ಅನ್ನುವುದಕ್ಕಿಂತ, ಅಭಿಮಾನಿಗಳ ನಂಬಿಕೆ, ಪ್ರೀತಿ ಎಷ್ಟು ಭದ್ರವಾಯಿತೆಂಬುದೇ ಮುಖ್ಯ. ಬದುಕಿನಲ್ಲೂ ಕೆಲವೊಮ್ಮೆ ನಮ್ಮ ಬಳಿ ಎಲ್ಲವೂ ಇಲ್ಲದಿದ್ದರೂ, ನಮ್ಮನ್ನು ನಂಬುವ ಕೆಲವರ ಪ್ರೀತಿ ನಮ್ಮೊಳಗಿನ ಶಕ್ತಿಯನ್ನು ನೂರರಷ್ಟು ಹೆಚ್ಚಿಸುತ್ತದೆ.

ಆರ್ ಸಿ ಬಿ ಗೆಲುವು ಕೇವಲ ಕ್ರೀಡಾ ವಿಜಯವಲ್ಲ. ಇದು ನಿರೀಕ್ಷೆ, ಧೈರ್ಯ, ತಂಡಬಲ, (ಟೀಮ್ ವರ್ಕ್), ಆತ್ಮವಿಶ್ವಾಸ ಮತ್ತು ನಿಷ್ಠೆಯ ವಿಜಯ. ತಡವಾದರೂ ಸತ್ಯ ಜಯಿಸುತ್ತದೆ ಎಂಬ ನಂಬಿಕೆಗೆ ಇದು ಜೀವಂತ ಸಾಕ್ಷಿ. ನಾವು ಜೀವನದ ಎಲ್ಲಾ ಹಂತಗಳಲ್ಲೂ ಈ ಪಾಠಗಳನ್ನು ಮನದಲ್ಲಿ ಇಟ್ಟುಕೊಂಡು ಸಾಗಿದರೆ, ನಾವೂ ಒಂದು ದಿನ ನಮ್ಮ ಜೀವನದ ‘ಟ್ರೋಫಿ’ ಗೆಲ್ಲಬಹುದು.

ನಮ್ಮ ಕಾಲವೂ ಬರುತ್ತದೆ – ಶ್ರಮ ಹರಿಸಿದರೆ, ಧೈರ್ಯ ಬಿಡದಿದ್ದರೆ!

ಅಂತಿಮವಾಗಿ:

“ನಮ್ಮ ಕಾಲ ಬರುತ್ತದೆ” ಎಂದು ಭರವಸೆ ಇಟ್ಟುಕೊಂಡಿರುವಂತೆ,

“ನಮ್ಮ ಜವಾಬ್ದಾರಿ ಬರುತ್ತದೆ” ಎಂದೂ ಅರಿಯಬೇಕು.

ಅದು ಗೆಲುವಿನ ಸಂದರ್ಭದಲ್ಲಿ ಇರಲಿ, ಅಥವಾ ದುಃಖದ ಘಟನೆಯಾಗಲಿ – ನಾವು ಕಲಿಯಬೇಕಾದುದು ಮನುಷ್ಯತ್ವ, ಶಿಸ್ತು, ಮತ್ತು ಜವಾಬ್ದಾರಿ.


Exit mobile version