SportsKannada | ಸ್ಪೋರ್ಟ್ಸ್ ಕನ್ನಡ

ಕರ್ನಾಟಕದ ಹಿರಿಯ ಕ್ರಿಕೆಟಿಗರ ಸಮಾಗಮ-ದಿ‌.ಪ್ರತಾಪ್ಚಂದ್ರ ಹೆಗ್ಡೆ ಸ್ಮರಣಾರ್ಥ-ಐತಿಹಾಸಿಕ ಲೆಜೆಂಡ್ಸ್ ಕಪ್-2021

ಟೆನ್ನಿಸ್ಬಾಲ್ ಕ್ರಿಕೆಟ್ ಶ್ರೇಯೋಭಿವೃದ್ಧಿಗಾಗಿ ಕಳೆದ 2 ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಮಸ್ತ ಕನ್ನಡಿಗರ ಹೆಮ್ಮೆಯ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಪ್ರಸ್ತುತ ಪಡಿಸುವ,ಕರ್ನಾಟಕ ರಾಜ್ಯ ಹಿರಿಯ ಕ್ರಿಕೆಟಿಗರ ಸಮಾಗಮ,40 ರ ಮೇಲ್ಪಟ್ಟ ವಯೋಮಿತಿಯ ಕ್ರಿಕೆಟ್ ಪಂದ್ಯಾಕೂಟ ಕುಂದಾಪುರ ಪರಿಸರದ ಪ್ರಸಿದ್ಧ ತಂಡ ಚಕ್ರವರ್ತಿ ಕುಂದಾಪುರದ ಸ್ಥಾಪಕ ಸದಸ್ಯರು,ಸಹಸ್ರಾರು ಅಭಿಮಾನಿ ಬಳಗವನ್ನು ಸಂಪಾದಿಸಿ,
ಕ್ರೀಡಾಲೋಕದಲ್ಲಿ ಮಿಂಚಿ ಮರೆಯಾದ ನಕ್ಷತ್ರ ದಿ.ಪ್ರತಾಪ್ಚಂದ್ರ ಹೆಗ್ಡೆ ಸ್ಮರಣಾರ್ಥ “ಲೆಜೆಂಡ್ಸ್ ಕಪ್-2021” ಪಂದ್ಯಾಕೂಟ ನಡೆಯಲಿದೆ.
ಟೆನ್ನಿಸ್ಬಾಲ್ ಕ್ರಿಕೆಟ್ ಅಧ್ಯಾಯದ ಪುಟಗಳಲ್ಲೇ ಅಚ್ಚಳಿಯದ ಇತಿಹಾಸ ಬರೆಯಲಿರುವ ಈ ಪಂದ್ಯಾಕೂಟ ಏಪ್ರಿಲ್ 2,3 ಹಾಗೂ 4 ರಂದು ಟೆನ್ನಿಸ್ಬಾಲ್ ಕ್ರಿಕೆಟ್ ಕಾಶಿ ಗಾಂಧಿ ಮೈದಾನದಲ್ಲಿ ನಡೆಯಲಿದೆ.ಈಗಾಗಲೇ ಕರ್ನಾಟಕದ 32 ಹಿರಿಯ ತಂಡಗಳು ತಮ್ಮ ತಂಡಗಳ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಲೆಜೆಂಡ್ಸ್ ಕಪ್ ವಿಜೇತ ತಂಡ 1 ಲಕ್ಷ ನಗದು,ದ್ವಿತೀಯ ಸ್ಥಾನಿ 50 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದು,ವೈಯಕ್ತಿಕ ಬಹುಮಾನ ರೂಪದಲ್ಲಿ ವಿಶೇಷ ಬಹುಮಾನಗಳನ್ನು ನೀಡಲಾಗುತ್ತಿದೆ.
ಪಂದ್ಯಾವಳಿಯ ನೇರ ಪ್ರಸಾರವನ್ನು
M.Sports ಬಿತ್ತರಿಸಲಿದೆ.
ಕಳೆದ 2.5 ವರ್ಷಗಳಿಂದ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಿ,ಹಿರಿಯ ಆಟಗಾರರನ್ನು ಅವರಿದ್ದಲ್ಲೇ ಹೋಗಿ ಭೇಟಿ ಮಾಡಿ,ಇದರ ಫಲಶ್ರುತಿ ಎಂಬಂತೆ ಅಷ್ಟೂ ಮಂದಿ ಹಿರಿಯ ಆಟಗಾರರು ತಮ್ಮ ತಂಡವನ್ನು ಕಟ್ಟಿಕೊಂಡು 25 ವರ್ಷಗಳ ಬಳಿಕ ಕ್ರಿಕೆಟ್ ಕಾಶಿ ಕುಂದಾಪುರಕ್ಕೆ ಮರಳಲಿದ್ದಾರೆ.80,90,2000 ರ ದಶಕದ ಆಟಗಾರರು,ಸ್ನೇಹಿತರನ್ನು ಮತ್ತೆ ಭೇಟಿ ಆಗುವ ಉತ್ಸುಕತೆಯಲ್ಲಿ ಸರ್ವ ಸಿದ್ಧತೆ ನಡೆಸುತ್ತಿದ್ದಾರೆ.
ಉದ್ಯೋಗ ನಿಮಿತ್ತ ವಿದೇಶದಲ್ಲಿ ನೆಲೆಸಿರುವ ಹಿರಿಯ ಆಟಗಾರರು ಈ ಪಂದ್ಯಾಟವನ್ನಾಡಲು ಮತ್ತೆ ಸ್ವದೇಶಕ್ಕೆ ಮರಳಲಿದ್ದಾರೆ.ಪಂದ್ಯಾಕೂಟಕ್ಕೆ ರಣಜಿ,ಅಂತರಾಷ್ಟ್ರೀಯ ಆಟಗಾರರು,ಸಿನಿಮಾ ತಾರೆಯರು ಆಗಮಿಸಲಿದ್ದು ಟೂರ್ನಮೆಂಟ್ ಮೆರುಗನ್ನು ಹೆಚ್ಚಿಸಲಿದೆ.
*ಕರ್ನಾಟಕ ರಾಜ್ಯ ಟೆನ್ನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಸ್ತಿತ್ವಕ್ಕೆ !*
ಐತಿಹಾಸಿಕ ಲೆಜೆಂಡ್ಸ್ ಕಪ್ ಪಂದ್ಯಾವಳಿಯ ಸಂದರ್ಭ ರಾಜ್ಯದ ಎಲ್ಲಾ ಹಿರಿಯ ಆಟಗಾರರು ಹಾಗೂ ಕಿರಿಯ ಆಟಗಾರರು,ತಂಡಗಳ ಮಾಲೀಕರು, ಕಪ್ತಾನರೆಲ್ಲರ ಉಪಸ್ಥಿತಿಯಲ್ಲಿ ಟೆನ್ನಿಸ್ಬಾಲ್ ಕ್ರಿಕೆಟ್ ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕರ್ನಾಟಕ ಟೆನ್ನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ (K.S.T.C.A)ಚಿಂತನೆ ನಡೆಸಲಾಗುತ್ತಿದೆ.
Exit mobile version