SportsKannada | ಸ್ಪೋರ್ಟ್ಸ್ ಕನ್ನಡ

ಕುಂದಾಪುರ-ಮಾನವೀಯ ಮೌಲ್ಯಗಳಿಗೆ ಸಾಕ್ಷಿ-ವೈದ್ಯಕೀಯ ನೆರವಿಗೆ ಮೀಸಲಿಟ್ಟ ಪ್ರಶಸ್ತಿಯ ಮೊತ್ತ

KTCBKಚಿನ್ನ-ಬೆಳ್ಳಿ ಕೆಲಸಗಾರರ ಸಂಘ(ರಿ)ಕುಂದಾಪುರ
ಇದರ ಸದಸ್ಯರಿಗಾಗಿ ಕುಂದಾಪುರದ ಗಾಂಧಿ  ಮೈದಾನದಲ್ಲಿ ಒಂದು ದಿನದ ಕ್ರಿಕೆಟ್ ಪಂದ್ಯಾಟ ಆಯೋಜಿಸಿದ್ದರು.
ಒಟ್ಟು 6 ತಂಡಗಳು ಭಾಗವಹಿಸಿದ್ದು, ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಪಂದ್ಯಾಟ ಸಾಗಿದ್ದು ಅಂತಿಮವಾಗಿ ನವೀನ್ ಆಚಾರ್ಯ ನೇತೃತ್ವದ ತಿರುಮಲ ಗೋಲ್ಡ್ ತಂಡ,ಗಣೇಶ್ ಆಚಾರ್ಯ ನೇತೃತ್ವದ ಅಪ್ಪು ಕ್ರಿಕೆಟರ್ಸ್ ತಂಡವನ್ನು ಸೋಲಿಸಿ ಚಾಂಪಿಯನ್ ತಂಡವಾಗಿ ಮೂಡಿಬಂದಿತು.
ಸಮಾರೋಪ ಸಮಾರಂಭದ ವೇದಿಕೆಯಲ್ಲಿ,ತಿರುಮಲ ಗೋಲ್ಡ್ ತಂಡದ ನವೀನ್ ನಗದು ಬಹುಮಾನದಲ್ಲಿ 8,000 ಮತ್ತು ದ್ವಿತೀಯ ಸ್ಥಾನಿ ಅಪ್ಪು ಕ್ರಿಕೆಟರ್ಸ್ ನ ಗಣೇಶ್ ಆಚಾರ್ಯ ನಗದು ಬಹುಮಾನ ಅಷ್ಟನ್ನೂ 7,777 ರೂ ಇತ್ತೀಚೆಗಷ್ಟೇ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ
ಪ್ರಕಾಶ್ ಆಚಾರ್ಯರಿಗೆ ನೀಡುವಂತೆ ಆಯೋಜಕರಿಗೆ ಹಸ್ತಾಂತರಿಸಿದರು.
ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ
ಜ್ಯುವೆಲ್ಲರಿ ಅಸೋಸಿಯೇಷನ್ ಕುಂದಾಪುರದ ಅಧ್ಯಕ್ಷರಾದ ಸತೀಶ್ ಆಚಾರ್ಯ,ಅಜಯ್ ಶೇಟ್ ಉದಯ್ ಜ್ಯುವೆಲ್ಲರ್ಸ್,ಉದಯ್ ಭೋಸ್ಲೆ ಕುಂದಾಪುರ,ಭೂಷಣ್ ಶೇಟ್ ಕುಂದಾಪುರ,ಕೋಟ ರಾಮಕೃಷ್ಣ ಆಚಾರ್ ಪ್ರವರ್ತಕರು ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಮತ್ತು ಕುಂದಾಪುರ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ರಾಜೇಶ್ ಆಚಾರ್ಯ ಮರವಂತೆ,ಕುಶ ಆಚಾರ್ ಬನ್ನಾಡಿ ಮತ್ತು ಗಣೇಶ್ ಆಚಾರ್ ಮುಳ್ಳಿಕಟ್ಟೆ,
ಸಂಘದ ಪಧಾದಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭ ಟೆನ್ನಿಸ್ ಬಾಲ್ ಕ್ರಿಕೆಟ್ ಬೆಳವಣಿಗೆಯ ನಿಟ್ಟಿನಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ನ ಪ್ರವರ್ತಕರಾದ ಕೋಟ ರಾಮಕೃಷ್ಣ ಆಚಾರ್ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸಂಜೆಯ ಸಮಾರೋಪ ಕಾರ್ಯಕ್ರಮದಲ್ಲಿ ಚಲನಚಿತ್ರ ಗೀತ ರಚನೆಕಾರ ಪ್ರಮೋದ್ ಮರವಂತೆ,ಹಿರಿಯ
ಆಟಗಾರರಾದ ಮನೋಜ್ ನಾಯರ್ ಚಕ್ರವರ್ತಿ,ಈಶ್ವರ್ ಶೇಟ್,ಸಂಜಯ್ ಪಾಟೀಲ್,ಶ್ರೀಧರ್ ಆಚಾರ್,ಸಂಘದ ಅಧ್ಯಕ್ಷ ರಾಜೇಶ್ ಆಚಾರ್ ಮರವಂತೆ,ಗಣೇಶ್ ಆಚಾರ್ ಮುಳ್ಳಿಕಟ್ಟೆ ಮತ್ತು ಕುಶ ಆಚಾರ್ ಬನ್ನಾಡಿ ಉಪಸ್ಥಿತರಿದ್ದರು.ಕುಶ ಬನ್ನಾಡಿ ಕಾರ್ಯಕ್ರಮ ನಿರೂಪಣೆ ಮಾಡಿ ಸುನಿಲ್ ಶೇಟ್ ಸ್ವಾಗತಿಸಿದರು…
Exit mobile version