SportsKannada | ಸ್ಪೋರ್ಟ್ಸ್ ಕನ್ನಡ

ಬೆಂಗಳೂರು-ಐತಿಹಾಸಿಕ K.T.P.L ಇಂದು ಉದ್ಘಾಟನೆ-ಎಮ್.ಕೆ.ಎಸ್ ಮತ್ತು ನಾಗಾ ಇಲೆವೆನ್ ನಡುವೆ ಮೊದಲ ಪಂದ್ಯ

ಸೃಷ್ಟಿ ಲೋಕೇಶ್ ರವರ ಸಾರಥ್ಯದಲ್ಲಿ,ರವೀಂದ್ರ ತೋಳಾರ್,ಸಚಿನ್ ಮಹಾದೇವ್, ಆದರ್ಶ ಗೌಡ, ಜಗದೀಶ್,ಜಿಮ್ ಸೋಮಣ್ಣ ಇವರೆಲ್ಲರ ಪ್ರಮುಖ ಉಸ್ತುವಾರಿಯಲ್ಲಿ ಕರ್ನಾಟಕ ಟೆನಿಸ್ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಇಂದು ಅದ್ಧೂರಿಯ ಚಾಲನೆ ದೊರೆಯಲಿದೆ.
ಮಾದಾವಾರ ನೈಸ್ ಗ್ರೌಂಡ್ ಟೆನಿಸ್ಬಾಲ್ ಕ್ರಿಕೆಟ್ ನ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ.ಇಂದು ಸಂಜೆ 6 ಗಂಟೆಗೆ ವರ್ಣರಂಜಿತ ಉದ್ಘಾಟನಾ ಸಮಾರಂಭ ನಡೆಯಲಿದ್ದು,ಪ್ರಸಿದ್ಧ ಚಲನಚಿತ್ರ ನಟರು,ರಾಜಕೀಯ ಧುರೀಣರು,ಉದ್ಯಮಿಗಳು,ಬೇರೆ ಬೇರೆ ಜಿಲ್ಲೆಗಳ ಕ್ರೀಡಾ ಪ್ರತಿನಿಧಿಗಳು ಆಗಮಿಸಲಿದ್ದಾರೆ.
ಸೋಮವಾರ ಚಾಂಪಿಯನ್ಸ್ ಲೀಗ್ ಪಂದ್ಯಾಟ ಉದ್ಘಾಟನೆಗೊಂಡಿತ್ತು.ಲೀಗ್ ಹಂತದ ಕೊನೆಯ 2 ಪಂದ್ಯ ಉಳಿದಿರುವಂತೆ ವರುಣನ ಆರ್ಭಟಕ್ಕೆ ಪಂದ್ಯಾಟ ಸ್ಥಗಿತಗೊಂಡಿತ್ತು.
ಪೂರ್ವ ನಿಗದಿಯಂತೆ ಇಂದಿನ (ಗುರುವಾರ) ಪಂದ್ಯಗಳು ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಲಿದ್ದು,ಮೊದಲ
ಪಂದ್ಯದಲ್ಲಿ ಎಮ್.ಕೆ.ಎಸ್ ಕೋಲಾರ,ನಾಗಾ ಇಲೆವೆನ್ ತಂಡವನ್ನು ಎದುರಿಸಲಿದೆ.
2 ನೇ ಪಂದ್ಯ ಕ್ರಿಶಾ ಇಲೆವೆನ್ ಮತ್ತು ಕ್ರಿಕೆಟ್ ನಕ್ಷತ್ರ,3 ನೇ ಪಂದ್ಯ ಮಟ್ಕಲ್ ತುಮಕೂರು ಮತ್ತು ತ್ರಿಶೂಲ್ ಸೇನಾ,4 ನೇ ಪಂದ್ಯ ಸ್ನೇಹಜೀವಿ ಮೈಸೂರು ಮತ್ತು ರಾಕರ್ಸ್ ರಾಗಿಗುಡ್ಡ ತಂಡವನ್ನು,5 ನೆ ಪಂದ್ಯ ಗುರು ಕ್ರಿಕೆಟರ್ಸ್ ಮತ್ತು ನಾಗಾ ಇಲೆವೆನ್,6 ನೆ ಪಂದ್ಯ ಪುನೀತ್ ಬ್ಲಾಸ್ಟರ್ಸ್ ಮತ್ತು ರಂಗ ಇಲೆವೆನ್ ,7 ನೇ ಪಂದ್ಯ ಎಮ್.ಕೆ‌.ಎಸ್ ಮತ್ತುಮಟ್ಕಲ್ ತುಮಕೂರು,8 ನೇ ಪಂದ್ಯ ಕ್ರಿಕೆಟ್ ನಕ್ಷತ್ರ ಮತ್ತು ರಾಕರ್ಸ್ ರಾಗಿಗುಡ್ಡ,9 ನೇ ಪಂದ್ಯ ತ್ರಿಶೂಲ್ ಸೇನಾ ಮತ್ತು ಶಿವಗಂಗಾ ಕ್ರಿಕೆಟರ್ಸ್,10 ನೇ ಪಂದ್ಯ ರಂಗ ಇಲೆವೆನ್ ಮತ್ತು ಕ್ರಿಶಾ ಇಲೆವೆನ್ ನಡುವೆ ನಡೆಯಲಿದೆ‌.
*ಗಮನ ಸೆಳೆದ K.T.P.L ವಿಶೇಷ ಬಸ್*
ಕೆ.ಟಿ.ಪಿ.ಎಲ್ ನಲ್ಲಿ ಭಾಗವಹಿಸಲಿರುವ 12 ತಂಡಗಳಿಗೆ,ಪ್ರತ್ಯೇಕ ವಸತಿ ಸೌಲಭ್ಯ ಒದಗಿಸಲಾಗಿದೆ.
ಆಟಗಾರರನ್ನು ಹೋಟೆಲ್ ನಿಂದ ಮೈದಾನಕ್ಕೆ ಕರೆದೊಯ್ಯಲು ವಿಶೇಷವಾಗಿ  ವಿನ್ಯಾಸಗೊಳಿಸಲಾದ ನೇರಳೆ ಬಣ್ಣದ K.T.P.L ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು ಪಂದ್ಯಾಟದ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
M.Sports ಯೂ ಟ್ಯೂಬ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಳ್ಳಲಿದ್ದು,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
Exit mobile version