
ಕೋಟ ಮೊಗವೀರ ಪ್ರೀಮಿಯರ್ ಲೀಗ್ (KMPL) ಸೀಸನ್–1 ಡಿಸೆಂಬರ್ 27–28ರಂದು
ಮೊಗವೀರ ಟ್ರೋಫಿ 2025ಕ್ಕೆ ಅದ್ಧೂರಿ ಚಾಲನೆ
ಕೋಟ ಮೊಗವೀರ ಯುವ ಸಂಘಟನೆಯ (ರಿ.) ಉಡುಪಿ ಜಿಲ್ಲೆ, ಕೋಟ ಶಾಖೆಯ ಆಶ್ರಯದಲ್ಲಿ ಕೋಟ ಮೊಗವೀರ ಪ್ರೀಮಿಯರ್ ಲೀಗ್ – 2025 (KMPL Season–1) ಎಂಬ ಹೆಸರಿನಲ್ಲಿ ಮೊಗವೀರ ಟ್ರೋಫಿ 2025 ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದ್ದು, ಪಂದ್ಯಾವಳಿ ಡಿಸೆಂಬರ್ 27 ಮತ್ತು 28, 2025ರಂದು ನಡೆಯಲಿದೆ.
ಒಟ್ಟು 12 ತಂಡಗಳು ಈ ಪ್ರತಿಷ್ಠಿತ ಲೀಗ್‌ನಲ್ಲಿ ಭಾಗವಹಿಸಲಿದ್ದಾರೆ. ಮೊಗವೀರ ಯುವ ಸಂಘಟನೆ ಕೋಟ ವ್ಯಾಪ್ತಿಯ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಮೊಗವೀರ ಟ್ರೋಫಿ 2025 ಟೂರ್ನಮೆಂಟ್‌ನಲ್ಲಿ ವಿಜೇತ ತಂಡಕ್ಕೆ ₹70,777 ನಗದು ಬಹುಮಾನ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ₹50,555 ನಗದು ಬಹುಮಾನ ನೀಡಲಾಗುತ್ತದೆ. ಇದಲ್ಲದೆ, ಉತ್ತಮ ಆಟಗಾರರಿಗೆ ವೈಯಕ್ತಿಕ ಪ್ರಶಸ್ತಿಗಳು ಹಾಗೂ ವಿಶೇಷ ಗೌರವಗಳನ್ನೂ ನೀಡಲಾಗುವುದು.
ಲೀಗ್ ಪಂದ್ಯಾವಳಿ ಲಕ್ಷ್ಮಿ ಸೋಮ ಬಂಗೇರ ಸರ್ಕಾರಿ ಪ್ರೌಢ ಶಾಲಾ ಆಟದ ಮೈದಾನದಲ್ಲಿ ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ರೋಚಕ ಪಂದ್ಯಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಒದಗಲಿದೆ.
ಈ ಟೂರ್ನಮೆಂಟ್ ರಂಜಿತ್ ಕುಮಾರ್ ಬಾರಿಕೇರಿ, ಪ್ರವೀಣ್ ಕುಂದರ್, ಕೋಟ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದು, ಕೋಟ ಮೊಗವೀರ ಯುವ ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಂಘಟನೆಯ ಹೊಣೆ ಹೊತ್ತಿದ್ದಾರೆ.
ಕೋಟ ಹಾಗೂ ಸುತ್ತಮುತ್ತಲಿನ ಮೊಗವೀರ ಯುವ ಸಂಘಟನೆ ಕೋಟ ವ್ಯಾಪ್ತಿಯ ಕ್ರಿಕೆಟ್ ಪ್ರೇಮಿಗಳಲ್ಲಿ ಈ ಲೀಗ್ ಬಗ್ಗೆ ಅಪಾರ ನಿರೀಕ್ಷೆ ಮೂಡಿದ್ದು, KMPL Season–1 ಸ್ಥಳೀಯ ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದುಕೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
