SportsKannada | ಸ್ಪೋರ್ಟ್ಸ್ ಕನ್ನಡ

ಕೋಟ-ಪಡುಗಡಲ ತೀರದಲ್ಲಿ ಕ್ರಿಕೆಟ್ ಕಲರವ-ಜೈಹಿಂದ್ ಟ್ರೋಫಿ-2021-ಒಂದೇ ಟೂರ್ನಿಯಲ್ಲಿ 4 ವಿಭಾಗಗಳ ಕದನ ಕುತೂಹಲ

ಕೇವಲ ಮೂರು ನಾಲಕ್ಕು ಮೈಲಿ ವ್ಯಾಪ್ತಿಯಲ್ಲಿ ಪಡುಕರೆ ಕೋಟ ಪರಿಸರದ ಆರೇಳು ಬಲಾಡ್ಯ ತಂಡಗಳು ಟೆನಿಸ್ ಬಾಲ್ ಕ್ರಿಕೆಟನ್ನು ಆಳುತ್ತಿದ್ದ ಕಾಲವದು. ದಶಕಗಳ ಹಿಂದೆ ಮೈದಾನದಲ್ಲೂ ಶಾಂದಾರ್ ಪ್ರದರ್ಶನ ನೀಡುವುದರ ಜೊತೆಗೆ ಅದ್ಭುತವೆನಿಸುವ ಕ್ರಿಕೆಟ್ ಟೂರ್ನಮೆಂಟ್‌ಗಳನ್ನ ಸತತವಾಗಿ ಆಯೋಜಿಸಿ ಸೈ ಎನಿಸಿಕೊಳ್ಳುತ್ತಿದ್ದ ಈ ಭಾಗದ ತಂಡಗಳ ಸಾಲು ಹೀಗೆ ಸಾಗುತ್ತದೆ ಇಂಡಿಕಾ, ವಾಹಿನಿ ಪಡುಕರೆ, ಅರಮವಿಜಯ , ಇಲೆವೆನ್ ಅಪ್ ಕೋಟ, ಜಟ್ಟಿಗೇಶ್ವರ, ಶತಮಾನ ಕ್ರಿಕೆಟರ್ಸ್…
ಕೊರೊನ ಹಾವಳಿ ಒಂದು ಕಾರಣವಾದರೂ ಊರ್ಕಡೆ ಕ್ರಿಕೆಟ್ ಕ್ರೇಜ್ ಮುಂಚಿನಷ್ಟಿಲ್ಲ. ಅಲ್ಲೊಂದು ಇಲ್ಲೊಂದು ಹಗಲು ಪಂದ್ಯಗಳು ಬಿಟ್ಟರೆ ಮೆಲ್ಲನೆ ಹಳೆಯ ಫ್ಲಡ್ ಲೈಟ್ ವೈಭವ ಈ ಭಾಗದಲ್ಲಿ ಮರೆಯಾಗುತ್ತಿರುವುದಂತು ನಿಜ.
ಇಂತಹ ಸಮಯದಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಆಟಗಾರ ಪ್ರಶಾಂತ ಪಡುಕರೆ ಮುಂದಾಳತ್ವದಲ್ಲಿ
 ಜೈ ಹಿಂದ್ ಕ್ರಿಕೆಟರ್ಸ್ ಅದಕ್ಕೊಂದು ಸ್ಪೆಷಲ್ ಟಚ್ ನೀಡಲು ಹೊರಟು ದಾಂಡು ಚೆಂಡಿನ ಐತಿಹಾಸಿಕ ಸರಣಿಯೊಂದಕ್ಕೆ ನಾಂದಿಯಿಡಲು ಸಜ್ಜಾಗಿದೆ.ಮಣೂರು ಕ್ರಿಕೆಟ್ ಗತವೈಭವ ಮರುಕಳಿಸಲಿದ್ದು ಜಗಮಗಿಸಲಿದೆ ಪಡುಕರೆ ಕಾಲೇಜು ಅಂಗಣ.4 ಮಾದರಿಯಲ್ಲಿ ನಡೆಯುವ ಎರಡು ದಿನಗಳ ಅಹರ್ನಿಶಿ ಕ್ರಿಕೆಟ್ ಹಬ್ಬಕ್ಕೆ ಇನ್ನಿರುವುದು ಕೇವಲ ಒಂದು ದಿನ ಬಾಕಿ.
ಕರಾವಳಿಯಲ್ಲೇ ಮೊದಲ ಬಾರಿಗೆ ಆರು ಪೋಲಿಸ್ ತಂಡಗಳು ಕ್ರಿಕೆಟ್ ರಣಾಂಗಣದಲ್ಲಿ ಜಿದ್ದಾಜಿದ್ದಿಗಿಳಿಯಲಿದೆ.
ಖುದ್ದು ಉಡುಪಿ ಎಸ್.ಪಿ ಸಾಹೇಬರೆ ಬ್ಯಾಟ್ ಹಿಡಿದು
ಅಖಾಡಕ್ಕಿಳಿಯಲಿದ್ದು ಅವರ ಜೊತೆಗೆ ಸೂಪರ್ ಕಾಪ್‌ಗಳ ದಂಡು ಶನಿವಾರದ ಇಳಿ ಸಂಜೆಯಲಿ ಪಡುಗಡಲ ಊರಿಗೆ ದಾಂಗುಡಿ ಇಡಲಿದ್ದಾರೆ.
ಹಾಗೆಯೇ ಪ್ರಾಂಚೈಸಿ ಟೂರ್ನಿ ಜೆಪಿಎಲ್‌ನ ಇನ್ನೊಂದು ಹೈಲೈಟ್.ಗೆಳೆತನಕ್ಕಾಗಿ ಬೆಂಗಳೂರಿನ ಕೆ.ಆರ್.ಪುರಂ ನ ಪಂದ್ಯ ತ್ಯಜಿಸಿ ಜಾನ್ಸನ್ ತಂಡವನ್ನು ಪಡುಕರೆ ಅಂಗಣದಲ್ಲಿ ಆಡಲಿಳಿಸಿ ಹೃದಯ ವೈಶಾಲ್ಯತೆ ಮೆರೆಯಲಿರುವ ಜಾನ್ಸನ್ ರವಿ ಹೆಗ್ಡೆ,
ಟೆನಿಸ್ ಬಾಲ್ ಕ್ರಿಕೆಟಿನ ರಿಯಲ್ ಐಕಾನ್ ಆಟಗಾರರದ ಸಾಗರ್ ಭಂಡಾರಿ ಮತ್ತು ರಾಜ ಸಾಲಿಗ್ರಾಮ ಪ್ರಮುಖ ಆಕರ್ಷಣೆ. ಗಗನಚುಂಬಿ ಸಿಕ್ಸರ್‌ಗಳಿಗೆ ಸಾಕ್ಷಿಯಾಗಿ ಕಣ್ತುಂಬಿಸಿಕೊಳ್ಳಿ.
ಗೊತ್ತಲ್ಲ ಇವರಿಬ್ಬರು ಕ್ರಿಸ್‌ನಲ್ಲಿದ್ದರೆ
‘Waaw what a six its into the orbit’
‘That is a monster’.
ಇದರ ಜೊತೆಗೆ‌ ಮೂರನೇಯದು ಏರಿಯಾ ವೈಸ್ ಪಂದ್ಯಗಳು. ಕುಂದಾಪುರ ಬ್ರಹ್ಮಾವರ ಭಾಗದ ಟೆನಿಸ್ ಕ್ರಿಕೆಟ್ ಕಿಲಾಡಿಗಳ ಸಂಗಮವಾಗಲಿರುವ ಈ ಮಾದರಿ ಪಂದ್ಯಕೂಟಕ್ಕೆ ಇನ್ನಷ್ಟು ಮೆರಗು ನೀಡಲಿದೆ. ಬ್ಯಾಂಕು ನೌಕರರಿಗು ಕಾರ್ಪೊರೇಟ್ ಸಂಸ್ಥೆ ಸದಸ್ಯರಿಗು ಕೂಡ ಬ್ಯಾಟ್ ಎತ್ತಲು ಇಲ್ಲೊಂದು ಅವಕಾಶವಿದೆ. Its surprise..
ಟೆನಿಸ್ ಕ್ರಿಕಟ್ ಲೋಕದ ಬಿಲ್ಲಿ ಬೌಡನ್ ಮದನ್‌ ಮಡಿಕೇರಿ ತಿರ್ಮಾನಕಾರರಾಗಿ ನಿಮ್ಮನ್ನು ರಂಜಿಸಲಿರುವುದು ಕ್ರಿಕೆಟ್ ಪ್ರೇಮಿಗಳಿಗೆ ಬೋನಸ್. ಇದೆಲ್ಲ ನೋಡಿದ್ರೆ JPL2021 ಆರಂಭಕ್ಕು ಮುನ್ನವೆ  ಹೈಪ್ ಸ್ರಷ್ಟಿಸಿದ್ದಂತು ಸತ್ಯ..
ಸನ್ಮಿತ್ರ ಪಡುಕರೆ
Exit mobile version