Site icon SportsKannada ಸ್ಪೋರ್ಟ್ಸ್ ಕನ್ನಡ

13 ವರ್ಷಗಳ ನಂತರ ರಣಜಿ ಪಂದ್ಯವಾಡಲಿದ್ದಾರೆ ಕಿಂಗ್ ಕೊಹ್ಲಿ!

13 ವರ್ಷಗಳ ನಂತರ ರಣಜಿ ಪಂದ್ಯವಾಡಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಜಗತ್ತಿನ ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಬರೋಬ್ಬರಿ 13 ವರ್ಷಗಳ ನಂತರ ರಣಜಿ ಪಂದ್ಯವಾಡಲು ಸಜ್ಜಾಗಿದ್ದಾರೆ.

ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಗುರುವಾರ ಆರಂಭವಾಗಲಿರುವ ರೈಲ್ವೇಸ್ ವಿರುದ್ಧದ ಪಂದ್ಯದ ಮೂಲಕ ರಣಜಿ ಕ್ರಿಕೆಟ್’ಗೆ ವಿರಾಟ್ ಕೊಹ್ಲಿ ಕಂಬ್ಯಾಕ್ ಮಾಡಲಿದ್ದಾರೆ.

ಉತ್ತರ ಪ್ರದೇಶದ ಗಾಜಿಯಾಬಾದ್’ನಲ್ಲಿ 2012ರಲ್ಲಿ ನಡೆದ ರಣಜಿ ಪಂದ್ಯದಲ್ಲಿ ಕೊನೆಯ ಬಾರಿ ರಣಜಿ ಕ್ರಿಕೆಟ್’ನಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ವಿರಾಟ್ ಕೊಹ್ಲಿ ಮತ್ತೆ ರಣಜಿ ಪಂದ್ಯವಾಡಿರಲಿಲ್ಲ. ಆದರೆ ಈ ಬಾರಿ ಟೀಮ್ ಇಂಡಿಯಾ ಆಟಗಾರರು ದೇಶೀಯ ಕ್ರಿಕೆಟ್’ನಲ್ಲಿ ಆಡಲೇಬೇಕೆಂದು ಬಿಸಿಸಿಐ ಸೂಚನೆ ನೀಡಿರುವ ಕಾರಣ ವಿರಾಟ್ ಕೊಹ್ಲಿ 13 ವರ್ಷಗಳ ಬಳಿಕ ರಣಜಿ ಟ್ರೋಫಿ ಪಂದ್ಯವಾಡಲು ಸಜ್ಜಾಗಿದ್ದಾರೆ.

ಮತ್ತೊಂದೆಡೆ ಕನ್ನಡಿಗ ಕೆ.ಎಲ್ ರಾಹುಲ್ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಲಿರುವ ಹರ್ಯಾಣ ವಿರುದ್ಧದ ರಣಜಿ ಪಂದ್ಯದಲ್ಲಿ ಆಡಲಿದ್ದಾರೆ. ಈ ಮೂಲಕ ಐದು ವರ್ಷಗಳ ನಂತರ ರಾಹುಲ್ ರಣಜಿ ಪಂದ್ಯವಾಡಲು ರೆಡಿಯಾಗಿದ್ದಾರೆ.

ರಣಜಿ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಸಾಧನೆ
2006-07
ಪಂದ್ಯ: 06, ರನ್: 257, ಶತಕ: 00, ಸರಾಸರಿ: 36.71

2007-08
ಪಂದ್ಯ: 05, ರನ್: 373, ಶತಕ: 02, ಸರಾಸರಿ: 53.28

2008-09
ಪಂದ್ಯ: 04, ರನ್: 174, ಶತಕ: 00, ಸರಾಸರಿ: 34.08

2009-10
ಪಂದ್ಯ: 03, ರನ್: 374, ಶತಕ: 01, ಸರಾಸರಿ: 93.50

2010-11
ಪಂದ್ಯ: 04, ರನ್: 339, ಶತಕ: 02, ಸರಾಸರಿ: 56.50

2011-12
ಪಂದ್ಯ: 01, ರನ್: 57, ಶತಕ: 00, ಸರಾಸರಿ: 28.5

ರಣಜಿ ಟ್ರೋಫಿಯಲ್ಲಿ ಕೊಹ್ಲಿ ಸಾಧನೆ
ಪಂದ್ಯ: 23
ರನ್: 1574
ಶತಕ: 05
ಸರಾಸರಿ: 50.77

Exit mobile version