SportsKannada | ಸ್ಪೋರ್ಟ್ಸ್ ಕನ್ನಡ

ನ್ಯೂಜಿಲೆಂಡ್ ಟೆಸ್ಟ್ ತಂಡದಲ್ಲಿ ಆಡಲಿದ್ದಾನೆ ಕನ್ನಡಿಗ ರಚಿನ್ ರವೀಂದ್ರ..!!

ಜೂನ್ 18ರಿಂದ ಕ್ರಿಕೆಟ್ ನ ತವರು ನೆಲ ಇಂಗ್ಲೆಂಡ್‌ನ ಸೌತಾಂಪ್ಟನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‍ ಶಿಪ್  ಫೈನಲ್ ಪಂದ್ಯ ನಡೆಯಲಿದ್ದು ಎರಡು ತಂಡಗಳಲ್ಲಿ ಯುವ ಆಟಗಾರರಿಗೆ ಅವಕಾಶ ಲಭಿಸಿದೆ.ಈ ಪಂದ್ಯಕ್ಕೆ ಬಿಸಿಸಿಐ ಈಗಾಗಲೇ  ಇಪ್ಪತ್ತು ಆಟಗಾರರ ಭಾರತ ತಂಡವನ್ನು ಪ್ರಕಟಿಸಿದೆ. ನ್ಯೂಜಿಲೆಂಡ್‌ ಕೂಡ ಇಪ್ಪತ್ತು ಆಟಗಾರರನ್ನೊಳಗೊಂಡ ನ್ಯೂಜಿಲೆಂಡ್ ತಂಡವನ್ನು ಈಗಾಗಲೇ ಇಂಗ್ಲೆಂಡ್ ಗೆ ಕಳುಹಿಸಿ ಕೊಟ್ಟಿದೆ.
ವಿಶೇಷವೆಂದರೆ ಇಂಗ್ಲೆಂಡ್ ತಲುಪಿರುವ  ನ್ಯೂಜಿಲೆಂಡ್ ನ ಇಪ್ಪತ್ತು ಆಟಗಾರರ ತಂಡದಲ್ಲಿ ಕರ್ನಾಟಕದ 21ರ ಹರೆಯದ ಹುಡುಗ ರಚಿನ್ ರವೀಂದ್ರ ಸ್ಥಾನ ಪಡೆದುಕೊಂಡಿದ್ದಾರೆ. ರಚಿನ್ ರವೀಂದ್ರ ಅವರ ಪೋಷಕರು ಮೂಲತಃ ಕರ್ನಾಟಕದವರಾಗಿದ್ದರು ಸಹ ನ್ಯೂಜಿಲೆಂಡ್‌ನಲ್ಲಿ ನೆಲೆಸಿದ್ದಾರೆ. ಸಾಫ್ಟ್ ವೇರ್   ಕೆಲಸ ನಿರ್ವಹಿಸುತ್ತಿದ್ದಾರೆ. ವಿಧ್ಯಾಭ್ಯಾಸದ ಜೊತೆಗೆ ಕ್ರಿಕೆಟ್ ಕಲಿಕೆಯನ್ನು ನ್ಯೂಜಿಲೆಂಡ್ ನೆಲದಲ್ಲೆ ಕಲಿತಿರುವ ರಚಿನ್ ಉತ್ತಮ ಆಟಗಾರನಾಗಿ ಗುರುತಿಸಿಕೊಂಡಿದ್ದ…
ಆಲ್‌ರೌಂಡರ್ ಆಟಗಾರನಾಗಿರುವ ರಚಿನ್ ರವೀಂದ್ರ 18 ವರ್ಷವಿದ್ದಾಗಲೇ ನ್ಯೂಜಿಲೆಂಡ್ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿ ತನ್ನ ಸಾಮಾರ್ಥ್ಯವನ್ನು ತೋರಿಸಿದ್ದರು. ಇದುವರೆಗೂ 3 ಶತಕ ಮತ್ತು 9 ಅರ್ಧಶತಕಗಳನ್ನು ಸಿಡಿಸಿ ಮಿಂಚುವುದರ ಜೊತೆಗೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಗುರುತಿಸುವಂತೆ ಆಟವನ್ನು ಪ್ರದರ್ಶಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಇದುವರೆಗೂ 1470 ರನ್ ಗಳಿಸಿರುವ ರಚಿನ್ 22 ವಿಕೆಟ್‍ಗಳನ್ನು ಪಡೆದುಕೊಂಡು ಒಬ್ಬ ಉತ್ತಮ ಅಲ್ ರೌಂಡರ್ ಆಗಿ ಹೊರಹೊಮ್ಮಿದ್ದರು . ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ ಕಾರಣಕ್ಕೆ ರಚಿನ್ ರವೀಂದ್ರ ಅವರಿಗೆ ನ್ಯೂಜಿಲೆಂಡ್ ಆಯ್ಕೆ ಸಮಿತಿ ಅವಕಾಶವನ್ನು ನೀಡಿದ್ದು ಮುಂಬರುವ ಭಾರತದ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯುವ ಎಲ್ಲಾ ಸಾಧ್ಯತೆಗಳಿವೆ.
ಅದೇನೆ ಇರಲಿ ಭಾರತೀಯ ಮೂಲದ ಕನ್ನಡಿಗನೊಬ್ಬ ನ್ಯೂಜಿಲೆಂಡ್‌ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ…..
Exit mobile version