SportsKannada | ಸ್ಪೋರ್ಟ್ಸ್ ಕನ್ನಡ

ಆರ್ಸಿಬಿಯ ಸತತ ಐದನೇ ಗೆಲುವಿಗೆ ನೈ ಎಂದ ಚೆನ್ನೈ. ಆಲ್ರೌಂಡರ್ ಪರ್ಫಾರ್ಮನ್ಸ್ ನೀಡಿದ ಸಿಕ್ಸ್-ಸರ್ ಜಡೇಜಾ

ಸತತ ನಾಲ್ಕು ಪಂಧ್ಯಗಳನ್ನ ಗೆದ್ದು ಬೀಗುತಿದ್ದ ಆರ್ಸಿಬಿಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿತು ಚೆನ್ನೈ ಸೂಪರ್ ಕಿಂಗ್ಸ್. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡ ಚೆನ್ನೈ ರುತುರಾಜ್ ಗಾಯಕ್ವಾಡ್ ಹಾಗು ಡುಪ್ಲೆಸ್ಸಿ ಅವರಿಂದ ಉತ್ತಮ ಆರಂಭ ಪಡೆಯಿತು.ಡುಪ್ಲೆಸ್ಸಿ ಅರ್ಧಶತಕವನ್ನೂ ಸಹ ಗಳಿಸಿದರು.
ಆದರೆ ಚೆನ್ನೈ ತಂಡಕ್ಕೆ ವರದಾನ ಹಾಗೂ ಆರ್ಸಿಬಿಗೆ ಶಾಪವಾಗಿದ್ದು ರವೀಂದ್ರ ಜಡೇಜಾ ಗಳಿಸಿದ ಅಜೇಯ 62 ರನ್ನುಗಳು. ಹೌದು ಸರಣಿಯುದ್ದಕ್ಕೂ ಅತ್ಯುತ್ತಮ ಬೌಲಿಂಗ್ ಮಾಡುತ್ತಿರುವ ಹಾಗೂ ಬೌಲಿಂಗ್ ವಿಭಾಗದಲ್ಲಿ ಪರ್ಪಲ್ ಕ್ಯಾಪ್ ಗಳಿಸಿದ ಹರ್ಷಲ್ ಪಟೇಲ್ ಅವರ ಕೊನೆಯ ಓವರಿನಲ್ಲಿ ಜಡೇಜಾ 5 ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ 37 ರನ್ ಸಿಡಿಸಿದರು. ಅವರ ಈ ಮೊತ್ತದೊಂದಿಗೆ ಚೆನ್ನೈ ತಂಡ ಒಟ್ಟು ನಾಲ್ಕು ವಿಕೆಟ್ ಕಳೆದುಕೊಂಡು 191 ರನ್ ಗಳಿಸಿದರು.
ಕಳೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಆರ್ಸಿಬಿ ಆರಂಭಿಕ ಪಡೆ  ಬೌಂಡರಿಯೊಂದಿಗೆ ತಮ್ಮ ಖಾತೆಯನ್ನು ಆರಂಬಿಸಿದರು. ಅದರಲ್ಲೂ ಶತಕವೀರ ದೇವದತ್ ಪಡಿಕ್ಕಲ್ ಮತ್ತೊಮ್ಮೆ ಬಿರುಗಾಳಿ ವೇಗದ ಬ್ಯಾಟಿಂಗ್ ಮಾಡುತಿದ್ದರು. ಆರ್ಸಿಬಿ ಬ್ಯಾಟಿಂಗ್ ಆರ್ಭಟ ಅದೇಷ್ಟು ಜೋರಾಗಿತ್ತು ಅಂದರೆ ಕೇವಲ 4.2.ಓವರಿನಲ್ಲೇ 50 ರನ್ನುಗಳನ್ನು ಕಲೆ ಹಾಕಿತ್ತು ಆದರೆ  ನಾಯಕ ವಿರಾಟ್ ಕೋಹ್ಲಿ ಹಾಗೂ ಪಡಿಕ್ಕಲ್ ಔಟಾಗುತ್ತಲೇ ತಂಡದ ಉಳಿದ ಆಟಗಾರರೆಲ್ಲ ಒಬ್ಬರ ನಂತರ ಒಬ್ಬರಾಗಿ ತಮ್ಮ ವಿಕೆಟ್ಗಳನ್ನ ಒಪ್ಪಿಸುತಾ ಕೊನೆಗೆ ತಂಡ 20 ಓವರಿನಲ್ಲಿ 122 ರನ್ನುಗಳನ್ನ ಮಾತ್ರ ಕಲೆಹಾಕಿತು. ಪಡಿಕ್ಕಲ್ ಅವರು ಗಳಿಸಿದ 34 ರನ್ನು ಗರಿಷ್ಠ ಮೊತ್ತವಾಗಿತ್ತು.
ಇದರೊಂದಿಗೆ ಚೆನ್ನೈ ತಂಡ ಐದು ಪಂದ್ಯಗಳಲ್ಲಿ 4 ಪಂದ್ಯಗಳನ್ನ ಗೆದ್ದು ಪಾಯಿಂಟ್ ಟೇಬಲಲ್ಲಿ ಮೊದಲನೆ ಸ್ಥಾನಕ್ಕೆ ಏರಿತು ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೆ ಸ್ಥಾನಕ್ಕೆ ಇಳಿಯಿತು.ಆರ್ಸಿಬಿ ತಂಡ ತಮ್ಮ ಮುಂದಿನ ಪಂದ್ಯವನ್ನ 27ರಂದು ದೆಹಲಿ ಕ್ಯಾಪಿಟಲ್ಸ್ ತಂಡದೊಂದಿಗೆ ಆಡಲಿದೆ.
ಪ್ರವೀಣ್ ಚಿತ್ತಾಪುರ 
Exit mobile version