SportsKannada | ಸ್ಪೋರ್ಟ್ಸ್ ಕನ್ನಡ

ಹರಿಹರ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಅದ್ಧೂರಿಯ ಚಾಲನೆ.

 

ಓಂ ಕ್ರಿಕೆಟ್ ಕ್ಲಬ್ ಹರಿಹರ ತಂಡದ ಆಶ್ರಯದಲ್ಲಿ ನಗರಸಭಾ ಸದಸ್ಯ ರಜನೀಕಾಂತ್,ಹಿರಿಯ ಕ್ರೀಡಾಪಟು
ಗುರುನಾಥ್ ಹಾಗೂ ಜನಪ್ರಿಯ ಇಲೆವೆನ್ ದಾವಣಗೆರೆ ಮಾಲೀಕರು ಜಯಪ್ರಕಾಶ್ ಗೌಡ ಈ ಮೂವರ ದಕ್ಷ ಸಾರಥ್ಯದಲ್ಲಿ 4 ದಿನಗಳ ಹಗಲಿನ ರಾಷ್ಟ್ರೀಯ ಮಟ್ಟದ ಪಂದ್ಯಾವಳಿ ಇಂದಿನಿಂದ ಹರಿಹರದ ಗಾಂಧಿಮೈದಾನದಲ್ಲಿ ಅದ್ಧೂರಿಯ ಚಾಲನೆ ದೊರಕಿತು.

ಉದ್ಘಾಟನಾ ಸಮಾರಂಭದ ವೇಳೆ ಮಾಜಿ ವಿಧಾನ ಸಭಾ ಸದಸ್ಯ ಬಿ.ಪಿ.ಹರೀಶ್,ಜಿಲ್ಲಾ ಪಂಚಾಯತ್ ಸದಸ್ಯ ವಾಗೀಶ್ ಸ್ವಾಮಿ,ನಗರಸಭಾ ಸದಸ್ಯರ ರಜನೀಕಾಂತ್,ಹಿರಿಯ ಕ್ರೀಡಾಪಟು ಗುರುನಾಥ್ ಹಾಗೂ ಜನಪ್ರಿಯ ಇಲೆವೆನ್ ದಾವಣಗೆರೆ ಮಾಲೀಕರು ಜಯಪ್ರಕಾಶ್ ಗೌಡ(ಜೆ.ಪಿ)ಉಪಸ್ಥಿತರಿದ್ದರು.

16 ತಂಡಗಳು ಪ್ರತಿಷ್ಟಿತ ಟ್ರೋಫಿಗಾಗಿ ಸೆಣಸಾಡಲಿದ್ದು
ರಾಜ್ಯದ ಪ್ರಸಿದ್ಧ ತಂಡಗಳಾದ ಜೈ ಕರ್ನಾಟಕ,ನ್ಯಾಶ್,ಮೈಟಿ,ರಿಯಲ್ ಫೈಟರ್ಸ್ ಉಡುಪಿ,ದಾವಣಗೆರೆ ಇಲೆವೆನ್,ಹಿಂದುಸ್ತಾನ್ ಜೊತೆಯಾಗಿ 10 ಸ್ಥಳೀಯ ತಂಡಗಳು ಸ್ಪರ್ಧಾ ಕಣದಲ್ಲಿದ್ದು ಪ್ರಬಲ ಪೈಪೋಟಿ ನಡೆಯಲಿದೆ.

ವಿಜೇತ ತಂಡ 2,22,222 ರೂ ನಗದು,ರನ್ನರ್ಸ್ ತಂಡ 1,11,111 ರೂ ನಗದು ಸಹಿತ ಆಕರ್ಷಕ ಟ್ರೋಫಿ ಹಾಗೂ ವೈಯಕ್ತಿಕ ಆಕರ್ಷಕ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

ಪಂದ್ಯಾವಳಿಯ ನೇರ ಪ್ರಸಾರ M.Sports ಬಿತ್ತರಿಸಲಿದ್ದು,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ಕಾರ್ಯ ನಿರ್ವಹಿಸಲಿದೆ.

Exit mobile version