SportsKannada | ಸ್ಪೋರ್ಟ್ಸ್ ಕನ್ನಡ

ಉಡುಪಿಯ ವೆಂಟನ ಫೌಂಡೇಶನ್- ಕರಾಟೆ ಪಟುಗಳಿಗೆ ಸಹಾಯ ಹಸ್ತ

ಕುಂದಾಪುರ ಭಂರ್ಡಾಕಾರ್ಸ  ಕಾಲೇಜಿನ ನಾಲ್ಕು ಕರಾಟೆ ಪಟುಗಳಾದ ಚೇತನ ಗಾಣಿಗ, ಪವನ ಪೂಜಾರಿ, ಭರತ ದೇವಾಡಿಗ, ಅಜಯ ದೇವಾಡಿಗ  ಉಡುಪಿಯ ವೆಂಟನ ಫೌಂಡೇಶನ್ ವತಿಯಿಂದ ಅಗೋಸ್ಟ 19 ರಿಂದ 23 ರ ತನಕ ಥೈಲ್ಯಾಂಡಿನಲ್ಲಿ ನಡೆಯುವ ಕರಾಟೆ ಡೂ ಚಾಂಪಿಯನ್ ಶಿಪ್ ಗೆ ಸಹಾಯಧನ‌ ನೀಡುವ ಕಾರ್ಯಕ್ರಮ ನಡೆಯಿತು.
ವೆಂಟನ ಫೌಂಡೇಶನ್ ವತಿಯಿಂದ ಸದಸ್ಯ ಷಣ್ಮುಖರಾಜ ನಾಲ್ಕು ಕ್ರೀಡಾಪಟುಗಳಿಗೆ ತಲಾ ಐವತ್ತೂ ಸಾವಿರ ರೂಪಾಯಿಯ ಚೆಕ್ಕನ್ನು ಹಸ್ತಾಂತರಿಸಿದರು.
ನಂತರ ಮಾತನಾಡುತ್ತಾ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ನಮ್ಮ ವೆಂಟನ ಫೌಂಡೇಶನ್ ಸಹಾಯಹಸ್ತ ವತಿಯಿಂದ ನೀಡಲಾಗಿದೆ. ಈ ಭಾಗದಿಂದ ಅಂತರಾಷ್ಠೀಯ ಮಟ್ಟದ ಪಂದ್ಯಾಟಕ್ಕೆ  ಆಯ್ಕೆಯಾಗುವುದು ಹೆಮ್ಮೆಯ ವಿಷಯ. ಇದರ ಹಿಂದೆ ಅವರ ಹಲವಾರು ವರ್ಷದ ಪರಿಶ್ರಮವಿದೆ. ಇತ್ತೀಚೆಗೆ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನದ ನಂತರ ಈ ಸಹಾಯ ನೀಡಲಾಗಿದೆ. ಇವರ ಈ ಭಾಗವಹಿಸುವಕೆ ಇತರರಿಗೂ ಪ್ರೇರೆಪಣೆಯಾಗಲಿ ಅಲ್ಲದೇ ಮುಂದಿನ ದಿನಗಳಲ್ಲಿ ಬೇರೆಯ ಸ್ಪರ್ಧಾಳುಗಳಿಗೆ ಹೀಗೆಯೇ ಧನಸಹಾಯ ನೀಡಲಿದ್ಧೇವೆ ಎಂದರು.
ಕಾಲೇಜಿನ ಹಳೆ ವಿದ್ಯಾರ್ಥಿ ಕೆ.ಪಿ. ಭಟ್ ಮಾತನಾಡುತ್ತಾ  ಶೈಕ್ಷಣಿಕವಲ್ಲದೇ ಪಾಠೇತರ ಚಟುವಟಿಕೆಗಳಲ್ಲಿ ಭಾಗವಹಿಸುವದರಿಂದ ಸಮಗ್ರ ವ್ಯಕ್ತಿವ್ಯ ನಿರ್ಮಾಣ ಸಾದ್ಯ ಎಂದರು.
ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಪ್ರಕಾಶ ಸೋನ್ಸ್ ಮಾತನಾಡುತ್ತಾ ಕ್ರೀಡಾಳುಗಳಿಗೆ ಶುಭ ಹಾರೈಸುತ್ತಾ ತಾವು ಇಂದಿಗೂ ನಿರಂತರವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರ ಕುರಿತು ವಿಧ್ಯಾರ್ಥಿಗಳಿಗೆ ತಿಳಿಸುತ್ತಾ. ಆಟೋಟಗಳಿಂದ ಜೀವನದಲ್ಲಿ ಸದಾ ಉತ್ಸಾಹ, ಸಕಾರಾತ್ಮಕ‌ ಚಿಂತನೆಯಿಂದ ಕೂಡಿರುತ್ತದೆ. ಎಲ್ಲಾ ಪ್ರಕಾರದ ಕ್ರೀಡೆಗಳಿಗೆ ತಮ್ಮ ಸದಾ ಸಹಾಯಹಸ್ತ ನೀಡುವುದಾಗಿ ಭರವಸೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಪಿ. ನಾರಾಯಣ ಶೆಟ್ಟಿ, ಕಾಲೇಜಿನ  ವಿಶ್ವಸ್ಥ ಮಂಡಳಿಯ ಸದಸ್ಯರಾದ  ದೇವದಾಸ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ದೈಹಿಕ ಶಿಕ್ಷಕ ಶಂಕರನಾರಾಯಣ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
Exit mobile version