SportsKannada | ಸ್ಪೋರ್ಟ್ಸ್ ಕನ್ನಡ

ಹರಿಹರೇಶ್ವರ ಟ್ರೋಫಿಯೊಂದಿಗೆ ಫ್ರೆಂಡ್ಸ್ ಬೆಂಗಳೂರು ಮಡಿಲಿಗೆ ಸತತ 6 ನೇ ರಾಜ್ಯಮಟ್ಟದ ಪ್ರಶಸ್ತಿ

ರಾಜ್ಯ ಟೆನ್ನಿಸ್ ಕ್ರಿಕೆಟ್ ಇತಿಹಾಸದಲ್ಲಿ  ಐತಿಹಾಸಿಕ ದಾಖಲೆ ಬರೆಯುತ್ತಿರುವ ಬಲಿಷ್ಠ ಫ್ರೆಂಡ್ಸ್ ಬೆಂಗಳೂರು ತಂಡ ಇದೀಗ ಮತ್ತೊಂದು ದಾಖಲೆಯನ್ನು ಮಾಡಿದೆ.
ಮಕರ ಸಂಕ್ರಮಣ ಹಬ್ಬದ ಪ್ರಯುಕ್ತ ಜನವರಿ 2024 ರ  ದಿನಾಂಕ  12, 13, 14  ರವರೆಗೆ ದಾವಣಗೆರೆ ಜಿಲ್ಲೆಯ  ಹರಿಹರದ ಡಿ ಆರ್ ಎಮ್ ಹೈಸ್ಕೂಲ್ ಮೈದಾನದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಟೆನ್ನಿಸ್  ಬಾಲ್   ಕ್ರಿಕೆಟ್ ಟೂರ್ನಿ  ”ಶ್ರೀ ಹರಿಹರೇಶ್ವರ ಟ್ರೋಫಿ”  ಯಲ್ಲಿ ಬೆಂಗಳೂರಿನ ಶ್ರೀ ರೇಣು ಗೌಡ ಮಾಲಕತ್ವದ ಫ್ರೆಂಡ್ಸ್ ಬೆಂಗಳೂರು ಜಯಶೀಲರಾಗಿದ್ದಾರೆ.  ಹರಿಹರೇಶ್ವರ ಟ್ರೋಫಿಯೊಂದಿಗೆ ಫ್ರೆಂಡ್ಸ್ ಬೆಂಗಳೂರು ಮಡಿಲಿಗೆ ಸತತ 6 ನೇ ಗೆಲುವಿನ‌ ದಾಖಲೆ ಬರೆಯಿತು‌.
8 ಓವರ್‌ಗಳ ಈ ಟೂರ್ನಿಯಲ್ಲಿ 16 ತಂಡಗಳು ಭಾಗವಹಿಸಿದ್ದವು. ಪ್ರಥಮ ಸ್ಥಾನ  ಪಡೆದ   ಫ್ರೆಂಡ್ಸ್ ಬೆಂಗಳೂರು ಬೆಂಗಳೂರು 3,00,111 ನಗದು ಮತ್ತು ದ್ವಿತೀಯ ಸ್ಥಾನ ಗಳಿಸಿದ ದಾವಣಗೆರೆ ಇಲೆವೆನ್ ರೂಪಾಯಿ 1,50,555 ನಗದು ಮತ್ತು ರನ್ನರ್  ಅಪ್ ಟ್ರೋಫಿಯನ್ನು ಪಡೆಯಿತು.
2023-24ರ ಸಾಲಿನ ಪಂದ್ಯಾವಳಿಗಳಲ್ಲಿ  ಮೊದಲು ಹಿರಿಯೂರು ಪಂದ್ಯಾವಳಿಯನ್ನು ಗೆದ್ದ ಫ್ರೆಂಡ್ಸ್ ಬೆಂಗಳೂರು  ತದನಂತರ ಸತತವಾಗಿ ಮಹಾಲಕ್ಷ್ಮಿ ಲೇಔಟ್ ಟೂರ್ನಿ, ಶಾಮನೂರು ಡೈಮಂಡ್ ಮತ್ತು ಶಿವಗಂಗಾಕಪ್  ದಾವಣಗೆರೆ, ದುರ್ಗಾ ಇಲೆವೆನ್-  ಅರ್ಜುನ ಕಪ್ 2023 ಚಿತ್ರದುರ್ಗ ಟೂರ್ನಮೆಂಟ್ ಗಳನ್ನು ಗೆದ್ದಿತ್ತು.  ಈ ನಡುವೆ ಶ್ರೀರಂಗಪಟ್ಟಣದಲ್ಲಿ ನಡೆದ ಪಂದ್ಯಾವಳಿಯಲ್ಲೂ ದ್ವಿತೀಯ ಸ್ಥಾನ ಗಳಿಸಿತ್ತು.  ಇದೀಗ ಹರಿಹರದಲ್ಲಿ ನಡೆದ ಈ ಒಂದು ಪಂದ್ಯಾಕೂಟವನ್ನು ಗೆದ್ದುಕೊಂಡು  6 ನೇ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಗಳಾಗಿ ಬೀಗುತ್ತಿದ್ದಾರೆ.
ಈ ಸಂದರ್ಭದಲ್ಲಿ ಸ್ಪೋರ್ಟ್ಸ್ ಕನ್ನಡ ವಾಹಿನಿಯು ತಂಡದ ಮಾಲೀಕರಾದ ಶ್ರೀಯುತ ರೇಣು ಗೌಡ ಇವರನ್ನು ದೂರವಾಣಿ  ಮೂಲಕ  ಸಂಪರ್ಕಿಸಿ ಅಭಿನಂದಿಸಿತು. ರೇಣುಗೌಡ ಅವರು ಮಾತನಾಡಿ,“ಆಟಗಾರರ ನಡುವಿನ ಪರಸ್ಪರ ಹೊಂದಾಣಿಕೆ,ಒಬ್ಬರ ಯಶಸ್ಸನ್ನು ಇನ್ನೊಬ್ಬರು ಸಂಭ್ರಮಿಸುವುದು ಹಾಗೂ ದೇವರ ದಯೆ,
ಅಭಿಮಾನಿಗಳ ಹಾರೈಕೆಯಿಂದ ಯಶಸ್ಸು ಲಭಿಸಿದೆ,ತಂಡದ ಮೇಲಿನ ಪ್ರೀತಿ,ಹಾರೈಕೆಗೆ ಸದಾ ಆಭಾರಿ”ಎಂದರು.
Exit mobile version