SportsKannada | ಸ್ಪೋರ್ಟ್ಸ್ ಕನ್ನಡ

ನವೆಂಬರ್ 16,17ರಂದು ಹೊನಲು ಬೆಳಕಿನ ಬೀಜಾಡಿ ಟ್ರೋಫಿ-2019

ಸಮಾಜದ ಅಶಕ್ತ ಕುಟುಂಬದ ನೆರವು ಹಾಗೂ ಗ್ರಾಮೀಣ ಮಟ್ಟದ ಪ್ರತಿಭೆಗಳನ್ನು ಮುಖ್ಯ ವೇದಿಕೆಗೆ ತರುವ ಸದುದ್ದೇಶದಿಂದ ಗೆಳೆಯರ ಬಳಗ ಬೀಜಾಡಿ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಇದೇ ಬರುವ ಶನಿವಾರ ಹಾಗೂ ರವಿವಾರದಂದು ಬೀಜಾಡಿ ಪಡುಶಾಲೆಯಲ್ಲಿ 40 ಗಜಗಳ ಹೊನಲು ಬೆಳಕಿನ ಪಂದ್ಯಾಕೂಟವನ್ನು ಏರ್ಪಡಿಸಲಾಗಿದೆ.

ಶನಿವಾರದಂದು ಸ್ಥಳೀಯ ಆಟಗಾರರನ್ನೊಳಗೊಂಡ 6 ಫ್ರಾಂಚೈಸಿಗಳು ಕಾದಾಡಲಿದ್ದು ಗ್ರಾಮೀಣ ಮಟ್ಟದ ಕ್ರಿಕೆಟ್ ಪಟುಗಳ ಪ್ರತಿಭೆ ಅನಾವರಣಗೊಳ್ಳಲಿದೆ. ರವಿವಾರದಂದು ಉಡುಪಿ, ಕುಂದಾಪುರ ಪರಿಸರದ 29 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದೆ. ಪ್ರಥಮ ಪ್ರಶಸ್ತಿ ವಿಜೇತ ತಂಡ‌ 25,555 ನಗದು,ದ್ವಿತೀಯ ಸ್ಥಾನಿ ತಂಡ 15,555 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.

ಮಂಗಳವಾರ ಸಂಜೆ ನಡೆದ ಸರಳ ಸಮಾರಂಭದಲ್ಲಿ ಅತ್ಯಾಕರ್ಷಕ “ಬೀಜಾಡಿ ಟ್ರೋಫಿ” ಅನಾವರಣ ಹಾಗೂ ಸಮವಸ್ತ್ರ ವಿತರಣೆ ನಡೆಯಿತು‌.

ಈ ಸಂದರ್ಭ ಬೀಜಾಡಿ ಶಾಲೆಯ S.D.M.C ಅಧ್ಯಕ್ಷ ಸುಭಾಷ್ ಕಾಂಚನ್, ಗೆಳೆಯರ ಬಳಗದ ಅಧ್ಯಕ್ಷ ಅಶೋಕ್ ಪೂಜಾರಿ, ಉಪಾಧ್ಯಕ್ಷ ಗಣೇಶ ಅಕ್ಷಾಂತರಿಯ, ಸ್ಪೋರ್ಟ್ಸ್ ಕನ್ನಡದ ಮುಖ್ಯಸ್ಥ ಕೋಟ ರಾಮಕೃಷ್ಣ ಆಚಾರ್ಯ, ಸಮವಸ್ತ್ರ ಪ್ರಾಯೋಜಕರಾದ ಸುಧಾಕರ್ ಪೂಜಾರಿ, ಸಿರಾಜ್ ರಿಧಾ ಅಮೀನ್, ಆನಂದ್ ಬಿಳಿಯ, ರಾಜೇಶ್ ಪೂಜಾರಿ‌ ಹಾಗೂ ಪಂದ್ಯಾಕೂಟದ ಮುಖ್ಯ ರೂವಾರಿ ಚಾಲೆಂಜ್ ಗಣೇಶ್ ಉಪಸ್ಥಿತರಿದ್ದರು.

ಆರ್.ಕೆ.ಆಚಾರ್ಯ ಕೋಟ

Exit mobile version