SportsKannada | ಸ್ಪೋರ್ಟ್ಸ್ ಕನ್ನಡ

ಪಡುಬಿದ್ರಿ-ಶಶಿಕಲಾ ಆಚಾರ್ಯ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಆದರ್ಶ ಮೆರೆದ ಶ್ರೀವಿಕಾ ಕ್ರಿಕೆಟರ್ಸ್

ಶ್ರೀವಿಕಾ ಕ್ರಿಕೆಟ್ ಕ್ಲಬ್ ಪಾದೆಬೆಟ್ಟು “ಶ್ರೀವಿಕಾ ಕಪ್-2022” ಆಯೋಜಿಸಿ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ,ರೇಷನ್ ಕಿಟ್ ಸಹಿತ,ಸಂಗ್ರಹವಾದ ಅಷ್ಟೂ ಮೊತ್ತವನ್ನು ಪಾದೆಬೆಟ್ಟು ಶಶಿಕಲಾ ಆಚಾರ್ಯ ರವರ ಕುಟುಂಬ ನಿರ್ವಹಣೆಗೆ ನೀಡಿ ಮಾನವೀಯತೆ ಮೆರೆದಿದೆ.
ಏಪ್ರಿಲ್ ದಿನಾಂಕ 9 ಮತ್ತು 10 ರಂದು ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ಈ ಪಂದ್ಯಾವಳಿ ನಡೆದಿದ್ದು ಧನಲಕ್ಷ್ಮೀ ಚಿತ್ರಾಪುರ ಪ್ರಥಮ ಬಹುಮಾನ ಮತ್ತು ಶ್ರೀವಿಕಾ ಪಾದೆಬೆಟ್ಟು ತಂಡ ದ್ವಿತೀಯ ಬಹುಮಾನ ಪಡೆದರು. ಟೂರ್ನಮೆಂಟ್ ನ ಬೆಸ್ಟ್ ಬ್ಯಾಟ್ಸ್‌ಮನ್‌ ಸುದೇಶ್ ಶ್ರೀವಿಕಾ,ಬೆಸ್ಟ್ ಬೌಲರ್ ವರುಣ್ ಶ್ರೀವಿಕಾ,
ಮತ್ತು ಫೈನಲ್ ಪಂದ್ಯಶ್ರೇಷ್ಟ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ವಿತೇಶ್ ಪಡೆದುಕೊಂಡರು.
ಶನಿವಾರ ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಉಡುಪಿ ಜಿಲ್ಲೆ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಗೌರವಾಧ್ಯಕ್ಷರಾದ ಶರತ್ ಶೆಟ್ಟಿ ಪಡುಬಿದ್ರಿ ಮಾತನಾಡಿ “ಪಂದ್ಯಾಟ ಸಂಘಟನೆಯೊಂದಿಗೆ ಬಡಕುಟುಂಬದ ಸಹಾಯಕ್ಕೆ ಮುಂದಾಗಿರುವುದು ಸಮಾಜಕ್ಕೆ ಮಾದರಿ” ಎಂದರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಚ್ಚಿಲ ಕಾಳಿಕಾಂಬಾ ದೇವಸ್ಥಾನದ 2 ನೇ ಮೊಕ್ತೇಸರರಾದ ಗಣೇಶ್ ಆಚಾರ್ಯ ಉಚ್ಚಿಲ “ಕ್ರೀಡಾ ಕೂಟ ಸಂಘಟಿಸಿ,ವಿಶ್ವಕರ್ಮ ಸಮಾಜದ ಬಡಕುಟುಂಬದ ನೆರವಿಗೆ ನಿಂತ ಶ್ರೀವಿಕಾ ಪಾದೆಬೆಟ್ಟು ತಂಡದ ಸಾಧನೆ ಶ್ಲಾಘನೀಯ ಎಂದರು‌.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಕೋಟ ರಾಮಕೃಷ್ಣ ಆಚಾರ್ ಸ್ಪೋರ್ಟ್ಸ್ ಕನ್ನಡ, ಶ್ರೀಕಾಂತ್ ಆಚಾರ್ಯ ವಿಶ್ವಭಾರತಿ ಕಾಪು,ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಉಪಾಧ್ಯಕ್ಷರಾದ ವ್ಯಾಸರಾಯ ಆಚಾರ್ಯ,ಪಾದೆಬೆಟ್ಟು ವಿಶ್ವಬ್ರಾಹ್ಮಣ ಸಮಾಜ ಸೇವಾಸಂಘದ ಅಧ್ಯಕ್ಷ ಸುಬ್ರಾಯ ಆಚಾರ್ಯ,ಗ್ರಾಮ ಪಂಚಾಯತ್ ಸದಸ್ಯರು ಸಂದೇಶ್ ಶೆಟ್ಟಿ,ಶ್ರೀಧರ ಆಚಾರ್ಯ ಪಾದೆಬೆಟ್ಟು,ಕಾಪು ವಿಶ್ವಬ್ರಾಹ್ಮಣ ಯುವ ಸಂಘಟನೆ ಉಪಾಧ್ಯಕ್ಷರಾದ ರತ್ನಾಕರ ಆಚಾರ್ಯ,ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯೆ ಶೋಭಾ ಶೆಟ್ಟಿ,ಶರತ್ ಶರ್ಮಾ ಪಡುಬಿದ್ರಿ,ಅಶೋಕ್ ಆಚಾರ್ಯ ಬೆಂಗಳೂರು, ಶಿವರಾಮ ಆಚಾರ್ಯ ಕಿನ್ನಿಗೋಳಿ,ಹಿರಿಯ ಆಟಗಾರರಾದ ಭಾಸ್ಕರ್ ಆಚಾರ್ಯ ಗುಂಡಿಬೈಲು ಮತ್ತು ಶ್ರೀವಿಕಾ ತಂಡದ ಸರ್ವಸದಸ್ಯರು ಉಪಸ್ಥಿತರಿದ್ದರು…
Exit mobile version