SportsKannada | ಸ್ಪೋರ್ಟ್ಸ್ ಕನ್ನಡ

ಕ್ರಿಕೆಟ್ ಆಡಬೇಕೆಂಬ ಕನಸು ಹೊತ್ತವರ ಗುರಿ ಭಾರತ ತಂಡವನ್ನು ಪ್ರತಿನಿಧಿಸುವುದಾಗಿರುತ್ತದೆ. At least ಐಪಿಎಲ್’ನಲ್ಲಿ ಆಡಿದ್ರೂ ಸಾಕು, life settle ಎಂಬ ಕಾಲಘಟ್ಟವಿದು.

“ಗುರಿ” ಇದ್ದರೆ ಸಾಲದು, ಗುರಿಯೆಡೆಗೆ ಮುನ್ನಡೆಸುವ ಸಮರ್ಥ “ಗುರು” ಕೂಡ ಬೇಕು. ಅಂಥಾ ಗುರುವಿನ ಹುಡುಕಾಟದಲ್ಲಿ ಎದ್ದು ಕಾಣುವ ಹೆಸರು ಪೀಣ್ಯ ಎಕ್ಸ್’ಪ್ರೆಸ್ ಅಭಿಮನ್ಯು ಮಿಥುನ್.
ತಮ್ಮ 31ನೇ ವಯಸ್ಸಲ್ಲೇ ಕರ್ನಾಟಕ ತಂಡಕ್ಕೆ ಗುಡ್ ಬೈ ಹೇಳಿ ಯುವ ಪ್ರತಿಭೆಗಳಿಗೆ ದಾರಿ ಮಾಡಿಕೊಟ್ಟಿರುವ ಮಿಥುನ್ ಈಗ ಟಿ10, ಟಿ20 ಲೀಗ್’ಗಳಲ್ಲಿ ಆಡುತ್ತಿದ್ದಾರೆ. ಜೊತೆಗೆ ಬೆಂಗಳೂರಿನ ಮಾಕಳಿ ಬಳಿಯ ಆಲೂರು ಮುಖ್ಯರಸ್ತೆಯಲ್ಲಿ Run Up Cricket ಅಕಾಡೆಮಿಯನ್ನು ನಡೆಸುತ್ತಿದ್ದಾರೆ. ಸ್ವತಃ ತಾವೇ ಮುಂದೆ ನಿಂತು ಕ್ರಿಕೆಟ್ ಪಾಠಗಳನ್ನು ಹೇಳಿ ಕೊಡುತ್ತಿದ್ದಾರೆ. ಕರ್ನಾಟಕ ರಣಜಿ ತಂಡದ ಬಹುತೇಕ ವೇಗದ ಬೌಲರ್’ಗಳು ಮಿಥುನ್ ಅವರ ಗರಡಿಯಲ್ಲೇ ತಯಾರಾಗುತ್ತಿದ್ದಾರೆ.
ಎರಡು ತಿಂಗಳ ಹಿಂದೆ ಮಿಥುನ್ ಅವರ Run Up Cricket ಅಕಾಡೆಮಿಗೆ ಹೋಗಿದ್ದೆ. ಬೆಳಗ್ಗೆ 8 ಗಂಟೆಗೆ ಹೋದರೆ, ನೆಟ್ಸ್ ಬಳಿ ಕೂತಿದ್ದ ಮಿಥುನ್ ಕ್ರಿಕೆಟ್ ಆಡುತ್ತಿದ್ದ ಹುಡುಗರ ಮೇಲೆ ಕಣ್ಣಿಟ್ಟಿದ್ದರು.
ಕ್ರಿಕೆಟ್ ಕಲಿಯಲು ಅದ್ಭುತ ವಾತಾವರಣ.
ಅಭಿಮನ್ಯು ಮಿಥುನ್ ಬಗ್ಗೆ ಹೇಳಲೇಬೇಕಿಲ್ಲ. ಕರ್ನಾಟಕ ಕಂಡ ಅದ್ಭುತ ಕ್ರಿಕೆಟಿಗ, amazing fast bowler. ಮಾತು ಕಡಿಮೆ.. ಅವರ ಬಗ್ಗೆ ಸಾಧನೆಯೇ ಮಾತುಗಳನ್ನಾಡುತ್ತವೆ. ಕರ್ನಾಟಕ ತಂಡದ ಪರ ಆಡುತ್ತಿದ್ದಾಗ ಎರಡೆರಡು ಬಾರಿ ರಣಜಿ ಟ್ರೋಫಿ, ಇರಾನಿ ಕಪ್, ವಿಜಯ್ ಹಜಾರೆ ಟ್ರೋಫಿ ಸೇರಿದಂತೆ ಒಟ್ಟು 10 ಕಪ್’ಗಳನ್ನು ಗೆದ್ದಿರುವ ಅಸಾಮಾನ್ಯ.
ಭಾರತ ಪರ 4 ಟೆಸ್ಟ್, 5 ODI ಪಂದ್ಯಗಳು, 103 ಪ್ರಥಮದರ್ಜೆ ಪಂದ್ಯಗಳಿಂದ 338 ವಿಕೆಟ್ಸ್ ಸೇರಿದಂತೆ ಕ್ರಿಕೆಟ್ ಕರಿಯರ್’ನಲ್ಲಿ 543 ವಿಕೆಟ್’ಗಳು. ಇಂಥಾ ಒಬ್ಬ ಕ್ರಿಕೆಟಿಗನ ಗರಡಿಯಲ್ಲಿ ಕ್ರಿಕೆಟ್ ಪಾಠ ಹೇಳಿಸಿಕೊಳ್ಳುವುದೇ ಒಂದು ಸೌಭಾಗ್ಯ. ಮಿಥುನ್ ಅವರ Run Up Cricket ಅಕಾಡೆಮಿಯಲ್ಲಿ summer camp ಶುರುವಾಗಲಿದೆ. ಕ್ರಿಕೆಟ್ ಕಲಿಯುವವರಿಗೆ ಇದೊಂದು golden opportunity. ಎಲ್ಲೆಲ್ಲೋ ಕ್ರಿಕೆಟ್ ಕಲಿಯುವುದಕ್ಕಿಂತ ಇಂಥಾ ಸಮರ್ಥರಿಂದ ಕ್ರಿಕೆಟ್ ಪಾಠ ಹೇಳಿಸಿಕೊಂಡರೆ ಕ್ರಿಕೆಟ್ ಕರಿಯರ್’ಗೆ ಅದೇ ಗಟ್ಟಿ ಬುನಾದಿ.
#RunUpCricket #AbhimanyuMithun #CricketSummerCamp #KarnatakaCricket #RanjiTrophy #RanjiKarnataka
Exit mobile version