SportsKannada | ಸ್ಪೋರ್ಟ್ಸ್ ಕನ್ನಡ

ನೌಕರರೊಡನೆ ದಿನವಿಡೀ ಮೈದಾನದಲ್ಲಿ ಆಟವಾಡಿ ಸ್ಪೂರ್ತಿ ತುಂಬಿದ ಸರಳತೆಯ ಸಾಹುಕಾರ-ಡಾ‌.ಗೋವಿಂದ ಬಾಬು ಪೂಜಾರಿ

ಗೆದ್ದ ತಂಡವಷ್ಟೇ ಅಲ್ಲ,ಸೋತ ತಂಡದವರ ಬೆನ್ನು ತಟ್ಟಿ ಹುರಿದುಂಬಿಸಿ ಕ್ರೀಡಾ ಸ್ಪೂರ್ತಿ ಮೆರೆದ ಉದ್ಯಮ ರತ್ನ ಡಾ.ಗೋವಿಂದ ಬಾಬು ಪೂಜಾರಿ.
ಶೆಫ್ ಟಾಕ್ ಫುಡ್&ಹಾಸ್ಪಿಟಾಲಿಟಿ ಸರ್ವಿಸಸ್ಸ್ ಪ್ರೈ.ಲಿ ಉದ್ಯಮ ಸಂಸ್ಥೆಯನ್ನು ಸ್ಥಾಪಿಸಿ,ಹಲವು ರಾಜ್ಯಗಳಲ್ಲಿ ಅಂಗ ಸಂಸ್ಥೆಯನ್ನು ಸ್ಥಾಪಿಸಿ ಸಾವಿರಾರು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿ,ಸಮಾಜಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸಮಾಜರತ್ನ ಡಾ.ಗೋವಿಂದ ಬಾಬು ಪೂಜಾರಿ ಇವರು ತಮ್ಮ‌‌ ಸಂಸ್ಥೆಗಳಲ್ಲಿ ದಿನಂಪ್ರತಿ ದುಡಿಯುವ ನೌಕರರಿಗಾಗಿ 2 ನೇ ಬಾರಿ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ್ದರು.
ಬೆಂಗಳೂರು ಕೂಡ್ಲುಗೇಟ್ ಸಮೀಪದ ಮೈದಾನದಲ್ಲಿ ಡಿಸೆಂಬರ್ 25 ರಂದು 60 ಗಜಗಳ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದ್ದ ಈ ಪಂದ್ಯಾವಳಿಯಲ್ಲಿ ಗೋವಿಂದ ಬಾಬು ಪೂಜಾರಿ ಇವರ ಒಡೆತನದ 8 ಸಂಸ್ಥೆಗಳಾದ
1)ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ
2)ಮತ್ಸ್ಯ ಬಂಧನ ಪ್ರೈ.ಲಿಮಿಟೆಡ್
3)ಪ್ರಗ್ನ್ಯಾ ಸಾಗರ(ಹೋಟೆಲ್ಸ್&ರೆಸಾರ್ಟ್ಸ್)
4)ಶೆಫ್ ಟಾಕ್ ನ್ಯೂಟ್ರಿಫುಡ್‌ ಪ್ರೈ.ಲಿಮಿಟೆಡ್
5)ಶ್ರೀ ನಾರಾಯಣ ಗುರು ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್
6)ಮತ್ಸ್ಯ ಲೋಕ
7)ಫೆಲಿಜ್ ನ್(FELIZ N)
8)ಇಂದಿರಾ ಕ್ಯಾಂಟೀನ್ ಭಾಗವಹಿಸಿದ್ದರು.
ಅಂತಿಮವಾಗಿ ರೋಚಕ ಫೈನಲ್ ನಲ್ಲಿ ಇಂದಿರಾ ಕ್ಯಾಂಟೀನ್ ತಂಡ ಫೈನಲ್ ನಲ್ಲಿ ಅಸಾಧ್ಯ ಗುರಿಯನ್ನು ಬೆಂಬತ್ತಿ ಜಯದಾಖಲಿಸಿದರು.ಇಂದಿರಾ ಕ್ಯಾಂಟೀನ್ ತಂಡದ ಆಟಗಾರನೋರ್ವ ಒಂದೇ ಇನ್ನಿಂಗ್ಸ್ ನಲ್ಲಿ 8 ಸಿಕ್ಸರ್ ಸಿಡಿಸಿ ಡಾ.ಗೋವಿಂದ ಬಾಬು ಪೂಜಾರಿಯವರು ಘೋಷಿಸಿದ 8000 ನಗದು ಬಹುಮಾನವನ್ನು ಪಡೆದರು.ವಿಶೇಷವಾಗಿ ಡಾ‌.ಗೋವಿಂದ ಬಾಬು ಪೂಜಾರಿಯವರು 2 ಪಂದ್ಯಗಳಲ್ಲಿ 4 ಓವರ್ ಬೌಲಿಂಗ್ ನಡೆಸಿ,ಬ್ಯಾಟಿಂಗ್ ನಲ್ಲಿಯೂ ಮಿಂಚಿದರು.
ವಿಶೇಷ ಆಕರ್ಷಣೆ ಎಂಬಂತೆ ರಾಜ್ಯದ ಪ್ರಸಿದ್ಧ ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ನಿರ್ಣಾಯಕರಾಗಿ ಹಾಗೂ ವೀಕ್ಷಕ ವಿವರಣೆಕಾರರಾಗಿ ಭಾಗವಹಿಸಿದರು.ವಿಶೇಷ ಅತಿಥಿಯಾಗಿ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ನ‌ ಸಂಪಾದಕರಾದ ಕೋಟ ರಾಮಕೃಷ್ಣ ಆಚಾರ್,ಪಂದ್ಯಾವಳಿಯ ಆಯೋಜಕರಾದ ಸುಮಂತ್ ಬಿಲ್ಲವ,ಚೇತನ್ ಮತ್ತು ಕಂಪೆನಿಯ ನೌಕರರ ಕುಟುಂಬ
ಯುವಕ,ಯುವತಿಯರು ಉಪಸ್ಥಿತರಿದ್ದರು.
Exit mobile version