SportsKannada | ಸ್ಪೋರ್ಟ್ಸ್ ಕನ್ನಡ

ಪ್ರಸಾದ್ “ಕ್ಲಾಸಿಕ್”ಶೋ-ರಾಕರ್ಸ್ ” ವಿಷ್ಣು ಕಪ್-2020″ ಚಾಂಪಿಯನ್ಸ್.

 

ಕ್ಲಾಸಿಕ್ ಕ್ರಿಕೆಟರ್ಸ್ ಬೆಂಗಳೂರು ಇವರ ಆಶ್ರಯದಲ್ಲಿ,ವಿಲ್ಲೋ ಪವರ್ ಕ್ರಿಕೆಟ್ ಅಕಾಡೆಮಿ ಇವರ ಸಹಭಾಗಿತ್ವದಲ್ಲಿ ಮಾರ್ಚ್ 7,8 ರಂದು ಬೆಂಗಳೂರಿನ ಆರ್‌.ಟಿ.ನಗರ ಎಚ್.ಎಮ್.ಟಿ‌ ಅಂಗಣದಲ್ಲಿ ನಡೆದ
ವಿಷ್ಣು ಕಪ್-2020 ಪ್ರಶಸ್ತಿಯನ್ನು ಬೆಂಗಳೂರಿನ ಬಲಿಷ್ಠ ರಾಕರ್ಸ್ ತಂಡ ಗೆದ್ದುಕೊಂಡಿತು.

ರಾಜ್ಯದ ಪ್ರತಿಷ್ಟಿತ ತಂಡಗಳು ಭಾಗವಹಿಸಿದ್ದ ಈ ಟೂರ್ನಿಯ ಸೆಮಿಫೈನಲ್ಸ್ ನಲ್ಲಿ
ರಾಕರ್ಸ್ ತಂಡ ನ್ಯಾಶ್ ಬೆಂಗಳೂರು ನ್ನು ಹಾಗೂ ಎಮ್.ಬಿ.ಸಿ.ಸಿ ತಂಡ ಕ್ಲಾಸಿಕ್ ಕ್ರಿಕೆಟರ್ಸ್ ತಂಡವನ್ನು ಸೋಲಿಸಿ ಫೈನಲ್ ಗೆ ಭಡ್ತಿ ಪಡೆದಿತ್ತು.

ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಎಮ್.ಬಿ.ಸಿ.ಸಿ ಯ ದಾಂಡಿಗರು,ರಾಕರ್ಸ್ ನ‌ ಪ್ರಸಾದ್,ಮದನ್ ಹಾಗೂ ಅಭಿ‌ ವೇಗದ ದಾಳಿಗೆ ರನ್ ಗಳಿಸಲು ಪರದಾಡಿ ಕೇವಲ 17 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನೊಪ್ಪಿಸಿತ್ತು.

ಸುಲಭದ ಗುರಿಯನ್ನು ಬೆಂಬತ್ತಿದ ರಾಕರ್ಸ್ ನವೀನ್ 15 ರನ್ ಗಳ ನೆರವಿನಿಂದ 3.3 ಓವರ್ ಗಳಲ್ಲಿ ಗೆಲುವನ್ನು ಸಾಧಿಸಿತ್ತು.

ಪ್ರಥಮ ಪ್ರಶಸ್ತಿ ರೂಪದಲ್ಲಿ
ರಾಕರ್ಸ್ ತಂಡ 1,11,111 ರೂ,ದ್ವಿತೀಯ ಸ್ಥಾನಿ ಎಮ್.ಬಿ.ಸಿ.ಸಿ
55,555 ರೂ ಹಾಗೂ ತೃತೀಯ ಹಾಗೂ ಚತುರ್ಥ ಸ್ಥಾನಿ ತಂಡ ತಲಾ 5,555 ನಗದು ಪುರಸ್ಕಾರಗಳನ್ನು ಹಾಗೂ ಆಕರ್ಷಕ ಟ್ರೋಫಿಗಳನ್ನು
ಪಡೆದರು.

ಪ್ರಸಾದ್ “ಕ್ಲಾಸಿಕ್ ಶೋ”
ಫ್ರೆಂಡ್ಸ್ ಬೆಂಗಳೂರು ತಂಡದ ಬೌಲಿಂಗ್ ಅಸ್ತ್ರ ಕುಂದಾಪುರ ಮೂಲದ ವೇಗಿ ಪ್ರಸಾದ್ ನೇರಳೆಕಟ್ಟೆಯವರನ್ನು,
ರಾಕರ್ಸ್ ತಂಡದ ಯುವ ಕಪ್ತಾನ ಮದನ್ ಮತ್ತು ಚಾಣಾಕ್ಷ ಕ್ರಿಕೆಟಿಗ ನವೀನ್ ಲೆಕ್ಕಾಚಾರದ ಪ್ರಕಾರ,
ಆರಂಭಿಕ ಆಟಗಾರನಾಗಿ ಕಣಕ್ಕಿಳಿಸಿ ಯಶಸ್ಸನ್ನು ಪಡೆದಿದ್ದರು.
ಲೀಗ್ ಹಾಗೂ ನಿರ್ಣಾಯಕ ಹಂತದ ಪಂದ್ಯಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್ ನಡೆಸಿ ತಂಡವನ್ನು ಆಧರಿಸಿ, ಅತ್ಯಧಿಕ ವಿಕೆಟ್ ಗಳಿಸಿದ ಎಸೆತಗಾರನಾಗಿ ಹೊರಹೊಮ್ಮಿ
ಬೆಸ್ಟ್ ಬೌಲರ್,ಫೈನಲ್ ನ ಪಂದ್ಯಶ್ರೇಷ್ಟ ಹಾಗೂ ಅರ್ಹವಾಗಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡರು.
ಸರಣಿಯ ಅತ್ಯುತ್ತಮ ದಾಂಡಿಗ ಪ್ರಶಸ್ತಿ‌ ಕ್ಲಾಸಿಕ್ ಕ್ರಿಕೆಟರ್ಸ್ ನ ಅಮಿತ್ ಪಾಲಾಯಿತು.

ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವರು ಹಾಗೂ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ನಗರ ಪಾಲಿಕೆ ಸದಸ್ಯರು ಶ್ರೀ ಆನಂದ್,ಸಮಾಜ ಸೇವಕರು ಶ್ರೀ ವಿಜಯ್ ಕುಮಾರ್,ಉಡುಪಿ ಉಪಹಾರ್ ಮಾಲೀಕರಾದ ಶ್ರೀ ಗೋಪಾಲ ಶೆಟ್ಟಿ,ಮಾಜಿ ಎ.ಸಿ.ಪಿ ಶ್ರೀ ನಾಗರಾಜ್,ವಿಲ್ಲೋ ಪವರ್ ಅಕಾಡೆಮಿಯ ರೂವಾರಿ ಗಳಾದ
ಶ್ರೀ ಗೋಪಿ ಮತ್ತು ಶ್ರೀ ಆನಂದ್ ಇನ್ನಿತರ ಗಣ್ಯರು ಹಾಗೂ ಕ್ಲಾಸಿಕ್ ಕ್ರಿಕೆಟರ್ಸ್ ನ‌ ಸದಸ್ಯರು ಉಪಸ್ಥಿತರಿದ್ದರು.

ಮೊಹಮ್ಮದ್ ಯಾಸೀನ್ ಮಾಲೀಕತ್ವದ Y.Sports ಪಂದ್ಯಾವಳಿಯ ನೇರ ಪ್ರಸಾರವನ್ನು ಬಿತ್ತರಿಸಿದರೆ,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ,
ಕೊಪ್ಪದ ಅಫ್ಜಲ್ ವೀಕ್ಷಕ ವಿವರಣೆಯಲ್ಲಿ‌ ಸಹಕರಿಸಿದ್ದರು.

Exit mobile version