SportsKannada | ಸ್ಪೋರ್ಟ್ಸ್ ಕನ್ನಡ

ಬೆಳಕಿನೆಡೆಗೆ “ಬಂಟ್ಸ್ ಬಿಗ್ ಬ್ಯಾಷ್ ಲೀಗ್-2020”

 

ಪ್ರತಿಕ್ಷಣವೂ ಬರುವ ಸಣ್ಣ ಸಣ್ಣ ಸಂತೋಷಗಳನ್ನು ಅ ನುಭವಿಸುತ್ತಾ ತಮ್ಮ ಪುಟ್ಟ ಕಂಗಳಲ್ಲಿ ಕನಸನ್ನು ಕಾಣುತ್ತಾ ಇರುವ,ಅಪ್ಪ ಅಮ್ಮನ ಕಣ್ಣಿಂದ ಕಣ್ಣು ತೆರೆಯುವ ಮುನ್ನವೇ ಅನಾಥರಾಗುವ ಅದೆಷ್ಟೋ ಮುಗ್ಧ ಮನಸ್ಸುಗಳಿಗೆ ಆಸರೆಯಾಗಬೇಕು ಅನ್ನುವ ಒಂದು ಸುಂದರ ಪರಿಕಲ್ಪನೆಯ ಜೊತೆಗೆ ಪ್ರಾಮಾಣಿಕವಾಗಿ ಬದುಕಿ,ನಮ್ಮ ಚಿಂತೆಗಳನ್ನು ಬಿಟ್ಟು ಇನ್ನೊಬ್ಬರ ಧ್ವನಿಗೆ ಧ್ವನಿಯಾಗಬೇಕೆಂಬ ಮಾನವೀಯ ನೆಲೆಯಲ್ಲಿ ಕುಂದಾಪುರ ಮೂಲದ ಉದ್ಯಮಿ ಸುಚೇತ್ ಶೆಟ್ಟಿ ಸಾರಥ್ಯದಲ್ಲಿ

 

ಮಾರ್ಚ್ 21,22 ರಂದು ಬೆಂಗಳೂರಿನ ಜೆ.ಪಿ.ಪಾರ್ಕ್ ಮತ್ತಿಕೆರೆ ಅಂಗಣದಲ್ಲಿ 2 ದಿನಗಳ ಹೊನಲು ಬೆಳಕಿನ ಬಂಟ ಸಮುದಾಯದ ಪ್ರತಿಷ್ಟಿತ “ಬಂಟ್ಸ್ ಬ್ಯಾಷ್ ಲೀಗ್-2020” ಪಂದ್ಯಾವಳಿ ನಡೆಯಲಿದೆ.

ಕಳೆದ ವಾರ ಆಟಗಾರರ ಹರಾಜು ಪ್ರಕ್ರಿಯೆ ಹಾಗೂ ಜೆರ್ಸಿ ವಿತರಣೆ ಕಾರ್ಯಕ್ರಮ ನಡೆದಿದ್ದು‌ ಕುಂದಾಪುರದ ಭೋಜರಾಜ್ ಶೆಟ್ಟಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆಗಿದ್ದಾರೆ. ಈ ಸಂದರ್ಭ ಉದ್ಯಮಿ ಅನಂತ್ ರಾಮ್ ಶೆಟ್ಟಿ, ರಾಮಕೃಷ್ಣ ಶೆಟ್ಟಿ,ರಾಧಾಕೃಷ್ಣ ಶೆಟ್ಟಿ, ಸಮಾಜ ಸೇವಕಿ ಸೌಮ್ಯ ಪ್ರಿಯಾ ಹೆಗ್ಡೆ,ಅಮೃತಾ ಶೆಟ್ಟಿ ಹಾಗೂ ಆಕ್ಷನ್ ಪ್ರಕ್ರಿಯೆ ನಡೆಸಿದ ಹಿರಿಯ ಪ್ರಸಿದ್ಧ ವೀಕ್ಷಕ ವಿವರಣೆಕಾರ ಶಿವನಾರಾಯಣ ಐತಾಳ್ ಹಾಗೂ ನಿಕೇಶ್ ಶೆಟ್ಟಿ ಉಪಸ್ಥಿತರಿದ್ದರು. ಕ್ರಿಕ್ ಸೇ ನೇರ ಪ್ರಸಾರವನ್ನು ಬಿತ್ತರಿಸಿತ್ತು.

ಐ.ಪಿ.ಎಲ್ ಮಾದರಿಯಲ್ಲಿ ಸಾಗುವ ಈ ಪಂದ್ಯಾವಳಿಯಲ್ಲಿ ಭಾಗವಹಿಸುವ
8 ಫ್ರಾಂಚೈಸಿಗಳ ವಿವರ ಈ ಕೆಳಗಿನಂತಿದೆ.
1.ಈಶಾನಿ ಸಹಾರಾ ಕ್ರಿಕೆಟರ್ಸ್
2.ಶೆಟ್ಟಿ ಎಂಪೈರ್
3.ಎಸ್.ಡಿ.ಸಿ.ಸಿ
4.ಉಡುಪಿ ಹಾಸ್ಪಿಟಾಲಿಟಿ ಸರ್ವಿಸಸ್
5.ಗೂಗ್ಲಿ ಪೊಳಲಿ ಟೈಗರ್ಸ್
6.ಬಂಟ್ಸ್ ಯುನೈಟೆಡ್‌ ಮಂಗಳೂರು
7.ಯುನೈಟೆಡ್ ವಾರಿಯರ್ಸ್
8.ಅಭಯ್ ಕ್ರಿಕೆಟರ್ಸ್.

ಚಿನ್ನದ ಟ್ರೋಫಿ ಹಾಗೂ ಗರಿಷ್ಠ ನಗದು ಬಹುಮಾನ

ಬಂಟ ಸಮುದಾಯದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಚಾಂಪಿಯನ್ಸ್ ತಂಡಕ್ಕೆ
ಮಿರುಗುವ ಚಿನ್ನದ ಟ್ರೋಫಿಯನ್ನು ನೀಡಲಾಗುತ್ತಿದ್ದು ಜೊತೆಗೆ 1.5 ಲಕ್ಷ ನಗದು,ರನ್ನರ್ಸ್ ತಂಡ 1 ಲಕ್ಷ ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.

ಜೀವನಕ್ಕೆ ಯಶಸ್ಸು ಸಿಗಬೇಕಾದರೆ ಪರಿಶ್ರಮ ಪಡಬೇಕು,ಯಶಸ್ಸು ಅಂದರೆ ಬರಿ ಹಣ ಅಧಿಕಾರ ಅಲ್ಲ.ನಮ್ಮನ್ನು ಅರಸಿ ಬರುವ ಅದೆಷ್ಟೋ ಮುಗ್ಧ ಮನಸ್ಸುಗಳಿಗೆ ಆಸರೆಯಾಗಿ ಬದುಕಬೇಕೆನ್ನುವ ನಿಲುವಿನಲ್ಲಿ ಸಾಗುತ್ತಿರುವ ಪ್ರಪಂಚದಲ್ಲಿ ಎಲ್ಲರಿಗೂ ಬದುಕುವ,ಪ್ರೀತಿಸುವ ಹಕ್ಕಿದೆ.ಅವರನ್ನೂ ಅವಕಾಶ ವಂಚಿತರನ್ನಾಗಿಸದೆ,ಅವರಿಗೂ ಕೂಡ ಕನಸುಗಳಿದೆ,ಆಸೆಗಳಿದೆ ಅನ್ನುವತ್ತ ನಮ್ಮ ಯೋಚನೆಯನ್ನು ಹರಿಸಬೇಕು ಅನ್ನುವ ಧೃಡ ನಿಲುವಿನೊಂದಿಗೆ ಆಯೋಜನೆಗೊಂಡಿರುವ ಈ ಪಂದ್ಯಾವಳಿಯಲ್ಲಿ ಬರುವ ಹಣದಿಂದ ಕನಿಷ್ಟ 5 ಮಕ್ಕಳ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸುವ ಯೋಚನೆಯನ್ನು ಆಯೋಜಕರು ಹೊಂದಿರುವುದು ಅತೀವ ಸಂತೋಷದ ವಿಚಾರ.

Exit mobile version