SportsKannada | ಸ್ಪೋರ್ಟ್ಸ್ ಕನ್ನಡ

ತನ್ನ ಹುಟ್ಟಿದ ಹೆಣ್ಣು ಮಗುವಿಗೆ ಅಭಿಮಾನದಿಂದ ಭಾರತದ ಕ್ರೀಡಾಂಗಣದ ಹೆಸರಿಟ್ಟ ವೆಸ್ಟ್ ಇಂಡೀಸ್ ಕ್ರಿಕೆಟರ್ ಬ್ರಾಥ್ ವೈಟ್

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ 2016ರ T20 ವಿಶ್ವಕಪ್ ಟೂರ್ನಿಯಲ್ಲಿ ಸರಣಿಯುದ್ದಕ್ಕೂ ದಿಟ್ಟ ಆಟದ ಪ್ರದರ್ಶನ ನೀಡಿ ಭಾರತದ ನೆಲದಲ್ಲಿ ಕ್ರಿಕೆಟ್ ಕಾಶಿ ಎಂದೇ ಬಿಂಬಿತವಾಗಿರುವ ಈಡನ್ ಗಾರ್ಡನ್ ಮೈದಾನದಲ್ಲಿ ನೆಡೆದ ಫೈನಲ್ ಪಂದ್ಯವನ್ನು ಗೆದ್ದು ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿತ್ತು.
ಫೈನಲ್ ಪಂದ್ಯ ಸಾಕಷ್ಟು ಕುತೂಹಲ ಘಟ್ಟ ತಲುಪಿತ್ತು ಯಾರು ಊಹಿಸದ ರೀತಿಯಲ್ಲಿ ಒಂದೇ ಓವರ್‌ನಲ್ಲಿ ಸಂಪೂರ್ಣ ಆಟದ ಗತಿಯೇ ಬದಲಾಗಿ ಹೋಯಿತು, ಅದಕ್ಕೆ ಕಾರಣ ವಿಂಡೀಸ್ ಕ್ರಿಕೆಟಿಗ ಕಾರ್ಲೋಸ್ ಬ್ರಾಥ್ ವೈಟ್ ಎಂದರೆ ತಪ್ಪಾಗಲಾರದು.
ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆದ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ T20ಯ ವಿಶ್ವ ಚಾಂಪಿಯನ್ ಆಯಿತು. ವೆಸ್ಟ್ ಇಂಡೀಸ್
ಬೆನ್ ಸ್ಟ್ರೋಕ್ ಎಸೆದ ಅಂತಿಮ ಓವರ್‌ನಲ್ಲಿ ಬ್ರಾಥ್‌ವೈಟ್ ಸತತ ನಾಲ್ಕು ಸಿಕ್ಸರ್‌ಗಳನ್ನು ಈಡನ್ ಗಾರ್ಡನ್ ಮೈದಾನದಿಂದಾಚೆ ಬಾರಿಸಿ ತಮ್ಮ ತಂಡಕ್ಕೆ T20 ವಿಶ್ವಕಪ್ ಅನ್ನು ತಂದುಕೊಡಲು ಯಶಸ್ವಿಯಾದರು.
ಅಲ್ಲಿಯವರೆಗೂ ಬ್ರಾತ್‌ವೈಟ್ ಎಂದರೆ ಯಾರು ಎಂದು ತಿಳಿಯದ ಪ್ರಪಂಚಕ್ಕೆ ಅದರಲ್ಲೂ ಕ್ರಿಕೆಟ್ ಪ್ರೇಮಿಗಳಿಗೆ ಒಮ್ಮೆಲೆ ಆ ಪಂದ್ಯದಲ್ಲಿ ಬ್ರಾಥ್‌ವೈಟ್ ಸ್ಟಾರ್ ಕ್ರಿಕೆಟಿಗನಾಗಿ ಹೊರಹೊಮ್ಮಿದರು. ಕೇವಲ ಹತ್ತು ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ 34 ರನ್ ಗಳಿಸುವ ಮೂಲಕ ತನ್ನ ಹೆಸರು ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿ ಕಾರ್ಲೋಸ್ ಬ್ರಾಥ್‌ವೈಟ್ ಎಂದು ನೆನಪಿಡುವಂತೆ ಮಾಡಿದರು.
ಅಂದಿನಿಂದ ಭಾರತದ ನೆಲದಲ್ಲಿ ವಿಶ್ವಕಪ್ ಗೆಲ್ಲಲು ಕಾರಣವಾದ ಮತ್ತು ಜಗತ್ತಿಗೆ ತನ್ನ ಹೆಸರು ಪರಿಚಯ ಮಾಡಿಕೊಟ್ಟ ಕ್ರೀಡಾಂಗಣದ ಅಂದರೆ T20 ಫೈನಲ್ ಅಡಿ ಕೊನೆಯ ಓವರ್ ನಲ್ಲಿ  34 ರನ್ ಹೊಡೆದ  ಕಲ್ಕತ್ತಾದ ಈಡನ್ ಗಾರ್ಡನ್ ಮೈದಾನದ ಬಗ್ಗೆ ವಿಶೇಷ ಒಲವು ಬೆಳೆಸಿಕೊಂಡರು ಬ್ರಾಥ್ ವೈಟ್.
ಇದೇ ಕಾರಣದಿಂದಲೇ ಬ್ರಾಥ್‌ವೈಟ್ ಅವರು ವಿಶೇಷವಾಗಿ ಈಡನ್ ಗಾರ್ಡನ್ಸ್ ಕ್ರೀಡಾಂಗಣವನ್ನು  ಇಷ್ಟಪಡುತ್ತೇನೆ ಎಂದು ಅವರೆ ಹಲವಾರು ಸಂದರ್ಭಗಳಲ್ಲಿ  ಹೇಳಿಕೊಂಡಿದ್ದರು.
ಇತ್ತೀಚೆಗಷ್ಟೇ ಈಡನ್ ಗಾರ್ಡನ್‍ ಮೇಲಿನ ಅಭಿಮಾನದಿಂದ ಮತ್ತು ತನ್ನ ಜೀವಿತಾವಧಿಯ ಕೊನೆಯವರೆಗೂ ನೆನಪಿಡುವ ಸಲುವಾಗಿ ತನ್ನ ಹುಟ್ಟಿದ ಹೆಣ್ಣು ಮಗುವಿಗೆ ‘ಈಡನ್’ ಎಂದು ನಾಮಕರಣ ಮಾಡಿದ್ದಾರೆ. ಫೆಬ್ರವರಿ 6 ರಂದು, ಕಾರ್ಲೋಸ್ ಬ್ರಾಥ್ವೈಟ್ ಪತ್ನಿ ಒಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಇದೇ ಖುಷಿಯಲ್ಲಿ ತನ್ನ ಮಗುವಿಗೆ ಈಡನ್ ಎಂದು ಹೆಸರಿಟ್ಟಿದ್ದೇನೆ ಎಂದು ಬ್ರಾಥ್‌ವೈಟ್ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡಿದ್ದಾರೆ
ನನ್ನ ಮಗುವಿನ ಹೆಸರನ್ನು ನೆನಪಿಟ್ಟುಕೊಳ್ಳಿ.. ಈಡನ್ ರೋಸ್ ಬ್ರಾಥ್‌ವೈಟ್. ಹುಟ್ಟಿದ ದಿನಾಂಕ 2/6/22 . ನಾನು ನಿನ್ನನ್ನು ಯಾವಾಗಲೂ ಅಪ್ಪನಂತೆ ಪ್ರೀತಿಸುತ್ತೇನೆ ಮಗಳೇ. ಧನ್ಯವಾದಗಳು ಜೆಸ್ಸಿ ಪರ್ಪಲ್. ನೀನು ನನ್ನ ಜೀವನಕ್ಕೆ ಬಂದಿದ್ದು ನನ್ನ ಅದೃಷ್ಟ. ಖಂಡಿತವಾಗಿಯೂ ಈಡನ್ ರೋಸ್ ಬ್ರಾಥ್‌ವೈಟ್‌ಗೆ ನೀನು ಒಳ್ಳೆಯ ತಾಯಿಯಾಗಿರುತ್ತೀಯ ಎಂದು ಭಾವಿಸಿದ್ದೇನೆ. ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
   ಇದನ್ನೇ ಹೇಳೊದು ನಿಜವಾದ ಆಭಿಮಾನವೆಂದು
Exit mobile version