SportsKannada | ಸ್ಪೋರ್ಟ್ಸ್ ಕನ್ನಡ

ಬೆಂಗಳೂರು-ಜಿ.ಗುರು ಪ್ರಸಾದ್ ಸಾರಥ್ಯದಲ್ಲಿ ದಾಸರಹಳ್ಳಿಯಲ್ಲಿ ಕ್ರಿಕೆಟ್ ಹಬ್ಬ-ಬಿಗ್ ಬ್ಯಾಷ್ ದಾಸರಹಳ್ಳಿ

ದಾಸರಹಳ್ಳಿ ಪರಿಸರದ ಕ್ರಿಕೆಟ್ ಉತ್ಸಾಹಿ,ಬಿ.ಜೆ.ಪಿ ಮುಖಂಡರಾದ ಜಿ‌.ಗುರು ಪ್ರಸಾದ್ ಸಾರಥ್ಯದಲ್ಲಿ,2019 ರಲ್ಲಿ  ಗುರು ಕ್ರಿಕೆಟರ್ಸ್ ಸ್ಥಾಪನೆಯಾಗಿದ್ದು,ಪ್ರಸ್ತುತ ದಿನಗಳಲ್ಲಿ ಬೆಂಗಳೂರು ಪರಿಸರದ ಪ್ರಬಲ ತಂಡವಾಗಿ ಗುರುತಿಸಿಕೊಂಡಿದೆ.
ಗ್ರಾಮಾಂತರ ಪ್ರತಿಭೆಗಳನ್ನು ರಾಜ್ಯ,ರಾಷ್ಟ್ರ ಮಟ್ಟಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಜಿ.ಗುರು ಪ್ರಸಾದ್ ರವರ
ಸಾರಥ್ಯದ ಗುರು ಕ್ರಿಕೆಟರ್ಸ್, ಸ್ಯಾನ್ ಸಿಟಿ ಮತ್ತು ರಾಜ್ಯ ಬಿ.ಜೆ.ಪಿ ಕಾರ್ಯಕಾರಿಣಿ ಸದಸ್ಯರು ಮತ್ತು ದಾಸರ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕರಾದ ಶ್ರೀ.ಎಸ್.ಮುನಿರಾಜು ಇವರ ಪ್ರಾಯೋಜಕತ್ವದಲ್ಲಿ,
 ಮೊದಲ ಆವೃತ್ತಿಯ ಅದ್ಧೂರಿಯ ಹೊನಲು ಬೆಳಕಿನ “ಬಿಗ್ ಬ್ಯಾಷ್ ದಾಸರಹಳ್ಳಿ” ಪಂದ್ಯಾಕೂಟವನ್ನು ಆಯೋಜಿಸಲಾಗಿದೆ.
ಫೆಬ್ರವರಿ 26,27,28 ಮತ್ತು ಮಾರ್ಚ್ 1 ರಂದು,ಬಗಲಗುಂಟೆ ವಾರ್ಡ್ ನಂ-14,ಎಮ್.ಇ.ಐ ಲೇಯೌಟ್ ಮೈದಾನದಲ್ಲಿ ಈ ಪಂದ್ಯಾವಳಿ ನಡೆಯಲಿದ್ದು,ಪ್ರಥಮ ಬಹುಮಾನ 3,99,999 ಮತ್ತು ಬೆಳ್ಳಿ ಟ್ರೋಫಿ,ದ್ವಿತೀಯ ಬಹುಮಾನ 2,22,222 ಮತ್ತು ಬೆಳ್ಳಿ ಟ್ರೋಫಿ ತೃತೀಯ 77,777 ಮತ್ತು ಬೆಳ್ಳಿ ಟ್ರೋಫಿ ಮತ್ತು ಚತುರ್ಥ 55,555 ಮತ್ತು ಬೆಳ್ಳಿ ಟ್ರೋಫಿ ನೀಡಲಾಗುತ್ತಿದ್ದು,ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರು ವಿಶೇಷ ಉಡುಗೊರೆಗಳನ್ನು ಪಡೆಯಲಿದ್ದಾರೆ.
ಫೆಬ್ರವರಿ 25 ಶುಕ್ರವಾರ ಸಂಜೆ 6 ಗಂಟೆಗೆ ವರ್ಣರಂಜಿತ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು,ಕೇಂದ್ರ
 ಸರಕಾರದ ಮಾಜಿ ಸಚಿವರು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು,ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರು ಶ್ರೀ‌.ಡಿ.ವಿ.ಸದಾನಂದ ಗೌಡ ಮತ್ತು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕರಾದ ಶ್ರೀ.ಎಸ್.ಮುನಿರಾಜು ಇವರು  “ಬಿಗ್ ಬ್ಯಾಶ್ ದಾಸರಹಳ್ಳಿ ಸೀಸನ್-೧” ಉದ್ಘಾಟನೆ ನೆರವೇರಿಸಲಿದ್ದಾರೆ.ಈ ಸಂದರ್ಭ ತಂಡದ ಮಾಲೀಕರ ಭೇಟಿ,ಆಟಗಾರರ ಪರಿಚಯ,ಟ್ರೋಫಿ ಅನಾವರಣ ಆಟಗಾರರಿಗೆ ಜೆರ್ಸಿ ವಿತರಣೆ ನಡೆಯಲಿದೆ.
ಉದ್ಘಾಟನೆಯ ಬಳಿಕ ಟೂರ್ನಮೆಂಟ್ ನ ಆಯೋಜಕರ ವಿರುದ್ಧವಾಗಿ ಪೊಲೀಸ್ ತಂಡ ಮತ್ತು A ಗ್ರೂಪ್ ನ  ಮಾಲೀಕರ ತಂಡದ ವಿರುದ್ಧವಾಗಿ B ಗ್ರೂಪ್ ನ ಮಾಲೀಕರ ತಂಡದ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ.
ಭಾಗವಹಿಸುವ 12 ತಂಡಗಳ ವಿವರ ಈ ಕೆಳಗಿನಂತಿದೆ
1)ಸುಧೀರ್ ರೆಡ್ಡಿ ಮಾಲೀಕತ್ವದ ಟೆಂಪಲ್ ಬುಲ್ಸ್
2)ಎನ್‌‌.ನರಸಿಂಹ ಮೂರ್ತಿ ಮಾಲೀಕತ್ವದ ಸಿಂಹ ಇಲೆವೆನ್
3)ಸತೀಶ್ ಮಿತ್ರವೃಂದ ಮಾಲೀಕತ್ವದ ಸತೀಶ್ ಇಲೆವೆನ್
4)ಶಶಿಕಾಂತ್ ರಾವ್ ಮಾಲೀಕತ್ವದ ಸ್ನೇಹಜೀವಿ
5)ಮಣಿ ಶಶಾಂಕ್ ಮಾಲೀಕತ್ವದ ಆರ್.ಸಿ‌.ಬಿ ಇಲೆವೆನ್
6)ಮನೋಜ್ ಮಾಲೀಕತ್ವದ ರಂಗ ಇಲೆವೆನ್
7)ಪಿ.ಎನ್‌.ಕೃಷ್ಣಮೂರ್ತಿಯವರ ಮಾಲೀಕತ್ವದ ಪಿ‌.ಎನ್‌.ಕೆ ಟೀಮ್
8)ಮಂಜುನಾಥ್.ಟಿ‌.ಮಾಲೀಕತ್ವದ ಕ್ರಿಕೆಟ್ ನಕ್ಷತ್ರ
9)ಮುರಳೀಧರ್.ಹೆಚ್.ಎಮ್ ಮಾಲೀಕತ್ವದ  ಮಹಾಶ್ರೀ ಇಲೆವೆನ್
10)ಪಿ.ಎನ್.ದಿನೇಶ್ ಮಾಲೀಕತ್ವದ ದಿನೇಶ್ ಸಾಂಘ್ವಿ ಕ್ರಿಕೆಟ್
11)ಮಂಜುನಾಥ್.ಎಸ್ ಮಾಲೀಕತ್ವದ ಚೇತು ಇಲೆವೆನ್
12)ಅರುಣ್ ಮಾಲೀಕತ್ವದ ವಿಷು ಎಂಟರ್ ಪ್ರೈಸಸ್
ಪಂದ್ಯಾವಳಿಯ ನೇರ ಪ್ರಸಾರ M.Sports ಯೂಟ್ಯೂಬ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.
Exit mobile version