SportsKannada | ಸ್ಪೋರ್ಟ್ಸ್ ಕನ್ನಡ

ಅಬ್ಬಾ ಏನ್​​ ಬ್ಯಾಟಿಂಗ್​ ಆಸೀಸ್​ ಪ್ಲೇಯರ್​​ದ್ದು: ವಿಧ್ವಂಸಕ ಇನ್ನಿಂಗ್ಸ್‌..!!

 RECORD ALERT! ಜಸ್ಟ್ 40 ಎಸೆತಕ್ಕೆ ಸೆಂಚುರಿ ಬಾರಿಸಿದ ಮ್ಯಾಕ್ಸಿ, ಡಚ್ ದಾಳಿ ಧ್ವಂಸ!
ಬುಧವಾರ ದೆಹಲಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಬಿರುಗಾಳಿ ಬೀಸಿತು. 40 ಎಸೆತಗಳಲ್ಲಿ ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕವನ್ನು ಮ್ಯಾಕ್ಸ್‌ವೆಲ್ ಗಳಿಸಿದರು. ಡಚ್ಚರ ದಾಳಿಯನ್ನು ಚಚ್ಚಿದ ಮ್ಯಾಕ್ಸ್‌ವೆಲ್ ವಿಶ್ವಕಪ್ ನಲ್ಲಿ ವೇಗದ ಶತಕ ಸಿಡಿಸಿ ಮಿಂಚಿದ್ದಾರೆ. ಮ್ಯಾಕ್ಸ್‌ವೆಲ್ ಸ್ಫೋಟಕ ಬ್ಯಾಟಿಂಗ್ ಗೆ ಡಚ್ಚರು ಸುಸ್ತಾಗಿ ಹೋಗಿದ್ದರು.
ನೆದರ್ಲೆಂಡ್ಸ್ ವಿರುದ್ಧ ದಾಖಲೆಯ ಶತಕ ಸಿಡಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ವಿಶ್ವಕಪ್​ನಲ್ಲಿ ರೌದ್ರಾವತಾರ ಪ್ರದರ್ಶಿಸಿದ್ದಾರೆ. ಅವರ ಬ್ಯಾಟಿಂಗ್​ ಕಂಡು ಎದುರಾಳಿ ತಂಡಗಳು ಕಂಗಾಲಾಗಿದ್ದಾರೆ. ಅಬ್ಬಾ ಏನ್​​ ಬ್ಯಾಟಿಂಗ್​ ಆಸೀಸ್​ ಪ್ಲೇಯರ್​​ ದ್ದು ಎಂದು ಅಭಿಮಾನಿಗಳು ಹುಬ್ಬು ಹಾರಿಸುತ್ತಿದ್ದಾರೆ.ಗ್ಲೇನ್ ​ಮ್ಯಾಕ್ಸ್​​ವೆಲ್ ​​ಬಾರಿಸುತ್ತಿದ್ದ ರಿವರ್ಸ್​ ಸ್ವೀಪ್​​, ಹುಕ್​​, ಪುಲ್​ಶಾಟ್​ಗಳು ಬೇರೆ ತಂಡಗಳಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.ಅವರ ಗಮನಾರ್ಹ ಆಕ್ರಮಣಶೀಲತೆ ಮತ್ತು ದಿಟ್ಟವಾದ ಸ್ಟ್ರೋಕ್ ಆಟವು ಆಸ್ಟ್ರೇಲಿಯಾದ ಸ್ಕೋರ್ ಅನ್ನು ಗಮನಾರ್ಹವಾಗಿ ಇರಿಸಿತು ಮತ್ತು ಅಸಾಧಾರಣ ಮೊತ್ತಕ್ಕೆ ವೇದಿಕೆಯನ್ನು ಸ್ಥಾಪಿಸಿತು.
ಪಂದ್ಯದ ಸೂಪರ್ ಸ್ಟಾರ್ ಗ್ಲೆನ್ ಮ್ಯಾಕ್ಸ್‌ವೆಲ್  ಅವರು ನಂಬಲಾಗದ ದಾಖಲೆ ಮಾಡಿದರು. ಅವರು ಕೇವಲ 40 ಎಸೆತಗಳಲ್ಲಿ 100 ರನ್ ಗಳಿಸಿದರು. ಇದೇ ಪಂದ್ಯಾವಳಿಯಲ್ಲಿ ಈ ಹಿಂದೆ 49 ಎಸೆತಗಳಲ್ಲಿ 100 ರನ್ ಗಳಿಸಿದ್ದ ಏಡೆನ್ ಮಾರ್ಕ್ರಾಮ್ ಅವರ ಹಿಂದಿನ ದಾಖಲೆಯನ್ನು ಮುರಿದರು. ಮ್ಯಾಕ್ಸ್‌ವೆಲ್ ಅವರ ಇನ್ನಿಂಗ್ಸ್ ಅದ್ಭುತವಾಗಿತ್ತು ಮತ್ತು ಕೇವಲ 44 ಎಸೆತಗಳಲ್ಲಿ 106 ರನ್‌ಗಳೊಂದಿಗೆ ಕೊನೆಗೊಂಡಿತು. ಅವರು 9 ಬೌಂಡರಿಗಳು ಮತ್ತು 8 ಬೃಹತ್ ಸಿಕ್ಸರ್‌ಗಳನ್ನು ಹೊಡೆದರು.
ಒಡಿಐ ವಿಶ್ವಕಪ್‌ನಲ್ಲಿ ನೂತನ ವಿಶ್ವ ದಾಖಲೆ ನಿರ್ಮಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ಏಕದಿನ ವಿಶ್ವಕಪ್‌ ಇತಿಹಾಸದಲ್ಲಿ  ಹಲವರ ದಾಖಲೆ ಉಡೀಸ್ ಮಾಡಿದ್ದಾರೆ.
 ಸುರೇಶ್ ಭಟ್, ಮೂಲ್ಕಿ
ಟೀಂ ಸ್ಪೋರ್ಟ್ಸ್ ಕನ್ನಡ
Exit mobile version