SportsKannada | ಸ್ಪೋರ್ಟ್ಸ್ ಕನ್ನಡ

ಕೋಟ-ಅಪ್ಪು ಇಲೆವೆನ್ ಕೋಟ ಮಡಿಲಿಗೆ ರತ್ನ ಟ್ರೋಫಿ-2022

ಶ್ರೀಯುತ ಪ್ರವೀಣ್ ಕುಮಾರ್ ಶೆಟ್ಟಿ ಅಧ್ಯಕ್ಷರು ನಿತ್ಯ ನಿರಂತರ ಟ್ರಸ್ಟ್ ಬೆಂಗಳೂರು ಇವ ಪ್ರಾಯೋಜಕತ್ವದಲ್ಲಿ,ಕೋಟ ಗಿಳಿಯಾರು ಪರಿಸರದ ಚತುರ ಸಂಘಟಕ ಅಮರ್ ಶೆಟ್ಟಿ ಇವರ ಸಾರಥ್ಯದಲ್ಲಿ ಸತತ 5 ನೇ ಬಾರಿಗೆ ಆಯೋಜಿಸಲಾದ 30 ಗಜಗಳ ಹಗಲಿನ ಕ್ರಿಕೆಟ್ ಪಂದ್ಯಾಕೂಟ “ರತ್ನ ಟ್ರೋಫಿ-2022″ಯನ್ನು ಕೀರ್ತೀಶ್ ಪೂಜಾರಿ ಮಾಲೀಕತ್ವದ ಅಪ್ಪು ಇಲೆವೆನ್ ತಂಡ ಗೆದ್ದುಕೊಂಡಿದೆ.
 
 ಗಿಳಿಯಾರಿನ‌ ಹಕ್ಕಲ್ಲು ಮೈದಾನದಲ್ಲಿ  ಆಯೋಜಿಸಲಾದ ಪಂದ್ಯಾಟದ ಫೈನಲ್ ನಲ್ಲಿ ಅಪ್ಪು ಇಲೆವೆನ್ ಕೋಟ,ಬಿ.ಕೆ ಫ್ರೆಂಡ್ಸ್ ಗಿಳಿಯಾರು ತಂಡವನ್ನು ಸೋಲಿಸಿ ಪ್ರಥಮ ಪ್ರಶಸ್ತಿ 25,001 ರೂ ಹಾಗೂ  ದ್ವಿತೀಯ ಸ್ಥಾನಿ ಬಿ.ಕೆ.ಫ್ರೆಂಡ್ಸ್ ಗಿಳಿಯಾರು 12,501 ರೂ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರು.
 
ಟೂರ್ನಮೆಂಟ್ ನ‌ ಬೆಸ್ಟ್ ಬ್ಯಾಟ್ಸ್‌ಮನ್‌ ಅಭಿಷೇಕ್ ಕೋಟ,ಬೆಸ್ಟ್ ಬೌಲರ್ ಲೋಕೇಶ್,ಬೆಸ್ಟ್ ಕೀಪರ್ ಸುಬ್ರಹ್ಮಣ್ಯ ಕೊಮೆ ಈ ಮೂವರು‌ ಫಾಸ್ಟ್ ಟ್ರ್ಯಾಕ್ ವಾಚ್ ಗಳನ್ನು ಮತ್ತು,ಸರಣಿಶ್ರೇಷ್ಟ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಪ್ರದೀಪ್ ಶೆಟ್ಟಿ ಗ್ರಾಮೀಣ ಭಾಗದಲ್ಲಿ ಇದೆ ಮೊದಲ ಬಾರಿ ನೀಡಲಾದ ಎಲ್.ಇ‌.ಡಿ ಟಿವಿ ಉಡುಗೊರೆ ರೂಪದಲ್ಲಿ ಪಡೆದುಕೊಂಡರು.
 
ಸಮಾರೋಪ ಸಮಾರಂಭದಲ್ಲಿ‌ ಅಭಿಮತ ಗಿಳಿಯಾರು ತಂಡದ ಪರವಾಗಿ ಆಡಿದ ಆಟಗಾರರನ್ನು ಸನ್ಮಾನಿಸಲಾಯಿತು.
ಪ್ರತಿ ಬಾರಿಯಂತೆ ಪಂದ್ಯಾಟದಲ್ಲಿ ಉಳಿದ ಹಣವನ್ನು ಟೂರ್ನಮೆಂಟ್ ನ  ಸಂಘಟಕರಾದ ಅಮರ್ ಶೆಟ್ಟಿ ಇವರು ತಲ್ಲೂರಿನ ನಾರಾಯಣ ವಿಶೇಷ ಮಕ್ಕಳ ಶಾಲೆಗೆ ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ.
Exit mobile version