SportsKannada | ಸ್ಪೋರ್ಟ್ಸ್ ಕನ್ನಡ

ಇ ಎಸ್ ಪಿ ಎನ್ ಸಂಸ್ಥೆ ಹೊಗಳಿದ ಕ್ರಿಕೆಟ್ ಪಟುವಿಗೆ ಬೇಕಿದೆ ಅವಕಾಶ

ಗ್ರಾಮೀಣ ಮಟ್ಟದಲ್ಲಿ ಕ್ರಿಕೆಟ್ ಎಂದರೆ ಹುಡುಗರಿಗೆ ಮೀಸಲು ಎನ್ನುವವರೆ ಹೆಚ್ಚು. ಆದರೆ ಇಲ್ಲೊಂದು ಗ್ರಾಮೀಣ ಪ್ರತಿಭೆಯ ಕವರ್‌ ಡ್ರೈವ್‌ ಬ್ಯಾಟಿಂಗ್ ನೋಡಿ ಪ್ರತಿಷ್ಠಿತ ಇ ಎಸ್ ಪಿ ಎನ್ ಕ್ರೀಡಾ ವೈಬ್ ಸೈಟ್ ಫಿದಾ ಆಗಿದ್ದು ಇದೀಗ ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈಕೆಯನ್ನು ಸಚಿನ್, ಧೋನಿ ಮತ್ತು ಕೊಯ್ಲಿ ಗೆ ಹೋಲಿಸಿದ್ದು ಅದು ತನ್ನ ಟ್ವಿಟ್ಟರ್ ಖಾತೆಯಲ್ಲಿ ಕಾಲನ್ನು ಎಡ ಬದಿಗೆ ಚಾಚಿ ಚೆಂಡನ್ನು ಕವರ್ಸ್‌ ಮೇಲೆ ಅತ್ಯದ್ಭುತವಾಗಿ ಶಾಟ್‌ ಹೊಡೆಯಲಾಯಿತು. ಇದಕ್ಕೂ ಮುನ್ನ ನಾವು ಈ ರೀತಿ ಹೊಡೆಯುವುದನ್ನು ಎಲ್ಲಿ ನೋಡಿದ್ದೇವೆ ಹೇಳಿ ಎಂದು ಶೀರ್ಷಿಕೆಯನ್ನು ನೀಡಿದೆ.
ಜ್ಯೋತಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೆರ್ವಾಶೆ ಎಂಬ ಪುಟ್ಟ ಹಳ್ಳಿಯವರು ರತ್ನಪ್ಪ ಪೂಜಾರಿ, ವಿಮಲ ಪೂಜಾರಿಯ ಇವರ ಪುತ್ರಿಯಾಗಿರುವ ಜ್ಯೋತಿ ಹತ್ತನೇ ತರಗತಿಯಲ್ಲಿ ಚಿನ್ನದ ಪದಕ ಪಡೆದು ಊರಿಗೆ ಕೀರ್ತಿ ತಂದಿದ್ದರು. ಬೋರ್ಡ್ ಹೈಸ್ಕೂಲ್ ಕಾರ್ಕಳದಲ್ಲಿ ಪಿಯುಸಿಯನ್ನು ಮುಗಿಸಿ ತದ ನಂತರ ಎಮ್ ಪಿ ಎಮ್ ಕಾಲೇಜು ಕಾರ್ಕಳದಲ್ಲಿ ಪದವಿ ಮುಗಿಸಿದ್ದಾರೆ. ಈಕೆಗೆ ಬಾಲ್ಯದಿಂದಲೂ ಕ್ರಿಕೆಟಿಗ ಧೋನಿಯೆಂದರೆ ಇಷ್ಟ ಆದರೆ ಈಕೆ ಯಾವುದೇ ಇದುವರೆಗೂ ಕ್ಲಬ್ ನಲ್ಲೂ ಅಭ್ಯಾಸ ನಡೆಸಿಲ್ಲ. ಈಕೆಗೆ ಕ್ರಿಕೆಟ್ ಬಗ್ಗೆ ಆಸಕ್ತಿ ಎಷ್ಟಿದೆ ಎಂದರೆ   ಅದೇಷ್ಟೋ ಹಳೆಯ ಪಂದ್ಯಗಳನ್ನು ನೋಡಿ ಸಂಭ್ರಮ ಪಡುತ್ತಾರೆ. ಜೊತೆಗೆ ಮನೆಯವರೊಂದಿಗೆ ಕ್ರಿಕೆಟ್ ಅಡಿ ಆಡುವ ಹವ್ಯಾಸ ಕೂಡ ಬೆಳೆಸಿಕೊಂಡಿದ್ದಾರೆ.
ಈಕೆ ಶಾಲಾ ದಿನಗಳಲ್ಲೂ ಕೂಡ ಹುಡುಗರು ಆಡೋ ಮೈದಾನದಲ್ಲಿ ಚೆಂಡನ್ನು ಲೀಲಾಜಾಲವಾಗಿ ಬೌಂಡರಿ ಗೆರೆ ದಾಟಿಸುತ್ತಿದ್ದಳು ಆದರೆ ಸೂಕ್ತ ತರಬೇತಿ ಸೂಕ್ತ ಸೌಲಭ್ಯ ಸಿಗದೆ ಈ ಗ್ರಾಮೀಣ ಪ್ರತಿಭೆ ಇನ್ನೂ ಕೂಡ ತೆರೆ ಮರೆಯಲ್ಲೇ ಇದೆ. ಈ ಪ್ರತಿಭೆಗೆ ಸೂಕ್ತ ತರಬೇತಿ ಮತ್ತು ಅವಕಾಶ ಸಿಕ್ಕಿದ್ದಲ್ಲಿ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಒಳ್ಳೆಯ ಕ್ರೀಡಾಪಟು ಆಗುವುದರಲ್ಲಿ ಎರಡು ಮಾತಿಲ್ಲ.
– ಪ್ರೀತಮ್ ಹೆಬ್ಬಾರ್.
Exit mobile version