SportsKannada | ಸ್ಪೋರ್ಟ್ಸ್ ಕನ್ನಡ

4ನೇ ಟೆಸ್ಟ್: ವೃತ್ತಿ ಜೀವನದ 75ನೇ ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ 28 ನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ , ಹಲವು ದಾಖಲೆಗಳನ್ನು ದಾಖಲಿಸಿದ ರನ್ ಮೆಷಿನ್

ಅಹ್ಮದಾಬಾದ್ ನಲ್ಲಿ ನೆಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ  ಭಾರತದ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸುವ ಮೂಲಕ ಕ್ರಿಕೆಟ್ ಲೋಕದ ದಿಗ್ಗಜರ ಹಲವು ದಾಖಲೆಗಳನ್ನು ಮುರಿದು ತನ್ನ ಹೆಸರಿಗೆ ದಾಖಲಿಸಿಕೊಂಡಿದ್ದಾರೆ.
 ಸರಣಿಯ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ವಿರಾಟ್ ಕೊಹ್ಲಿ ಒಂದು ವರ್ಷ ಎರಡು ತಿಂಗಳ ಸುಧೀರ್ಘ ಅವಧಿಯ ನಂತರ 243 ಎಸೆತಗಳಲ್ಲಿ ಶತಕ ಸಿಡಿಸಿದರು.ಇದು ಕೊಯ್ಲಿಯ ಟೆಸ್ಟ್ ಪಂದ್ಯದಲ್ಲಿನ 28ನೇ ಶತಕವಾಗಿದೆ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ವಿರಾಟ್  ಕೊಯ್ಲಿ ತಮ್ಮ ಕ್ರಿಕೆಟ್ ವೃತ್ತಿ ಬದುಕಿನ 75ನೇ ಶತಕ ಸಿಡಿಸಿದಂತಾಗಿದೆ.
ಸರಿಸುಮಾರು ನಲವತ್ತಕ್ಕೂ ಹೆಚ್ಚು ಇನಿಂಗ್ಸ್ ಗಳಿಂದ ಶತಕ ಸಿಡಿಸಲಾಗದೆ ಪರದಾಡುತ್ತಿದ್ದ ಕೊಯ್ಲಿ ಈ ಟೆಸ್ಟ್ ನ ಮೂಲಕ  ಶತಕದ ಬರದಿಂದ ಹೊರ ಬಂದಂತಾಗಿದೆ.
  ವಿರಾಟ್ ಕೊಯ್ಲಿ ಆಸ್ಟ್ರೇಲಿಯಾ ವಿರುದ್ಧ  ಸಿಡಿಸಿದ 16ನೇ ಶತಕವಾಗಿದೆ. ಕೊಹ್ಲಿ ಈ ಶತಕದ ಮೂಲಕ ಹಲವು ದಾಖಲೆಗಳನ್ನು  ದಾಖಲಿಸಿದಂತಾಗಿದೆ, ಎದುರಾಳಿ ತಂಡವೊಂದರ ವಿರುದ್ಧ ಅತೀ ಹಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಇದೀಗ 3 ಮತ್ತು ನಾಲ್ಕನೇ ಸ್ಥಾನಕ್ಕೇರಿದ್ದಾರೆ.
ಈ ಹಿಂದೆ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇದೇ ಆಸ್ಟ್ರೇಲಿಯಾ ವಿರುದ್ಧ 20 ಶತಕಗಳನ್ನು ಸಿಡಿಸಿದ್ದರೆ, ಆಸಿಸ್ ಕ್ರಿಕೆಟ್ ದಂತಕಥೆ ಬ್ರಾಡ್ ಮನ್ ಇಂಗ್ಲೆಂಡ್ ವಿರುದ್ಧ 19 ಶತಕಗಳನ್ನು ಸಿಡಿಸಿ ಪಟ್ಟಿಯ 2ನೇ ಸ್ಥಾನದಲ್ಲಿದ್ದಾರೆ. ಇನ್ನೂ ಸಚಿನ್ ತೆಂಡೂಲ್ಕರ್ ಅವರು ಶ್ರೀಲಂಕಾ ವಿರುದ್ಧ 17 ಶತಕ ಸಿಡಿಸಿದ್ದು ಇದು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅಂತೆಯೇ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 16 ಶತಕಗಳನ್ನು ಸಿಡಿಸಿದ್ದು, ಶ್ರೀಲಂಕಾ ವಿರುದ್ಧವೂ ಕೊಹ್ಲಿ 16 ಶತಕ ಸಿಡಿಸಿರುವ ದಾಖಲೆ ಮಾಡುವುದರೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಇನ್ನೂ ಇಂದಿನ ಪಂದ್ಯದಲ್ಲಿ ಕೊಹ್ಲಿ ತಮ್ಮ ನಿಧಾನಗತಿಯ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದು, ಇಂದಿನ ಪಂದ್ಯದಲ್ಲಿ ಕೊಹ್ಲಿ 243 ಎಸೆತಗಳಲ್ಲಿ ಶತಕ ಸಿಡಿಸಿದರು. ಇದು ಕೊಹ್ಲಿ ವೃತ್ತಿ ಜೀವನದ 2ನೇ ನಿಧಾನಗತಿಯ ಶತಕವಾಗಿದೆ. ಇದಕ್ಕೂ ಮೊದಲು ಕೊಹ್ಲಿ 2012ರಲ್ಲಿ ಇಂಗ್ಲೆಂಡ್ ವಿರುದ್ಧ ನಾಗ್ಪುರದಲ್ಲಿ 289 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಕೊಹ್ಲಿ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ ನಿಧಾನಗತಿಯ ಶತಕವಾಗಿದೆ. ಅಂತೆಯೇ 2018ರಲ್ಲಿ ಪರ್ತ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ 214 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಕೊಹ್ಲಿಯ ಮೂರನೇ ನಿಧಾನಗತಿಯ ಶತಕವಾಗಿದೆ.
 ಅಂತೆಯೇ ಕೊಹ್ಲಿ ತಮ್ಮ 12ನೇ ಶತಕಕ್ಕಾಗಿ 11 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದರು. ಇದಾದ ಬಳಿಕ ಅತ್ಯಂತ ಸುದೀರ್ಘ ಇನ್ನಿಂಗ್ಸ್ ಗಳ ಅಂತರದಲ್ಲಿ ಕೊಹ್ಲಿ ಶತಕ ಸಿಡಿಸಿ ಮತ್ತೆ ತಮ್ಮ ಎಂದಿನ ಶೈಲಿಗೆ ಮರಳಿದ್ದಾರೆ. ಈ ಟೆಸ್ಟ್ ಪಂದ್ಯದಲ್ಲಿ ಕೊಯ್ಲಿ 364 ಎಸೆತಗಳಲ್ಲಿ 186 ರನ್
ಸಿಡಿಸಿ ಔಟ್ ಆಗಿದ್ದಾರೆ.
  ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿಗೆ ಆಸ್ಟ್ರೇಲಿಯಾ ಎದುರು ಬ್ಯಾಟಿಂಗ್ ಮಾಡುವುದೆಂದರೆ ಒಂದು ರೀತಿ ಅಚ್ಚುಮೆಚ್ಚು ಎನ್ನುವುದನ್ನು ಈಗಾಗಲೇ ಹಲವು ಬಾರಿ ಸಾಬೀತು ಮಾಡಿ ತೋರಿಸಿದ್ದಾರೆ. ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಎದುರು ಮೂರು ಮಾದರಿಯ ಕ್ರಿಕೆಟ್‌ನಲ್ಲಿ 89 ಪಂದ್ಯಗಳ 104 ಇನಿಂಗ್ಸ್‌ಗಳಿಂದ  50.84ರ ಬ್ಯಾಟಿಂಗ್ ಸರಾಸರಿಯಲ್ಲಿ 4,729 ರನ್ ಬಾರಿಸಿದ್ದಾರೆ. ಇದರಲ್ಲಿ 15 ಶತಕ ಹಾಗೂ 24 ಅರ್ಧಶತಕಗಳು ಸೇರಿವೆ.
ಇನ್ನೊಂದೆಡೆ ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಬ್ರಿಯನ್ ಲಾರಾ, ಆಸ್ಟ್ರೇಲಿಯಾ ಎದುರು 82 ಪಂದ್ಯಗಳ 108 ಇನಿಂಗ್ಸ್‌ಗಳನ್ನಾಡಿ 4,714 ರನ್‌ ಬಾರಿಸಿದ್ದರು. ಇದರಲ್ಲಿ 12 ಶತಕ ಹಾಗೂ 26 ಅರ್ಧಶತಕಗಳು ಸೇರಿವೆ. ಇದೀಗ ವಿರಾಟ್ ಕೊಹ್ಲಿ, ಲಾರಾ ಅವರನ್ನು ಹಿಂದಿಕ್ಕಿ ಆಸೀಸ್‌ ಎದುರು ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.
ಇನ್ನು ಆಸ್ಟ್ರೇಲಿಯಾ ಎದುರು ಗರಿಷ್ಠ ರನ್‌ ಬಾರಿಸಿದ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದೆ. ಸಚಿನ್ ತೆಂಡುಲ್ಕರ್, ಆಸ್ಟ್ರೇಲಿಯಾ ಎದುರು 110 ಪಂದ್ಯಗಳ 144 ಇನಿಂಗ್ಸ್‌ಗಳಿಂದ 49.68ರ ಬ್ಯಾಟಿಂಗ್ ಸರಾಸರಿಯಲ್ಲಿ 6,707 ರನ್‌ ಬಾರಿಸಿದ್ದಾರೆ. ಇದರಲ್ಲಿ 20 ಶತಕ ಹಾಗೂ 31 ಅರ್ಧಶತಕಗಳು ಸೇರಿವೆ. ವಿರಾಟ್‌ ತವ​ರಿ​ನ ಟೆಸ್ಟ್‌​ನಲ್ಲಿ 4000 ರನ್‌ ಪೂರ್ತಿ​ಗೊ​ಳಿ​ಸಿದ ಭಾರ​ತದ 5ನೇ ಬ್ಯಾಟರ್‌ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಮೊದಲು ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಸುನಿಲ್ ಗವಾಸ್ಕರ್ ಹಾಗೂ ವಿರೇಂದ್ರ ಸೆಹ್ವಾಗ್, ತವರಿನಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 4000+ ರನ್ ಬಾರಿಸಿದ್ದಾರೆ.
ವಿರಾಟ್ ಕೊಹ್ಲ
Exit mobile version