SportsKannada | ಸ್ಪೋರ್ಟ್ಸ್ ಕನ್ನಡ

ಇಂದು ಭಾರತ – ದಕ್ಷಿಣ ಆಫ್ರಿಕಾ ನಡುವೆ 2 ನೇ ಟಿ20 ಕದನ

ಇಂದು ಭಾರತ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕಾ ನಡುವೆ 2 ನೇ ಟಿ20 ಹೋರಾಟಕ್ಕೆ ಮೊಹಾಲಿಯ ಪಿಸಿಎ- ಐಎಸ್ ಬಿಂದ್ರಾ ಸ್ಟೇಡಿಯಂ ಸಜ್ಜುಗೊಂಡಿದ್ದು 2 ತಂಡಗಳು ಗೆಲ್ಲಲು ಕಠಿಣ ಅಭ್ಯಾಸ ನೆಡೆಸಿವೆ.

ಮೊದಲ ಪಂದ್ಯ ಒಂದೂ ಎಸೆತ ಕಾಣದೆ ಮಳೆಯಿಂದಾಗಿ ರದ್ದುಗೊಂಡಿತ್ತು. ಭಾರತ ಇನ್ನುಳಿದ 2 ಪಂದ್ಯಗಳನ್ನು ಗೆದ್ದು ಕ್ಲೀನ್ ಸ್ವೀಪ್ ಸಾಧಿಸುವ ವಿಶ್ವಾಸದಲ್ಲಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಗೆಲುವಿನ ಆರಂಭ ಪಡೆಯುವ ತವಕ ಉಭಯ ತಂಡಗಳದ್ದಾಗಿದೆ.

ತಂಡದಲ್ಲಿ ಕಾಯಂ ಸ್ಥಾನಕ್ಕಾಗಿ ರಿಷಬ್ ಪಂತ್ ಹೋರಾಟ :ಧೋನಿ ಅನುಪಸ್ಥಿತಿಯಲ್ಲಿ ಮುಂಬರುವ ಟಿ20 ವಿಶ್ವಕಪ್‌ಗೆ ಆಯ್ಕೆಯಾಗಬೇಕಾದರೆ ರಿಷಭ್‌ ಪಂತ್‌ಗೆ ಉತ್ತಮ ನಿರ್ವಹಣೆ ನೀಡಲು ಇದೊಂದು ಉತ್ತಮ ಅವಕಾಶವಾಗಿದೆ. ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡದಲ್ಲಿ ಸ್ಥಾನ ಕಾಯಂ ಮಾಡಿಕೊಳ್ಳಬೇಕು,ಇಲ್ಲವಾದಲ್ಲಿ ಟಿ20 ವಿಶ್ವಕಪ್ ಗೆ ಬೇರೊಬ್ಬ ಆಟಗಾರ ಆಯ್ಕೆ ಆಗುವ ಸಂಭವ ಇದೆ.

ವರುಣನ ಅಡ್ಡಿ ಇಲ್ಲ: ಮೊಹಾಲಿಯಲ್ಲಿ ಕಳೆದ 2 ದಿನಗಳಿಂದ 30 ಡಿಗ್ರಿ ಉಷ್ಣಾಂಶ ಇದ್ದು ಮಳೆ ಬರುವ ಯಾವುದೇ ಸೂಚನೆಯಿಲ್ಲ.

ಇನ್ನೊಂದು ಮೈಲಿಗಲ್ಲಿನತ್ತ ವಿರಾಟ್ : ವಿರಾಟ್ ಕೊಹ್ಲಿ ಟಿ20 ಮಾದರಿಯಲ್ಲಿ ಅತಿಹೆಚ್ಚು ರನ್ ಗಳಿಸಲು ಇನ್ನು ಕೇವಲ 53 ರನ್ ಗಳ ಅವಶ್ಯಕತೆ ಇದೆ. ಪ್ರಸ್ತುತ ರೋಹಿತ್ ಶರ್ಮ ಅಗ್ರಸ್ಥಾನದಲ್ಲಿ ಇದುವರೆಗೂ 96 ಪಂದ್ಯಗಳನ್ನು ಆಡಿದ್ದು 2422 ರನ್ ಗಳಿಸಿದ್ದಾರೆ.

– ಪ್ರೀತಮ್ ಹೆಬ್ಬಾರ್

Exit mobile version